ಗುರುವಾರ, ಮಾರ್ಚ್ 30, 2023

ಕೇಳಿಲ್ಲಿ.. ಕವಿಯಾರು (ಕವಿತೆ) - ಬಿ. ಎಂ. ಮಹಾಂತೇಶ.

ಎಳೆ ಅಳಿಲಿನ
ಕುಲದವನು...
ಒಳಒಳಗೇನೆ
ಒಬ್ಬನೇ ಕುಣಿಯುವವನು...

ಕತ್ತಲಲ್ಲಿ ಬೆಳಕನು
ಹುಡುಕುವ ಬಣ್ಣವ ಸವರಿ...
ಎಲ್ಲಿಲ್ಲದ ಲೋಕವನ್ನೇ ಸೃಷ್ಟಿಸುವುದು
ಇವನ ಕಲ್ಪನೆಯ ಗಾನಲಹರಿ...

ಕಂಡರೂ ಇವನು
ಎಲ್ಲರ ಕಣ್ಣಿಗೆ ಹುಚ್ಚ...
ಬರೆಯುವನು ಮನಸಿನಿಂದ
ಎಲ್ಲವನು ಸ್ವಚ್ಛ...

ಎಲ್ಲರು ಬಾಯಲ್ಲಾಡುವ ಮಾತನ್ನು
ಇವ ಬರೆದು ತೋರಿಸುವ...
ಅದರ ಜೊತೆಗೆ, ಪದಗಳಿಗೆ
ತುಂಬುವ ಭಾವ ಮತ್ತು ಜೀವ...

ಕವಿಯಾದವನು ಆಗಿರುವನಂತೆ
ಬುದ್ದಿವಂತ ಹುಚ್ಚ ಇಲ್ಲವೇ ರಸಿಕ...
ಜೊತೆಗೆ ಪ್ರಕೃತಿ ಸೌಂದರ್ಯ
ಸವೆಯುವ ಸವಿಕ...

ಒಟ್ಟಾರೆ ಆಗಿರುವ ಲೇಖನಿಯ
ಹೆಂಡತಿ ಮತ್ತು ಪದಗಳ ತಾಯಿ...
ಅವುಗಳಿಗೆ ಅರ್ಥದ ಹಾಲುಣಿಸಿ
ಹಾಡುವ ವಿಧ ವಿಧದ ಲಾಲಿ...
- ಬಿ. ಎಂ. ಮಹಾಂತೇಶ
ವಿಜಯನಗರ
9731418615.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...