ಮಂಗಳವಾರ, ಮಾರ್ಚ್ 21, 2023

'ನವ ವಸಂತದ ಚಿಗುರಲು ಯುಗಾದಿ ಹಬ್ಬದ ಸಂಭ್ರಮ' (ಕವಿತೆ) - ಎಸ್. ರಾಜು ಸೂಲೇನಹಳ್ಳಿ.

ನಮ್ಮ ಭಾರತ ದೇಶ ಸಂಸ್ಕೃತಿ ಪ್ರಧಾನ ಹೊಂದಿರುವ ಹಾಗೂ ಅನೇಕ ಇತಿಹಾಸ ಪುರಾವೆಗಳು ಒಳಗೊಂಡ ಇಡೀ ಜಗತ್ತು ಹಿಂತಿರುಗಿ ನೋಡುವ ರೀತಿ ಆಚರಸುವ ಸಂಪ್ರದಾಯ ದೇಶ ಇದಾಗಿದೆ ಆದರಲ್ಲಿ ನಮಗೆ ಯುಗಾದಿ ಬಂತೆಂದರೆ ಸಾಕು ನವನವೀನ ಉಡುಗೆ ತೊಟ್ಟು, ಅಮ್ಮ ಮಾಡಿದ ಹೆಬ್ಬೊಟ್ಟು ಸಿಹಿ ತಿನಿಸುಗಳ ಭರಾಟೆ ಜೋರಾಗಿ ಇರುತ್ತದೆ, ಇದರ ಜೊತೆಗೆ ಪ್ರಕೃತಿಯು ಬೆರೆಯುದರೊಂದಿಗೆ  ಹೊಸತನಕ್ಕೆ ಸಾಕ್ಷಿ ಸಿಕ್ಕಿಹದು ಎಲೆಗಳು ಉದುರಿಸಿ ಹೊಸ ಚಿಗುರು ತೋರುವ ಮೂಲಕ ಹಬ್ಬಕ್ಕೆ ಕಳೆ ತಂದಿಹವು.
ಒಂದು ವಿಷಾದವು ತಲೆ ತಲೆಮಾರುಗಳಿಂದ ಬಂದಿರುವ ಪರಿಸರ ಬದಲಾವಣೆ ಇತ್ತೀಚೆಗೆ ಅಂತರ್ಜಲ ಮಟ್ಟ ಆಧುನಿಕತೆಯ ವೇಗ ಬೆಳೆವಣೆಗೆಯು ತ್ವರಿತ ಗತಿಯಲ್ಲಿ ಸಾಗುತ್ತಿದೆ ಆದರೆ ಪರಿಸರದೊಡನೆ ಜೀವಿಸುವ ಮಾನವ ಯಾಂತ್ರಿಕ ಬದುಕಿಗೆ ಜಾರಿ ತನ್ನೊಡಲ ಗಿಡ ಮರಗಳನ್ನು ಬೆಳೆಸುವ ನಿಟ್ಟಿನಲ್ಲಿ ಶ್ರಮ ವಹಿಸುತ್ತಿಲ್ಲ ಒಂದು ಮನೆಯ ನೀರ್ಮಾಣ ಮಾಡಿದರೆ ಮನೆಯ ಅಂಗಳದಲ್ಲಿ ರಂಗೋಲಿ ಇರದ ಜಾಗ ಖಾಲಿ ಇರದೇ ತನ್ನ ಐಷಾರಾಮಿ ಕಾರು, ದ್ವಿಚಕ್ರ ವಾಹನ ನಿಲ್ಲಿಸಲು ಕಾಂಪೌಂಡ್ ಗೆ ಒತ್ತು ಕೊಡುವನೇ ಹೊರತು ತಾನು ಒಂದಷ್ಟು ಹೂ ಬಳ್ಳಿ, ಗಿಡ ತಂಪಾದ ವಾತಾವರಣ ನಿರ್ಮಾಣ ಮಾಡುವ ಸೋಜಿಗಕ್ಕೆ ಹೋಗುವುದಿಲ್ಲ ಎಲ್ಲವೂ ನಶಿಸುತ್ತಿದೆ. ಪ್ರಕೃತಿಯ ಮಾತೆಯು ಮುನಿಸಿಕೊಂಡು ಸುನಾಮಿ, ಜಲಪ್ರವಾಹ, ರೂಪ ಪಡೆದು ನಮ್ಮನ್ನೆ ನಾಶಕ್ಕೆ ಕಾರಣವಾಗಿದೆ. ಬೇಸಿಗೆಯ ತಾಪ ಒಂದೆಡೆ ಇಡೀ ಅರಣ್ಯವೆಲ್ಲ ಬೋಳಾದರೆ ಮತ್ತೊಂದೆಡೆ ಬೆಂಕಿ ಅವಘಡಕ್ಕೆ ನಾಂದಿ ಆಗುತ್ತಿದೆ. ಮೊದಲೆಲ್ಲ ಯುಗಾದಿ ಹಬ್ಬ ಆಚರಣೆ ಸಂದರ್ಭದಲ್ಲಿ ಏನೋ ತಳಮಳ ಮನೆಯ ಬಾಗಿಲ ತೋರಣ ಕಟ್ಟಿ ಎಲ್ಲರೊಡನೆ ಬೆರೆತು ಖುಷಿ ಪಡುವುದೇ ಒಂದು ಸಂಭ್ರಮ ಆಗಿತ್ತು.

 ಇಂದಿನ ದಿನಮಾನಗಳಲ್ಲಿ ಮನೆಯಲ್ಲಿ ಇರಬೇಕಾದ ಹತ್ತಾರು ಜನ ನಗರೀಕರಣದ ಧನ ಸಂಪಾದನೆ ಗುರಿಯಾಗಿಸಿ ಪೂರ್ವಜರ ಆಸ್ತಿ ಮನೆ ಉಳಿಸಲು ವಯಸ್ಸಾದ ಮುದ ಜೀವಗಳ ಬಿಟ್ಟು ಹೋಗಿಹವು ಮರಳಿ ದೂರದಿಂದ ಬಂದವರು ಇರೋದು ಮೂರೇ ದಿನ ಆದರಲ್ಲಿ ಅವರೊಡನೆ ನಾಲ್ಕು ಮಾತನಾಡಲು ಸಮಯವಿರದ ಪರಿಸ್ಥಿತಿ ನಿರ್ಮಾಣವಾಗಿದೆ. ಬರೀ ಸೆಲ್ಫಿ ಪೋಟೋಗಳ ಅಬ್ಬರ ಕಾಣುತ್ತಿದೆ. ಹಿರಿಯ ಜೀವಗಳಿಗೆ ಮಕ್ಕಳು ಮತ್ತು ಮೊಮ್ಮಕ್ಕಳು ಇರೋದ ಕಂಡು ಅವರ ಮನಸ್ಸಿನ ಉಲ್ಲಾಸಕ್ಕೆ ಪಾರವೇ ಇರೋದಿಲ್ಲ ಆದು ಕೆಲವು ದಿನಗಳ ಮಾತ್ರ ಸಾಧ್ಯ ಆದರೆ ಯಥಾ ಪ್ರಕಾರ ಯುಗಾದಿ ಹಬ್ಬ ಮುಗಿದ ಮರುದಿನವೇ ಹೊರಡುವರು ಮತ್ತೇ ಊರಿನತ್ತ ಮುಖಮಾಡಲು ಇಂತಹ ಸಡಗರಕ್ಕೆ ಒಂದು ವರ್ಷದವರೆಗೆ ಕಾಯುವಿಕೆ ನೋವು ಹೇಳತೀರದು. ಇಳಿ ವಯಸ್ಸಿನಲ್ಲಿ ಜೊತೆಗಿದ್ದು ಆಸರೆ ಆಗುತ್ತಾ ಅವರ ಯೋಗಕ್ಷೇಮ ವಿಚಾರಣೆ ಮಾಡಿ ನಾಲ್ಕು ಪ್ರೀತಿ ಮಾತುಗಳು ಆಡುವ ಅವಕಾಶ ಕೂಡ ಇರದು.

ಒಮ್ಮೆ ಯೋಚಸೋಣ ಅವಿಭಕ್ತ ಕುಟುಂಬಗಳು ಬೀದಿಗೆ ಬಿದ್ದಿವೆ ಬದಲಾಗಿ ವಿಭಕ್ತ ಕುಟುಂಬ ಆಗಿ ಪ್ರಸ್ತುತ ಏಕ ಕುಟುಂಬ ಆಗಿ ಮಾರ್ಪಟ್ಟಿದೆ ಆದಕ್ಕೆ ಮೂಲ ಕಾರಣ ನಾವು ಸಾಗುತ್ತಿರುವ ಬದುಕು ಕೇವಲ ಉದ್ಯೋಗ ಹರಿಸಿ ಓದುತ್ತಿರುವ ಪೀಳಿಗೆ ಇಂದು ಆದರ ಭವಿಷ್ಯ ಹೆಚ್ಚಾಗಿ ಏನು ಕಲಿಯದೇ ಹಾಗೇ ಸಮೂಹ ಮಾಧ್ಯಮಕ್ಕೆ ಜೊತು ಬಿದ್ದು ಎಲ್ಲವನ್ನೂ ಕಳೆದುಕೊಂಡು ಎಲ್ಲೆಂದರಲ್ಲಿ ಮಧ್ಯೆದಲ್ಲೇ ರೋಗಗಳು ಅವರಿಸಿ ಸಾವು ಸಂಭವಿಸುತ್ತದೆ. ಪ್ರತಿಯೊಬ್ಬ ಯುವಕರು ಉದ್ಯೋಗ ಹರಿಸಿ ನಗರಗಳತ್ತ ಮುಖ ಮಾಡದೇ ಹಳ್ಳಿಗಳಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನೇಕ ಯೋಜನೆಗಳನ್ನು ಸರಿಯಾಗಿ ಉಪಯೋಗ ಮಾಡಿಕೊಂಡು ತೃಪ್ತಿ ರೀತಿಯಲ್ಲಿ ಇದ್ದುದ್ದರಲ್ಲಿ ಜೀವನ ಸಾಗಿಸಿದರೆ ದೀರ್ಘ ಕಾಲ ಬಾಳುತ್ತೇವೆ ನೆಮ್ಮದಿಯ ಜೀವನ ನಮ್ಮದಾಗುತ್ತದೆ. ಹೆತ್ತವರ ಆರೈಕೆ ಮಾಡಿದರೆ ನಮ್ಮನ್ನ ಸಹ ಮುಂದಿನ ಪೀಳಿಗೆಯು ಹಾಗೇ ಸೇವೆ ಮಾಡಲ್ಲರು. ಹಣವೇ ಮುಖ್ಯ ಎಂಬ ಬಹುದೊಡ್ಡ ಗುರಿ ಇದಕ್ಕೆ ಮುಖ್ಯ ಪ್ರೇರಣೆ ಆಗಿದೆ. ಆದನ್ನ ಮನಸ್ಸಲ್ಲಿ ಹೊರ ತಗೆದು ಸಂಬಂಧಗಳು ಮುಖ್ಯ ಎಲ್ಲರೂ ಒಂದುಗೂಡಿ ಬಾಳಿದರೆ ಸುಖ ಸ್ವರ್ಗ ಸುಖ ನಮಗೆ ದೊರೆಯುತ್ತದೆ ಎಂಬ ಭಾವನೆ ಪ್ರತಿಯೊಬ್ಬರಲ್ಲಿ ಹುಟ್ಟಬೇಕು ಆದೇ ನನ್ನ ಆಶಾ ಭಾವನೆ ಎನ್ನಬಹುದು. 

ನಾ ಕಂಡಂತೆ ಮಕ್ಕಳಲ್ಲಿ ಸಾಮಾಜಿಕ, ಸಾಂಸ್ಕೃತಿಕ, ಮಾನವೀಯ, ಧಾರ್ಮಿಕ ಮೌಲ್ಯಗಳು ಕಣ್ಮರೆ ಆಗಿವೆ ಶೈಕ್ಷಣಿಕ ವ್ಯಾಪಾರೀಕರಣದ ಮುಖ್ಯ ಗುರಿಯಾಗಿಸಿ ಸಂಸ್ಥೆಗಳು ಕಲಿಸಬೇಕಾದದ್ದು ಸಂಸ್ಕೃತಿ ವಿಚಾರ ತಲೆಗೆ ಹತ್ತಿಸದೇ ಉತ್ತಮ ದರ್ಜೆ ಉತ್ತೀರ್ಣರಾಗಿ ಹೊರ ಹೊಮ್ಮುತ್ತಿದ್ದಾರೆ ಹೊರತು ಹಳ್ಳಿಗಳ ಸಂಪ್ರದಾಯ ಆಚರಣೆ ಪರಿಚಯ ಮಾಡಿಕೊಡುವವರಿಲ್ಲ ಯಾಕೆಂದರೆ ಅವರಿಗೂ ಅವುಗಳ ತಿಳಿದುಕೊಳ್ಳುವ ತವಕವಿಲ್ಲ. ಇನ್ನೇನು ಹೇಳಿಕೊಟ್ಟಾರು ಇವೆಲ್ಲ ಮುಂದಿನ ದಿನಗಳಲ್ಲಿ ಯುಗಾದಿ ಹಬ್ಬದ ಪೂಜೆ ಪುರಸ್ಕಾರಗಳು ಹಾಗೂ ಆಚರಣೆಗಳ ವಿವರಣೆ ಕೇವಲ ಪೋಟೋಗಳಲ್ಲಿ ನೋಡುವ ದಿನಗಳು ದೂರವಿಲ್ಲ ನನ್ನ ಕಳವಳ ಎಂದು ವಿಷಾದಿಸುತ್ತಾ ಈ ಲೇಖನ ಅನುಭಾವ ಸಾರಿ ಸೇರಿಕೊಂಡು ಬರೆದಿದ್ದೇನೆ ತಪ್ಪದೇ ಓದಿ ಅಭಿಪ್ರಾಯ ತಿಳಿಸಿ ಮಿತ್ರರೇ.

- ಎಸ್. ರಾಜು, ಸೂಲೇನಹಳ್ಳಿ
ಕಾದಂಬರಿಕಾರ.
ಮೊ :9741566313.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...