ಮಂಗಳವಾರ, ಮಾರ್ಚ್ 21, 2023

ಯುಗಾದಿ ಹಬ್ಬ (ಕವಿತೆ) - ಶಾರದ ದೇವರಾಜ್ ಎ, ಮಲ್ಲಾಪುರ.

ಬಂತು ಬಂತು ಯುಗಾದಿ ಹಬ್ಬ
 ಸಂಭ್ರಮ ಸಂತಸ ತರುವ ಹಬ್ಬ
 ಬಗೆ ಬಗೆ  ಭೋಜ್ಯವ ಸವಿಯುವ ಹಬ್ಬ
 ರಂಗು ರಂಗಿನ ತೋರಣದ ಹಬ್ಬl

 ಎಣ್ಣೆ ಮಜ್ಜನವ ಮಾಡುವ ಹಬ್ಬ
 ವಸಂತ ಕಾಲದಿ  ಮೂಡುವ ಹಬ್ಬ
 ಹೊಸತನದಲಿ ಮನ ಸೆಳೆಯುವ ಹಬ್ಬ
 ಬೇವು ಬೆಲ್ಲವ ತಿನ್ನುವ ಹಬ್ಬl

l ಬಂತು ಬಂತು ಯುಗಾದಿ ಹಬ್ಬl

 ಭೂತಾಯಿಗೆ  ಹೊನ್ನಾರು ಹೂಡುವ ಹಬ್ಬ
 ದನ ಕರುಗಳಿಗೆ ಸಿಂಗಾರದ ಹಬ್ಬ
  ಬಿತ್ತಿ ಬೆಳೆಯುವ ಭೂತಾಯಿಗೆ  ನಮಿಸುತ
 ಸಾರ್ಥಕಗೊಳಿಸುವ ಸಂಭ್ರಮದ ಹಬ್ಬl

l ಬಂತು ಬಂತು ಯುಗಾದಿ ಹಬ್ಬl

 ಗಿಡ ಮರಗಳಲಿ ಚಿಗುರಿನ ಹಬ್ಬ
 ಮನೆಮನಗಳಲಿ ನಲಿಯುವ ಹಬ್ಬ
 ಪ್ರಕೃತಿಯೇ   ಪಳ ಪಳ  ಹೊಳೆಯುವ ಹಬ್ಬ
 ಹರಸಿ ಹಾರೈಸುವ ಹರುಷದ ಹಬ್ಬl

l ಬಂತು ಬಂತು ಯುಗಾದಿ ಹಬ್ಬl

 ಹೊಳೆಯುವ ಚಂದ್ರನ ನೋಡುವ ಹಬ್ಬ
 ಬಾನಲಿ  ಬೆರಗನು ತರುವ ಹಬ್ಬ
 ಸಿಹಿ ಕಹಿ ಸಮರುಚಿ ತೋರುವ ಹಬ್ಬ
  ವರುಷಕೊಂದೆ ಯುಗಾದಿ ಹಬ್ಬl

l ಬಂತು ಬಂತು ಯುಗಾದಿ ಹಬ್ಬl

 ಸಂಸ್ಕೃತಿ ಸಂಯಮವ ತೋರುವ ಹಬ್ಬ
 ಸುಂದರ ಬದುಕಲಿ ಸಂತಸದ ಹಬ್ಬ
 ಸಡಗರ  ಸಂತೃಪ್ತಿ ಕೊಡುವ ಹಬ್ಬ
 ಹೊಳೆಯುವ ಮನಸಿಗೆ ಹೊಸದಾದ ಹಬ್ಬl
l ಬಂತು ಬಂತು ಯುಗಾದಿ ಹಬ್ಬ

- ಶಾರದ ದೇವರಾಜ್
 ಎ, ಮಲ್ಲಾಪುರ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...