ತನಿ, ಅತನಿಗಳೆಂಬ ಎಲೆ
ಕಾಯಿ ಹೊತ್ತ ಮರಗಳು
ಅವುಗಳ ಸುರಿಸಿ ಹೊಸತನವ
ಬಯಸುವ ಕಾಲವಿದು...
ನರಜೀವಿಯ ಹಳೆ ತೊಗಲು
ಕಳೆದು, ಹೊಳೆಯುವ
ಹೊಸ ಬಣ್ಣ ತಿರುಗುವ
ಸಂತಸದ ವಸಂತ ಕಾಲವಿದು...
ರವಿ ಬರುವ ಮುನ್ನ
ಎದ್ದು, ಕೋಗಿಲೆಯ ನವ
ರಾಗವ ಕೇಳುತ, ವಿಶೇಷವಾಗಿ
ರತ್ನಪಕ್ಷಿಯ ಹುಡುಕುವ ಕಾಲವಿದು...
ಹಸುಗೂಸಂತೆ ನಗುವ ಮಾವಿನೆಲೆಯ,
ತೋರಣವ ಕಟ್ಟಿ, ಬೇವು ಬೆಲ್ಲವನು
ಸೇರಿಸಿ ಕುಟ್ಟಿ, ಸಮನಾಗಿ
ಸವಿಯುವ ಕಾಲವಿದು...
ಹಾಕಿದೆ ಈ ಕಾಲವು
ಹೊಸತನು, ಹೊಸತನ
ಹೊಸ ಮನಕೆ ಬುನಾದಿ...
ಅದುವೇ ನಮ್ಮ ಈ ನಾಡಹಬ್ಬ
ನವ ವಸಂತದ ಯುಗಾದಿ...
- ಬಿ.ಎಂ. ಮಹಾಂತೇಶ.
ವಿಜಯನಗರ
9731418615
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ