ಗುರುವಾರ, ಮಾರ್ಚ್ 30, 2023

ಸೃಷ್ಟಿಯೊಳಗೆ ವಿಸ್ಮಯ ಶಕ್ತಿ (ಕವಿತೆ) - ಶ್ರೀ ವೆಂಕಟೇಶ ಬಡಿಗೇರ್.

ಕಣ್ತುಂಬ ಪ್ರೀತಿಯ ಮಮತೆಯ ಹಣತೆಗಳು
ಮೋಡದ ತೆರೆ ಮರೆಯಲಿ
ಗೋಚರಗೊಂಡುಮರೆಯಾದ ಅಗೋಚರ ಚಂದ್ರ ನನ್ನಪ್ಪ
ಕ್ಷಣಿಕ ಸಂಬಂಧ ನಾವು ಮಣ್ಣ ಕುಸುಮಗಳು!!

ದ್ವೇಷ ಅಸೂಯೆ ನಾನೆಂಬ
ಕಿಚ್ಚು ಕೊಚ್ಚು
ಎದೆಯ ಬೆಂಕಿ ನಂದಿಸು
ಸರ್ವರ ಉಸಿರೊಳಗೆ
ಹೊತ್ತಿಸಿಬಿಡು ಜ್ಞಾನಜ್ಯೋತಿಗಳು!!


 ಸೃಷ್ಟಿಯೊಳಗೆ ವಿಸ್ಮಯ ಶಕ್ತಿ
ಮಾನವ ನಡೆದಾಡುವ ದೇವರು
ಕಾರುಣ್ಯ ಚಿನ್ಮಯಿ
ನಗುವ ನಕ್ಷತ್ರಪುಂಜಗಳಲಿ
ಮಿಂಚೊಂದು ಜಾರಿತು
ಮಳೆ ಹನಿ ಹನಿಯಾಗಿ ಧರೆಗೆ ಇಳಿಯಿತು!!

ಹಸಿರು ಚಿಗುರೊಡೆದು ನಗುವ ಹೂವು
ಕಾಯಿ ಹಣ್ಣಾಗಿ ಸಿಹಿಯಾಗೋಣ
ಹೊಂಬಣ್ಣ ಮೂಡಿಬರಲಿ
ಬದುಕ ಬಣ್ಣದೊಳಗೆ
ಹೂ ಬಾಡದರೊಳಗೆ ಒಮ್ಮೊಮ್ಮೆ ಸುಂದರವಾಗಿ ನಕ್ಕು ಬಿಡು!!

ಸೃಷ್ಟಿ ಚೈತನ್ಯ ಗುಡಿಯೊಳಗೆ 
ದಿವ್ಯ ಜ್ಯೋತಿ ಬೆಳಗಲಿ
ತೇಲಿ ಬರುವ ಮೋಡದಲಿ
ಹಕ್ಕಿಯಂತೆ ಹಾರೋಣ
ಬೇಲಿ ಬಳ್ಳಿಯಲಿ ನಗುವ ಚಿಕ್ಕ ಚಿಕ್ಕ ಹೂವಾಗೋಣ!!
- ಶ್ರೀ ವೆಂಕಟೇಶ ಬಡಿಗೇರ್, ಜಿಲ್ಲಾಧ್ಯಕ್ಷರು
 ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್, ವಿಜಯನಗರ ಜಿಲ್ಲಾ ಘಟಕ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...