ಮಂಗಳವಾರ, ಮಾರ್ಚ್ 21, 2023

ಭೂಒಡಲ ಹಸಿರು‌(ಕವಿತೆ) - ಶಿವಾ ಮದಭಾಂವಿ.

ಬಂತು ಬಂತು ಯುಗಾದಿಯು
ಸಿರಿವನಗಳ ಸಂಭ್ರಮವು

ಹಳೆಬೇರುಗಳ ಜೊತೆಗೆ
ಹೊಸ ಚಿಗುರುಗಳ ಬೆಸುಗೆಯು

ತಿಳಿಸುವವು ಜೀವನದ ಪರಿಯ
ಮಾವು ಬೇವುಗಳು ಮನುಜ ನೀ ತಿಳಿಯ

ಕಹಿ ಸಿಹಿಗಳು ನೂರೆಂಟು
ಬೆರೆತು ಬಾಳು ನೀ ಸ್ವರ್ಗವುಂಟು

ಹೊಸ ವರುಷದ ಹೊಸ ಭಾವಗಳ ಜೊತೆ
ಮರೆಯುತಾ ಸಾಗೋಣ ಕಹಿಗಳ ವ್ಯಥೆ

 ಪ್ರಕೃತಿಯ  ಹಸಿರು ಹಾಸುಹೊಕ್ಕಾಗಿ
ತಿಳಿಯೊ ಮನುಜ ಜೀವನವ ಚೊಕ್ಕಾಗಿ

ವರ್ಷಕ್ಕೊಮ್ಮೆ ಪ್ರಕೃತಿಗಳ  ಚೈತ್ರಶಾಲೆ
ಭೂಒಡಲೆಲ್ಲ ಹಸಿರು ಹಸಿರಿನ ಮಾಲೆ

- ಶಿವಾ ಮದಭಾಂವಿ,
ಗೋಕಾಕ.
# 8951894526

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...