ಎರಡು ದಿನಗಳ ಕೌಶಲ್ಯ ತರಬೇತಿಯನ್ನು ಉತ್ತರ ವಿಶ್ವವಿದ್ಯಾಲಯದ ವತಿಯಿಂದ ನೈಪುಣ್ಯ ಕೌಶಲ್ಯ ಅಭಿವೃದ್ಧಿ ಕೇಂದ್ರದ ಉದ್ಘಾಟನೆಯನ್ನು ಮಾನ್ಯ ಕುಲಪತಿಗಳಾದ ನಿರಂಜನ ವಾನಳ್ಳಿ ಅವರು ಉದ್ಘಾಟನೆ ಮಾಡಿ ಮಾತನಾಡುತ್ತಾ ಈ ಆಧುನಿಕ ಕಾಲಘಟ್ಟದಲ್ಲಿ ತುಂಬಾ ಯುವಜನರು ಕೆಲಸವಿಲ್ಲದೆ ಅಲೆಯುತ್ತಿದ್ದಾರೆ ಅವರಲ್ಲಿ ಇರುವ ಕೌಶಲ್ಯದ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಈ ಕೌಶಲ್ಯ ಅಭಿವೃದ್ಧಿ ಕೇಂದ್ರ ಪ್ರಮುಖ ಪಾತ್ರವನ್ನು ವಹಿಸಲಿದೆ ಇದರ ಸದುಪಯೋಗವನ್ನು ಎಲ್ಲಾ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಪ್ರತಿಯೊಬ್ಬರಲ್ಲೂ ಅಗಾಧವಾದ ಶಕ್ತಿ ಇರುತ್ತದೆ ಆ ಕೆಲಸವನ್ನು ಹೊರತೆಗೆಯುವ ಕೆಲಸವನ್ನು ನಾವು ಮಾಡಬೇಕು ತುಂಬಾ ಜನಕ್ಕೆ ಇಂಗ್ಲಿಷ್ ಎಂದರೆ ಭಯ ಇಂಗ್ಲಿಷ್ ಬರದೇ ಇರುವ ಒಂದೇ ಒಂದು ಕಾರಣಕ್ಕೆ ಸಂದರ್ಶನದಲ್ಲಿ ವಿಫಲರಾಗುತ್ತಿರುತ್ತಾರೆ. ಕೆಲಸ ಸಿಗದೇ ಆಗುತ್ತಿರುತ್ತದೆ.
ಧೈರ್ಯದಿಂದ ಮುನ್ನುಗ್ಗಿದರೆ ಕಲಿತರೆ ಎಲ್ಲವೂ ಸಾಧ್ಯವಾಗುತ್ತದೆ ಈ ಕೇಂದ್ರದಿಂದ ಇಂಗ್ಲಿಷ್ನ್ನು ಕಲಿಸುವ ಕೆಲಸವನ್ನು ಮಾಡಲಾಗುತ್ತದೆ ಎರಡು ದಿನಗಳ ಕಾಲ ಮೈಸೂರಿನ ಫೋಕಸ್ ಅಕಾಡೆಮಿಯಿಂದ ಬಂದಿರುವ ಮುರಳಿಧರನ್ ಮತ್ತು ಉಮೇಶ್ ಅವರು ನಿಮಗೆ ಕೌಶಲ್ಯವನ್ನು ಅಭಿವೃದ್ಧಿಪಡಿಸಿಕೊಳ್ಳುವ ನಿಟ್ಟಿನಲ್ಲಿ ತರಬೇತಿಯನ್ನು ಕೊಡಲಿದ್ದಾರೆ ಅದನ್ನು ಸದುಪಯೋಗ ಪಡಿಸಿಕೊಳ್ಳಿ ಎಂದರು. ಮೌಲ್ಯಮಾಪನ ಕುಲ ಸಚಿವರಾದ ಡಾ. ಡಿ ಡಾಮಿನಿಕ್ ಅವರು ಮಾತನಾಡುತ್ತಾ ವಚನ ಚಳುವಳಿ ಪ್ರಮುಖವಾಗಿ ಕೌಶಲ್ಯವನ್ನು ಅಭಿವೃದ್ಧಿಪಡಿಸುವ ಗೌರವಿಸುವ ಕೆಲಸವನ್ನು ಮಾಡುತ್ತಲೇ ಬಂದಿದೆ ಅವರು ಮಾಡುವ ಕಾಯಕವನ್ನು ಶ್ರದ್ಧೆಯಿಂದ ನಿಷ್ಠಯಿಂದ ಮಾಡುವುದನ್ನು ವಚನ ಚಳುವಳಿ ಎತ್ತಿ ಹಿಡಿಯುತ್ತದೆ ನಮ್ಮಲ್ಲಿರುವ ಭಯಗಳನ್ನ ವರದಬ್ಬಿದರೆ ಮುನ್ನಡೆಯು ಸಾಧ್ಯವಾಗುತ್ತದೆ
ಕಾರ್ಯಕ್ರಮಕ್ಕೆ ಸ್ವಾಗತವನ್ನು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ನಿರ್ದೇಶಕರಾದ ಡಾ.ಡಿ ಕುಮುದಾ ಅವರು ಮಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ನಂದೀಶ್ ಅವರು ನೆರವೇರಿಸಿದರು. ಹಾಗೆಯೇ ವಂದನಾರ್ಪಣೆಯನ್ನು ವಾಣಿಜ್ಯಶಾಸ್ತ್ರ ವಿಭಾಗದ ಮಮತಾ ಅವರು ಮಾಡಿದರು. ಕಾರ್ಯಕ್ರಮದ ಸಂಘಟನೆಯನ್ನು ಅಚ್ಚುಕಟ್ಟಾಗಿ ಇಂಗ್ಲಿಷ್ ವಿಭಾಗದ ಬೀನ ಅವರು ನೆರವೇರಿಸಿದ್ದರು. ಮೊದಲನೆ ದಿನ ಕಲಾನಿಕಾಯದ ವಿದ್ಯಾರ್ಥಿ ಗಳಿಗೆ ತರಬೇತಿ ಕೊಡಲಾಯಿತು. ಎರಡನೆ ದಿನ ವೇಳೆ ವಿಜ್ಞಾನ ವಿದ್ಯಾರ್ಥಿಗಳಿಗೆ ತರಬೇತಿಯನ್ನು ಕೊಡಲಾಯಿತು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ