ಮಂಗಳವಾರ, ಫೆಬ್ರವರಿ 21, 2023

ಇಬ್ಬನಿ ಓಕಳಿ (ಕವಿತೆ) - ಶ್ರೀಮತಿ ಎಸ್. ಎಂ. ಬಳ್ಳಾರಿ.

ಚುಮುಚುಮು ಚುಮುಕುವ ಚಳಿಯಲ್ಲಿ
ನೇಸರನು ಪ್ರವೇಶಿಸುವ ವೇಳೆಯಲ್ಲಿ
ಹಬೆಯು ಕರಗಿ ಭಾಷ್ಪ ರೂಪ ತಾಳಿ
ಎತ್ತ ನೋಡಿದರತ್ತ ಇಬ್ಬನಿ ಓಕಳಿ

ಮಂಜು ಹೂಗಳ ಮೇಲೆ ಮುತ್ತಿನ ಇಬ್ಬನಿ
ಮಂದ ಮುಡಿಯುಟ್ಟು ನಾಚಿ ನಿಂತಂತೆ ರಾಗಿಣಿ
ನಲ್ಲನ ಮನಸೂರೆಗೊಳ್ಳಲು ಸಜ್ಜಾಗಿದೆ
ಇಲ್ಲವೇ ಮಾಧವನ ಮುಡಿಗೇರಲು ಮುಂದಾಗಿದೆ

ಮುಂಜಾವಿನ ಮಂಜಿನ ಮುಸುಕಿನಲಿ
ಹಸಿರೆಲೆ ಹಾಸಿಗೆ ಹಂದರದಲಿ
ಇಬ್ಬನಿ ಮುತ್ತಿನ ತೋರಣ ಕಟ್ಟಿದೆ 
ಮುತ್ತೆಂದು ಮುಟ್ಟಲು ಹೋದರೆ ಕರಗಿದೆ 

ಶರವೇಗದಿ ಜಾರಿದ ಇಬ್ಬನಿಯು ಮಂದ 
ಧರೆಯನು ತವಕದಿ ಸೇರುವ ಬಂಧ
ಚಿಗುರೆಲೆ ಹುಲ್ಲಲ್ಲಿ ಹರಡಿದ ಅಂದ 
ಪ್ರಕೃತಿ ರಮ್ಯತೆ ನೋಡಲು ಚೆಂದ

- ಶ್ರೀಮತಿ ಎಸ್. ಎಂ. ಬಳ್ಳಾರಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬೆಳಗು...

ಕವನ     ಬೆಳಗು ಬೆಳಗು ಬಾ ಬೆಳಕು ಬೆಳದಿಂಗಳ ಬೆಳಕು ಚೆಲ್ಲುತ ರಂಗು ರಂಗಿನ ಕಾಮನಬಿಲ್ಲಿನಂತೆ ಮಿನು ಮಿನುಗುವ ಬೆಳ್ಳಿಚುಕ್ಕಿಯಂತೆ ರಂಗು ರಂಗಿನ ರಂಗೋಲಿಯಂತ...