ಗುರುವಾರ, ಮಾರ್ಚ್ 30, 2023

ಶ್ರೀ ರಾಮನವಮಿ (ಕವಿತೆ) - ಶಾರದ ದೇವರಾಜ್ ಎ ಮಲ್ಲಾಪುರ.

 ರಾಮ  ಬಾ....
 ಶ್ರೀರಾಮ  ಬಾ....
 ರಾಮ  ಬಾ....
 ರಘುರಾಮ  ಬಾ.... l2l

   ಕೌಸಲ್ಯೆಯಾ.... 
ಸುತನೆ ನೀ ಬಾರೋ
 ದಶರಥನಾ....
 ನಂದ ಕಿಶೋರ ನೀ ಬಾರೋl2l

  ರಾಮ  ಬಾ....l2l

 ಭರತ ಲಕ್ಷ್ಮಣ ರಾ....
 ಪ್ರಿಯ ಅಗ್ರಜನೇ ಬಾರೋ....
 ರಾಮ ರಾಜ್ಯದಾ....
 ಶ್ರೀಹರಿ ಅವತಾರವೇ ನೀ ಬಾರೋl2l

 ರಾಮ ಬಾ....l2l

 ಸೀತಾದೇವಿಯಾ....
 ಜೀವನಾಡಿಯೇ ನೀ ಬಾರೋ....
 ಲವಕುಶ ರಾ....
 ಜನ್ಮದಾತನೇ ನೀ ಬಾರೋ....l2l

 ರಾಮ ಬಾ....l2l

 ಆಂಜನೇಯ ನಾ....
 ಪ್ರಿಯ ಜೀವವೇ ನೀ ಬಾರೋ....
 ವಾನರಾ   ಕುಲದಾ....
 ಶ್ರೇಷ್ಠ ದೈವವೇ ನೀ ಬಾರೋ....l2l

 ರಾಮ  ಬಾ....l2l

 ಸೀತಾಮಾತೆ ಯಾ....
 ಅಪಹರಿಸಿದಾ....
 ರಾವಣಸುರನಾ....
 ಸದೆಬಡಿದ....l2l

 ರಾಮ  ಬಾ....l2l

 ಸತ್ಯ ಧರ್ಮ ದಾ.... ನೆಲೆಯಾದೆ
 ನ್ಯಾಯನೀತಿಗೆ.... ನೀ ತಲೆಬಾಗಿದೆ
 ಭುವನದೊಳೆಲ್ಲಾ ....ಏಕಪತ್ನಿಸ್ತನಾದೆ
  ಧರೆಯ ಜನರೆಲ್ಲ ....ನಮಿಸುವವನಾದೆl2l

 ರಾಮ  ಬಾ....l2l

 ರಾಮನೆಂಬುವ ಭಕ್ತಿಯ ತುಂಬುತ
 ಹನುಮನೆಂಬುವ ಶಕ್ತಿಯ ಬೆರೆಸುತ
  ಲೋಕೋದ್ಧಾರಕ್ಕೆ ಸಹಿಸಿ ಶ್ರಮಿಸುತ
 ಭಕ್ತ ರೆಲ್ಲರನು ಹರಸಿ ಹಾರೈಸುತl2l

 ರಾಮ  ಬಾ....l2l
 - ಶಾರದ ದೇವರಾಜ್ 
 ಎ  ಮಲ್ಲಾಪುರ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬೆಳಗು...

ಕವನ     ಬೆಳಗು ಬೆಳಗು ಬಾ ಬೆಳಕು ಬೆಳದಿಂಗಳ ಬೆಳಕು ಚೆಲ್ಲುತ ರಂಗು ರಂಗಿನ ಕಾಮನಬಿಲ್ಲಿನಂತೆ ಮಿನು ಮಿನುಗುವ ಬೆಳ್ಳಿಚುಕ್ಕಿಯಂತೆ ರಂಗು ರಂಗಿನ ರಂಗೋಲಿಯಂತ...