ಶನಿವಾರ, ಫೆಬ್ರವರಿ 25, 2023

ಮಾರಬೇಡಿ ಮತಗಳ (ಕವಿತೆ) - ಶ್ರೀಮತಿ ಸುಲೋಚನಾ ಮಾಲಿಪಾಟೀಲ.

ಸಮಾಜಕ್ಕೆ ಸಹಕರಿಸಿ
ಸಮರ್ಪಿಸುವ ಸವಲತ್ತುಗಳಲ್ಲಿ
ಅಭ್ಯರ್ಥೀಯ ದಿಶೆಯ
ಅರಿತುಕೊಳ್ಳಿ 
ನಿಮ್ಮ ಮತ ಚಲಾವಣೆಯ
ಹಕ್ಕಿನ ಮೌಲ್ಯ ಎಷ್ಟಿಹುದಿಲ್ಲಿ 
ತಿಳಿದುಕೊಳ್ಳಿ

ಪ್ರಜೆಗಳೇ ಮೊಡಿಗೆ ಮರುಳಾಗಿ
ಮಾರಿಕೊಳ್ಳಬೇಡಿ ಮತಗಳ
ದೂರವಿರಿ ದುರ್ನಡತೆಯ ಪರ
ಚುನಾವಣೆಯ ನಂತರ ನಿಮ್ಮನ್ನು
ಐದು ವರ್ಷ ನೋಡದವರು
ಮತ ಬೇಡಿಕೆಯನಿಟ್ಟು 
ಆಮೀಶ ಒಡ್ಡುವರು 

ಸಂವಿಧಾನವ ಕಟ್ಟಿ
ಸಮಪಾಲು ಸಮಬಾಳೆಂಬಲ್ಲಿ
ಸಮಾನತೆಯ ತಂದ
ಬಸವ ಅಂಬೇಡ್ಕರರ 
ವಿಚಾರಧಾರೆಯ ಮರೆತು
ಲೆಕ್ಕ ಹಾಕುತಿಹರು 
ತಮ್ಮ ತಮ್ಮ ಪಂಗಡಗಳ 
 
ಕಾಯಕಕ್ಕೆ ಬೆಲೆ ಕೊಡದೆ
ಆಗಿಹೋದರು ಸೋಮೆರಿಗಳು
ಸತ್ಯದ ನಡೆ ನುಡಿಮರೆತು
ಕೈವಶವಾಗಿದೆ ದುಷ್ಟ ದಲ್ಲಾಳಿಗಳ
ಬಡವರ ಹಿತ ದೃಷ್ಟಿಕೋನದಲ್ಲಿ
ಇರದ ಫಲಾಪೆಕ್ಷೆಯ ಕಾರ್ಯಗಳ

ಒಂದು ದಿನದ ಚಲಾವಣೆಗೆ
ಮಾರಬೇಡಿ ಮತಗಳ 
ಜನರ ಮನಗಳ ಮೆಚ್ಚಿಸಲು
ಹಂಚುವರು ಸೀರೆ ವಸ್ತುಗಳ
ಕೈಯಲ್ಲಿ ಸಾವಿರ ಸಾವಿರ
ಹಣವನಿತ್ತು ನಮಿಸುವರು ಪಾದಂಗಳ
 
ಕೇಳಿ ನಾಗರಿಕರೇ ಎಚ್ಚರ
ಬಹಮೌಲ್ಯವಾದ ನಿಮ್ಮ ಮತ
ಹಾಕಿರಿ ಅರಿವಿನಲಿ
ಮುಂದಿನ ಐದು ವರ್ಷ
ನೀವು ಒಪ್ಪಿದ ಸರಕಾರವಿರಲಿ
ನಿಮ್ಮ ಬೇಕುಬೇಡಿಕೆ ಪೂರೈಸುವಲ್ಲಿ

- ಶ್ರೀಮತಿ ಸುಲೋಚನಾ ಮಾಲಿಪಾಟೀಲ, ಧಾರವಾಡ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...