ಮಂಗಳವಾರ, ಮಾರ್ಚ್ 21, 2023

ಅಪ್ಪನ ಪ್ರಪಂಚ (ಕವಿತೆ) - ಕೆ . ಅರ್ಪಿತ.

ಹೆಗಲ ಮೇಲೆ ಕೂರಿಸಿಕೊಂಡು ಅವನು ಕಾಣದ ಜಗತ್ತನ್ನು ಮಕ್ಕಳಿಗೆ ತೋರಿಸಿದನು,
ಎಷ್ಟೇ ಕಷ್ಟಗಳಿದ್ದರೂ ತೋರಿಸಿಕೊಳ್ಳದೆ ಮಕ್ಕಳ ಜೀವನಕ್ಕಾಗಿ ದಣಿದನು,

ತಾಯಿಯನ್ನು ಮಾತ್ರ ಹೊಗಳುವ ಮಕ್ಕಳಿಗೆ ತಂದೆಯ ಬೆವರ ಹನಿ ಕಾಣದಾಯಿತು,
 ಕುಟುಂಬದ ಜವಾಬ್ದಾರಿಗಾಗಿ ಅವನ ಅರ್ಧ ಆಯಸ್ಸು ಅಲ್ಲಿಯೇ ಕಳೆದು ಹೋಯಿತು,

ಮುಪ್ಪಿನ ಕಾಲದಲ್ಲಿ ಮಕ್ಕಳು ನೆರವಾಗುವರು ಎಂದು ತಂದೆ ನಂಬಿದನು,
ಅವನು ಮಾಡಿದ ಆಸ್ತಿ ಮಕ್ಕಳಿಗೆ ಬೇಕಾಯಿತು ಆದರೆ ಅವನು ಯಾರಿಗೂ ಬೇಡವಾದನು,

ಯಾರಿಗೂ ಭಾರವಾಗಬಾರದೆಂದು ಮಕ್ಕಳು ವೃದ್ದಾಶ್ರಮಕ್ಕೆ ಸೇರಿಸಿದರು,
ಅದೇ ಸ್ಥಿತಿ ಅವರಿಗೂ ಬರಬಹುದೆನ್ನೂದ ಮರೆತಿರುವರು,

ಮಕ್ಕಳಿಗಾಗಿ ಕಟ್ಟಿದ ಕನಸಿನ ಕೋಟೆಯು  ಕನಸಾಗಿಯೇ ಉಳಿಯಿತು,
ಏನು ನಿರೀಕ್ಷೆಗಳಿಲ್ಲದ ತ್ಯಾಗ ಅವನಿಗೆ ಮುಳುವಾಯಿತು
ಇಲ್ಲಿಯೂ ತಂದೆಯ ನೋವು ಯಾರಿಗೂ ಕಾಣದಾಯಿತು,

ದೇವರಿಗಿಂತ ಮಿಗಿಲು ಸರಿಸಾಟಿ ಇಲ್ಲ ನಿಮಗ್ಯಾರು.
ನನ್ನಪ್ಪ ನನ್ನ ಪ್ರಪಂಚ.
- ಕೆ . ಅರ್ಪಿತ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...