ಶನಿವಾರ, ಫೆಬ್ರವರಿ 25, 2023

ಗೆಳತಿಗೊಂದು ಉತ್ತರ (ಕವಿತೆ) - ಖಾಶೀ.

ಅಹುದಹುದು
ಗೆಳತಿ.....
ನಿನ್ನಂತರಾಳದ
ದಣಿಯು
ನನ್ನ ಮನದೊಳಗೆ
ನುಸುಳಿ.....
ನೀನನ್ನ ಕರೆಯುವ
ಪರಿಯು ಇರಿಯುತಿಹುದು.

ನನ್ನ ಬರುವಿಕೆಗಾಗಿ
ಪರಿತಪಿಪ
ನಿನ್ನ ತನುಮನವ
ನಾನೆಂತು 
ಸಂತೈಪೆನೆಂಬ
ಕೊರಗಲಿಹೆನೂ.

ನನ್ನ ಬದುಕಿನ
ಹಾದಿ ,ಸವೆಸವೆದು
ಹೋಗುವ ಮುನ್ನ
ಬಂದು ಸೇರುವೆ ನಾನು
ಆ ನಿನ್ನ 
ಹೃದಯದರಮನೆಯನು.

ಬಿಟ್ಟುಬಿಡು
ನಿನ್ನೆಲ್ಲ ಹಮ್ಮುಬಿಮ್ಮುಗಳ
ಚಿಂತೆ ಚೀತ್ಕಾರಗಳ
ತೊರೆದುಬಿಡು
ನಿನ್ನ ಸಕಲ
ದು:ಖ ದುಮ್ಮಾನಗಳ.

ನಾನಿರಲು ನಿನ್ನೊಡನೆ
ಬೇರೇನು ಬೇಕಿನ್ನು
ನಾಕವೇ ಬಂದಂತೆ
ನಿನ್ನೆದುರಿಗೇ.
-ಖಾಶೀ, (ಖಾದ್ರಿ ವೆಂಕಟ ಶ್ರೀನಿವಾಸನ್).


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬೆಳಗು...

ಕವನ     ಬೆಳಗು ಬೆಳಗು ಬಾ ಬೆಳಕು ಬೆಳದಿಂಗಳ ಬೆಳಕು ಚೆಲ್ಲುತ ರಂಗು ರಂಗಿನ ಕಾಮನಬಿಲ್ಲಿನಂತೆ ಮಿನು ಮಿನುಗುವ ಬೆಳ್ಳಿಚುಕ್ಕಿಯಂತೆ ರಂಗು ರಂಗಿನ ರಂಗೋಲಿಯಂತ...