ಗುರುವಾರ, ಮಾರ್ಚ್ 30, 2023

ನಾಗರೀಕತೆ (ಸಣ್ಣ ಕತೆ) - ಮಾಲತಿ ಮೇಲ್ಕೋಟೆ.

ಶಿಕ್ಷಕಿಯಾಗಿ ನನ್ನ ಮೊದಲ
ನೇಮಕಾತಿ ಕುಗ್ರಾಮವೊಂದಕ್ಕೆ
ಆದಾಗ ಮನೆಯಲ್ಲಿ ಬಹಳ
ವಿರೋಧವಿತ್ತು.ನನ್ನ ಹುಮ್ಮಸ್ಸನ್ನು ನೋಡಿ,ತಂದೆ-
ಯವರು ಆ ಗ್ರಾಮಕ್ಕೆ ೪ಕಿ.ಮೀ.
ದೂರದಲ್ಲಿದ್ದ ಸ್ವಲ್ಪ ದೊಡ್ಡ
ಹಳ್ಳಿಯೊಂದಕ್ಕೆ ನನ್ನ ಜೊತೆ
ಬಂದು,ಮನೆ ಮಾಡಿಕೊಟ್ಟು
೪ದಿನ ನನ್ನ ಜೊತೆಯಲ್ಲಿದ್ದು
ಹಿಂದಿರುಗಿದರು.ನಾನು ವಾಸ-
ವಾಗಿದ್ದ ಹಳ್ಳಿಯಿಂದ ಬೆಳಿಗ್ಗೆ
೯ಕ್ಕೆ,ಸಂಜೆ ನನ್ನ ಶಾಲೆಯಿದ್ದ
ಗ್ರಾಮದಿಂದ ೫-೩೦ಕ್ಕೆ ವಾಪಸ್
ಬರಲು ಬಸ್ ಅನುಕೂಲವಿತ್ತು.
೧೫-೨೦ ನಿಮಿಷದ ಪ್ರಯಾಣ-
ವಷ್ಟೇ.ಕಿಟಕಿಗೆ ಮುಖವಿಟ್ಟು
ಪ್ರಕೃತಿ ಸೌಂದರ್ಯವನ್ನು
ಸವಿಯುತ್ತಾ ಸಮಯ ಕಳೆ-
ಯುವುದೇ ತಿಳಿಯುತ್ತಿರಲಿಲ್ಲ.

         ಅರ್ಧ ದಾರಿಯಲ್ಲಿ ಒಂದು
ಸಾರಾಯಿ ಅಂಗಡಿಯಿತ್ತು.ಸಂಜೆ
ವಾಪಸ್ ಬರುವಾಗ ೭-೮ ಜನ
ಹಳ್ಳಿಗರು ಅಲ್ಲಿರುತ್ತಿದ್ದರು.
ನನಗಂತೂ ಅವರನ್ನು ನೋಡಿದರೇ ಕೋಪ ಬರುತ್ತಿತ್ತು.

          ೪ ತಿಂಗಳವರೆಗೆ ಎಲ್ಲವೂ
ಸುಸೂತ್ರವಾಗಿತ್ತು..ಒಂದು 
ದಿನ ಸಂಜೆ ಬಸ್ ಬರಲೇ ಇಲ್ಲ.
ಶಾಲೆಯಿಂದ ನನ್ನ ಹೊರತು
ಇನ್ನಿಬ್ಬರು ಹುಡುಗರು ಆ ಬಸ್
ಹತ್ತಿ ನಾನು ವಾಸವಿದ್ದ ಗ್ರಾಮಕ್ಕೆ
ಹೋಗುತ್ತಿದ್ದೆವು.ಆರರವರೆಗೂ
ಕಾದು ಆ ಹುಡುಗರೊಡನೆ
ನಡೆಯುತ್ತಾ ಹೊರಟೆ.ನಡೆದು
ಹೋದರೆ ಒಂದು ಗಂಟೆಯ
ದಾರಿ.ಕತ್ತಲಾವರಿಸುತ್ತಿತ್ತು.

      ಅರ್ಧ ದಾರಿ ಹೋಗುತ್ತಿ-
ದ್ದಂತೆ ಸಾರಾಯಿ ಅಂಗಡಿ,
ಮುಂದಿದ್ದ ಅದೇ ಏಳೆಂಟು ಜನ
ಕಂಡರು.ಅಷ್ಟು ದೂರದಿಂದಲೇ
ನನಗೆ ಭಯ ಶುರುವಾಯ್ತು.
ನನ್ನ ಜೊತೆಯಿದ್ದ ಹುಡುಗರು
ಏಳೆಂಟು ವರ್ಷದವರು.ಬೇರೆ
ದಾರಿಯಿಲ್ಲದೆ ಧೈರ್ಯ 
ಒಗ್ಗೂಡಿಸಿಕೊಂಡು ನಡೆದೆ.
ಅವರೆಲ್ಲರೂ ಒಟ್ಟಾಗಿ ನನ್ನತ್ತ
ಬರತೊಡಗಿದರು.ನನಗಂತೂ
ಜಂಘಾಬಲ ಉಡುಗಿಹೋಯ್ತು
ಕರೆದರೆ ಓ ಅನ್ನಲೂ ಯಾರೂ
ಇಲ್ಲದಂಥ ನಿರ್ಜನ ಪ್ರದೇಶ.
        
   ‌‌.       ಎಲ್ಲರೂ ಒಟ್ಟಾಗಿ ಕೈ
ಮುಗಿಯುತ್ತಾ,"ಅಡ್ಬಿದ್ದೆ 
ಮ್ಯಾಡಮ್ಮೋರೆ,ನಮ್ ಐಕ್ಳಿಗೆ
ಪಾಠ ಏಳ್ಕೊಡೋ ದ್ಯಾವ್ರು
ನೀವು"ಎಂದರು.ಸ್ವಲ್ಪ ಧೈರ್ಯ
ಬಂತು."ಈ ದಿನ ಬಸ್ ಬಂದಿಲ್ವ"
ಎಂದ ಒಬ್ಬಾತ.ನಾನು ಇಲ್ಲವೆಂದು ತಲೆಯಾಡಿಸಿದೆ.
"ನಿಮ್ ಅಳ್ಳೀವರ್ಗೂ ಬುಟ್
ಬರಾದಾ ಮ್ಯಾಡಮ್ಮೋರೆ"ಎಂದ
ಮತ್ತೊಬ್ಬ.ನಾನು ಬೇಡವೆಂದೆ.
ನನ್ನ ಜೊತೆಯಿದ್ದ ಹುಡುಗರಿಗೆ
"ಮ್ಯಾಡಮ್ಮೋರ್ನ ಜ್ವಾಪಾನ್ವಾಗಿ
ಕರ್ಕೊಂಡೋಗ್ರೋ"ಎಂದು
ತಾಕೀತು ಮಾಡಿ ಮತ್ತೆ ನಡು
ಬಾಗಿ ಕೈಮುಗಿದರು.ಅನಾಗರಿಕ-
ರಂತೆ ಕಂಡ ಅವರಲ್ಲಿದ್ದ ಒಳ್ಳೆಯತನವನ್ನು ಕಂಡು
ಮನಸ್ಸು ಮೂಕವಾಯಿತು.
- ಮಾಲತಿ ಮೇಲ್ಕೋಟೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...