ಮಂಗಳವಾರ, ಮಾರ್ಚ್ 21, 2023

ತಿಮ್ಮಾಪುರ ಹನುಮ ದೇವರ ಒಂದು ಅವಲೋಕನ (ಕೃತಿ ಪರಿಚಯ) - ದಯಾನಂದ ಪಾಟೀಲ.


ಬಾಗಲಕೋಟೆ ಜಿಲ್ಲೆ ಹುನುಗುಂದ ತಾಲೂಕಿನ ಲೇಖಕರು ಹಾಗೂ ಪತ್ರಕರ್ತರಾದ ಜಗದೀಶ ಹದ್ಲಿ ಅವರ ಶ್ರೀ ಮಾರುತೇಶ್ವರ ಮಹಿಮೆ  ಪುಸ್ತಕವನ್ನು ಪ್ರಕಟಿಸಿದ್ದಾರೆ ಏಕೆಂದರೆ  ಲೇಖಕರ ಊರಾದ ತಿಮ್ಮಾಪುರ ಹನುಮ ದೇವರ ಅಪರೂಪದ ಪವಾಡಗಳನ್ನು ಪುಸ್ತಕದಲ್ಲಿ ವಿಶ್ಲೇಷಣೆ ಮಾಡಿದ್ದಾರೆ,
ಪರಮ ಪಾವನೆಯಾದ ಮಾತೆ ಅಂಜನಾದೇವಿ ಹನುಮಂತನ ಅಷ್ಟಸಿದ್ದಿಗಳು ಸಿದ್ದಿಸಲಿ ನವ  ನಿಧಿಗಳ ದಾಸನಾಗು ಎಂಬ ವರವನ್ನು ಕೊಡುತ್ತಾಳೆ , ಶ್ರೀರಾಮಚಂದ್ರನ ಕೃಪಾಕಟಾಕ್ಷಕ್ಕೆ ಪಾತ್ರನಾಗಿರುವ ದಿವ್ಯ ತೇಜಸ್ಸು  ಹೊಂದಿರುವ  ಪರಮ ಪಾವನನಾ ದ ಮಾರುತಿಯನ್ನು ಭಕ್ತಿಯಿಂದ ಪೂಜೆ ಮಾಡುತ್ತಾ ದೈನಂದಿನ ಕಾರ್ಯ ಮಾಡಿದರೆ ಯಶಸ್ಸು ಸಿದ್ಧಿಸುತ್ತದೆ ಎಂಬ ನಂಬಿಕೆ ಇದೆ,
ಹನುಮಂತ ಕರ್ನಾಟಕದ ಹಂಪಿ ಹತ್ತಿರ ಇರುವ ಅಂಜನಾದ್ರಿ ಬೆಟ್ಟದಲ್ಲಿ ಹುಟ್ಟಿ ಬೆಳೆದ ಎಂಬುದು ಪೌರಾಣಿಕ ಹಿನ್ನೆಲೆ ಇದೆ ಇಂದಿಗೂ ಅಲ್ಲಿ ಹನುಮಂತನ ಭಕ್ತರು ಪ್ರವಾಸಿಗರು ಹೋಗಿ ಅಂಜನಾದ್ರಿ ಬೆಟ್ಟದ ದರ್ಶನ ಮಾಡುತ್ತಾರೆ  ನಿಸರ್ಗದ ಸುಂದರತೆಯನ್ನು ಕಣ್ತುಂಬಿ ಕೊಳ್ಳುತ್ತಾರೆ ಹನುಮನ ಭಕ್ತರು ಅಂಜನಾದ್ರಿ ಬೆಟ್ಟವನ್ನು ಪುಣ್ಯ ಕ್ಷೇತ್ರ ಎಂದು ಬಲವಾಗಿ ನಂಬಿದ್ದಾರೆ ಇದಕ್ಕೆ ಅಲ್ಲವೇ ಭಕ್ತಿಯ ಪರಾಕಾಷ್ಠೆ ಹೇಳುವುದು?
ಅಂಜನಾದ್ರಿ ಬೆಟ್ಟ ನಿಸರ್ಗ ತಾಣವಾಗಿ ಪೌರಾಣಿಕ ಹಿನ್ನೆಲೆಯಿಂದ ಜಗತ್ತಿನಲ್ಲಿ ಪ್ರಸಿದ್ಧ ಯಾತ್ರಾ ಸ್ಥಳದಲ್ಲಿ ಒಂದಾಗಿ ನಿಂತಿದೆ ಅಲ್ಲಿ ಹನುಮಂತನ ಶಕ್ತಿ ಇದೆ ಭಕ್ತರಿಗೆ ಬೇಡಿದ ವರ ನೀಡುವ ಪುಣ್ಯ ಸ್ಥಳ ಅಂಜನಾದ್ರಿ ಬೆಟ್ಟ ಅಂದರೆ ತಪ್ಪಾಗಲಾರದು,
ಹನುಮಂತನ ಭಕ್ತಿ ಶ್ರೇಷ್ಠವಾದದ್ದು ಭಕ್ತಿಯಲ್ಲಿಯೇ ಶಕ್ತಿ ಇದೆ ಮಾನವ ಲೋಕಕ್ಕೆ ಹನುಮಂತ ತಿಳಿಸಿಕೊಟ್ಟಿದ್ದಾನೆ ಲಂಕಾಕ್ಕೆ ಹೋಗುವ  ಸಲುವಾಗಿ ಸೇತುವೆಯನ್ನು ನಿರ್ಮಿಸಬೇಕಾಗಿತ್ತು, ಹನುಮಂತನು ಕಲ್ಲಿನ ಮೇಲೆ ಶ್ರೀ ರಾಮ್ ಎಂದು ಬರೆದರೆ ಆಕಲ್ಲು ತೇಲಿ ಹೋಗುತ್ತಿತ್ತು ಇದು ಹನುಮಂತನ ಭಕ್ತಿ ತೋರಿಸುತ್ತದೆ ಶ್ರೀರಾಮಚಂದ್ರನು ಆತ ಅವತಾರಿ  ಪುರುಷ ರಾವಣನನ್ನು ಕೊಂದು   ರಾಕ್ಷಸರನ್ನು ಸಂಹಾರ ಮಾಡಿದ, ಆದರೆ ನಾವು ಶ್ರೀರಾಮಚಂದ್ರನ ಗುಡಿಗಳನ್ನು ಕಟ್ಟಿಲ್ಲ ಆದರೆ ಅವನ ಭಕ್ತ ಹನುಮಂತನ ಗುಡಿ ಕಟ್ಟಿರುವುದು ಇದು ಭಕ್ತಿಗೆ ಇರುವ ಶಕ್ತಿ
ಭಕ್ತಿಗೆ ವಿದ್ಯೆ ಬೇಕು ಮನಸ್ಸು ಬೇಕು ಆಸೆ ಆಮೀಷಗಳನ್ನು ತೊರೆದು ತ್ಯಾಗಿ ಆಗಬೇಕು ಭಾರತೀಯ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಭಕ್ತಿಯಿಂದಲೇ ಮುಕ್ತಿ ಪಡೆದವರು ಸಾಕಷ್ಟು ಜನ ಇದ್ದಾರೆ ಅದಕ್ಕಾಗಿಯೇ ಇರಬೇಕು ರಾಮಾಯಣದಲ್ಲಿ ಹನುಮಂತ ಹನುಮಂತ ಗಾಗಿ ಒಂದು ಅಧ್ಯಾಯವಿದೆ ಅದಕ್ಕೆ ಸುಂದರ ಕಾಂಡ ಹನುಮಂತನ ಶಕ್ತಿ ಸಾಮರ್ಥ್ಯವನ್ನು ವಾಲ್ಮೀಕಿ ಮಹರ್ಷಿ ರಾಮಾಯಣ ಸುಂದರಕಾಂಡದಲ್ಲಿ  ಚೆನ್ನಾಗಿ ನಿರೂಪಿಸಿದ್ದಾರೆ,
ಈ ಸೇವೆ  ಅನ್ನುವ  ಶಬ್ದಕ್ಕೆ ಅರ್ಥವಿಲ್ಲ ಯಾರು ಯಾರಿಗೂ ಸಂಬಂಧವಿಲ್ಲ ಸೇವಕ ಎಷ್ಟೇ ನಿಷ್ಠೆಯಿಂದ ದುಡಿದ ರೂ ಮಾಲೀಕ ಸೇವಕನಿಗೆ ಸಹಾಯ ಮಾಡೋದಿಲ್ಲ ಮಾಲಿಕ ಸರಿ ಇದ್ದರೆ ಸೇವಕ ಸರಿ ಇರುವುದಿಲ್ಲ ಇಂಥ ಪರಿಸ್ಥಿತಿಯಲ್ಲಿ ಸಾಗಿದೆ  ಕೆಡುಕು ವಿಚಾರಗಳು ನಮ್ಮನ್ನು ಅದೋಗತಿಗೆ ತೆಗೆದುಕೊಂಡು ಹೋಗಿದೆ ,
ಸುಂದರಕಾಂಡದಲ್ಲಿ ಹನುಮಂತನ ಧೈರ್ಯ ಸಾಹಸ ಮಡುಗಟ್ಟಿ ನಿಂತಿದೆ ರಾಮನ ದೂತನಾದ ಹನುಮಂತ ವಿಜಯ ಪತಾಕಿ ಹಾರಿಸುವ ಸಾಕಷ್ಟು ಘಟನೆಗಳು ಈ ಅಧ್ಯಾಯದಲ್ಲಿ ಮೂಡಿಬಂದಿದೆ, ಬಹಳಷ್ಟು ಯುವಕರಿಗೆ ಹನುಮಂತ ಆದರ್ಶ ನಾಯಕ ಸಾಹಸದಿಂದ ಕೂಡಿದ ಕೆಲಸದಲ್ಲಿ ಜೈ ಹನುಮಾನ್ ಅಭಿಮಾನದಿಂದ ಸಂತೋಷ ಪಡುತ್ತಾರೆ ಆಂಜನೇಯ ರೂಪ ಗುಣ ಶೀಲ ಕೃತಿ ವಿವೇಕ ಸಹನಶೀಲತೆ ಬುದ್ಧಿ ಎಲ್ಲವೂ ಹೃದಯಸ್ಪರ್ಶಿ ಅವನ ಗುಣ ಹೆಚ್ಚು ಸೌಂದರ್ಯಯುಕ್ತವಾಗಿದೆ, ಪುರಂದರದಾಸರು ಸುಂದರ ಮೂರುತಿ ಮುಖ್ಯ ಪ್ರಾಣಮನಿಗೆ ಬಂದ ಎಂದು ಹಾಡಿ ಹೊಗಳಿದ್ದಾರೆ,
ಯಾರ ಮುಂದೆಯೂ ಆತ ಎದೆ  ಗುಂದಲಿಲ್ಲ ಯಾರನ್ನು ಬಲದಿಂದ ಗೆಲ್ಲಬೇಕು ಯಾರ ಯಾರನ್ನು ದೈಹಿಕ ಸಾಮರ್ಥ್ಯದಿಂದ ಗೆಲ್ಬೇಕು ಇoಥ ಕಠಿಣ ಪರಿಸ್ಥಿತಿ ಇದ್ದರೂ ಕೂಡ ಜೈಶೀಲ ನಾದನು ಸಮಾಜದಲ್ಲಿ ವಿಕಾರಗೊಳಿಸುವ ಸನ್ನಿವೇಶ  ಹೇರಳವಾಗಿದ್ದರೂ ಕೂಡ ವಿಕಾರಕ್ಕೆ ಬಲಿಯಾಗಲಿಲ್ಲ ಆತನೇ ನಿಜವಾದ ಧೀರ ಮಾರುತಿ ಯಾವ ಕೆಟ್ಟ ವಿಚಾರಕ್ಕೆ ಒಳಗಾಗದೆ ಸ್ವಾಮಿ ಕಾರ್ಯ ದಲ್ಲಿ ಭಕ್ತಿ ನಿಷ್ಠೆ ನಿಷ್ಠೆ ತನ್ನನ್ನು ತಾನು ತೊಡಗಿಸಿಕೊಂಡು ಮಾರುತಿಯ ರುದ್ರದೇವನ ಅವತಾರ ಶಿವ ಪುರಾಣ ಹೇಳುತ್ತದೆ,
ತಿಮ್ಮಾಪುರ ಹನುಮಂತ ದೇವರ ಪೂಜಾರಿಗಳು ಹರಪನಹಳ್ಳಿ ದೇಸಾಯಿರು ತಿಳಿದು ಬರುತ್ತದೆ ಇವರು ಒಂದು ಕಾಲದಲ್ಲಿ ಹರಪನಹಳ್ಳಿಯ ಊರನ್ನು ಬಿಟ್ಟು ಬರುವ ಕಾಲಕ್ಕೆ ಇಲಕಲ್ ತಾಲೂಕಿನ ದಮ್ಮೂರು ಗುಡ್ಡದಲ್ಲಿ ಬರುತ್ತಿರುವ ಮನಸ್ಸು ಶಕ್ತಿಯಾಗಿ ಒಂದು ಕಲ್ಲಿನ ಮೇಲೆ ನಿಂತರಂತೆ,
ವಿಜಯಪುರ ಬಾಗಲಕೋಟೆ ಜಿಲ್ಲೆಯಲ್ಲಿ ಐದು ಪ್ರಾಣ ದೇವರನ್ನು  ಜಾಗೃತ ದೇವರು ಕರೆಯಲಾಗಿದೆ ಹಲಗಣಿ ಯಲಗೂರು ತುಳಸಿಗೇರಿ ಆಚನೂರು ಹಾಗೂ ಕೋರಬಾರ ಜಾಗೃತ ಹನುಮಂತ ದೇವರು ಹೇಳಬಹುದು
ಹುನಗುಂದ ಹುನುಗುಂದ ತಾಲೂಕಿನ ಕಿರಸುರು ಹಡಗಲಿ ತಿಮ್ಮಾಪುರ ಮೂರು ಗ್ರಾಮಗಳಲ್ಲಿ ಜಾತ್ರೆ ನಡೆಯುತ್ತದೆ ಪ್ರಾರಂಭಗೊಂಡ 24 ಗಂಟೆಗಳಲ್ಲಿ ಮೂರು ಗ್ರಾಮಗಳಲ್ಲಿ ಜಾತ್ರೆ ನಡೆಯುತ್ತದೆ,
ಒಬ್ಬ ಪೂಜಾರಿ ನಾಲಿಗೆಯನ್ನು ಕತ್ತಿಸಿಕೊಂಡು ಆ ನಾಲಿಗೆಯನ್ನು ಮರಳಿ ಜೋಡಿಸಿಕೊಂಡ ನಂತೆ ಇನ್ನೊಬ್ಬ ಪೂಜಾರಿ ಕಾಲಿನ ಚಿಪ್ಪನ್ನು ಕುರಿದುಕೊಂಡು ದೀಪವನ್ನು ಹಚ್ಚಿದನಂತೆ ಎಂಬ ನಂಬಿಕೆ ಇದೆ ಆ ಮಹಾಪುರುಷರ ಸಮಾಧಿ ಕಟ್ಟೆ ಹೇಳಲಾಗಿದೆ,
ಜನಾದ್ರಿ ಮನೆತನದ ಹಿರಿಯೊಬ್ಬರು ಹತ್ತಿ ವ್ಯಾಪಾರಕ್ಕಾಗಿ ಹಳ್ಳಿಗಳಲ್ಲಿ ತಿರುಗಾಡುತ್ತಿದ್ದರು ತಿಮ್ಮಾಪುರಕ್ಕೆ ಹೋದರೆ ಮಧ್ಯಾಹ್ನದ ವೇಳೆ ಕೆರೆ ಹತ್ತಿರ ಗಿಡದ ಕೆಳಗೆ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು ಅಲ್ಲಿ ಹನುಮಂತ ದೇವರ ಮೂರ್ತಿ ಇತ್ತು ಮಂಪ ರು ನಿದ್ದಿಯಲ್ಲಿ ಹನುಮ ದೇವರ ಬಂದು ನೀನು ಇಲ್ಲಿಂದ ಅವರಿಗೆ ವಾಯುವ್ಯ ದಿಕ್ಕಿಗೆ ಹೋಗಿ ನಂತರ ಊರು ಸೇರಬೇಕು ನಿನಗೆ ಒಳ್ಳೆಯ ವ್ಯಾಪಾರವಾಗಿ ಸಂಪತ್ತು ಆಸ್ತಿ ಗಳಿಸುತ್ತಿ ಹೇಳಿದಂತಾಗುತ್ತದೆ ಅವರು ಆ ರೀತಿ ಮಾಡಿದರಂತೆ ಈಗಲೂ ಸಹ ಹುನಗುಂದದ ಜನಾದ್ರಿ ಕುಟುಂಬದವರು ತಿಮ್ಮಾಪುರ ಮಾರುತಿ ದೇವಸ್ಥಾನಕ್ಕೆ ಭಕ್ತಿಯಿಂದ ಸೇವೆ ಮಾಡುತ್ತಾ ಬಂದಿದ್ದಾರೆ,
ಗ್ರಾಮದ ಕೆಲವು ಸಂದ ಸಮುದಾಯಗಳಲ್ಲಿ ಮದುವೆಯಾಗುವ ಪೂರ್ವದಲ್ಲಿ ಹನುಮಂತ ದೇವರಿಗೆ ದೀಡ್ ನಮಸ್ಕಾರ ಹಾಕುವ ಪದ್ಧತಿ ಇದೆ ನಂತರ ಗೋಪಾಳ ತುಂಬಿಸುವ ಪದ್ಧತಿ ಇದೆ ರೆಡ್ಡಿ ಸಮುದಾಯದಲ್ಲಿ ವರ್ಷಕ್ಕೆ ಒಂದು ಕುಟುಂಬದಲ್ಲಿ ಒಂದೇ ವಿವಾಹ ಎಂಬ ನಿಯಮ ಇದ್ದು  ಎರಡು ಮದುವೆ ಆದರೆ ಆ ಕುಟುಂಬದಲ್ಲಿ ಸಮಸ್ಯೆಗಳು ಕಾಡುತ್ತವೆ,
ಲೇಖಕರು ಹನುಮದೇವರ ಬಗ್ಗೆ ಸವಿಸ್ತಾರವಾಗಿ ವಿವರಿಸಿದ್ದಾರೆ ಮತ್ತೆ  ಕೃತಿಗಳು ಬರುವಂತಾಗಲಿ ಎಂಬುದು ಸಹೃದಯಗಳ ಶುಭ ಹಾರೈಕೆ.
- ದಯಾನಂದ ಪಾಟೀಲ, ಅಧ್ಯಕ್ಷರು ಭಾರತೀಯ ಕನ್ನಡ ಸಾಹಿತ್ಯ ಬಳಗ ಮಹಾರಾಷ್ಟ್ರ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...