ಮಂಗಳವಾರ, ಮಾರ್ಚ್ 21, 2023

ಯುಗಾದಿ (ಕವಿತೆ) - ತುಳಸಿದಾಸ ಬಿ. ಎಸ್.

ಮಡಿಗೊಂಡ ಮನೆ ಮನದಿ
ಸ್ವಾಗತವು ಬಾರೊ
ಬ್ರಹ್ಮ ಬ್ರಹ್ಮಾಂಡವನು
ಸೃಷ್ಟಿಸಿದ ದಿನ ಬಾರೊ

ಆ ರವಿಗೆ ನಮಿಸುತ
ಪಂಚಾಂಗ ಕೇಳುತ
ಸಿಹಿ ಕಹಿಯ ಸವಿಯುವ
ಹೊಸ ದಿನವೆ ಬಾರೊ

ಚೈತ್ರ ಮಾಸದಿ ಭಾವ
ಚಿಗುರಿಸುತ ಬಾರೊ
ಸಮೃದ್ಧಿ ಸಂಪತ್ತು
ಸಂತಸವ ತಾರೊ

ಎಲ್ಲ ಪ್ರಾಯದ ಜನಕೆ
ಮಲ್ಲಿಗೆಯಾಗುತ ಬಾರೊ
ಸಮರಸಕೆ ಹೊಂದುವ
ಶಕ್ತಿ ತುಂಬಲು ಬಾರೊ

ಅಳಿಸಿ ಉಳಿಸಿತ ಜೀವಿ
ತಿಳಿದು ನಡೆಸಲು ಬಾರೊ
ಜಗವ ಕದಿಲಿಸುತಲಿ
ಜಡವ ಓಡಿಸು ಬಾರೊ
- ತುಳಸಿದಾಸ ಬಿ. ಎಸ್.,
ಶಿಕ್ಷಕರು, ಸಿಂಧನೂರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬೆಳಗು...

ಕವನ     ಬೆಳಗು ಬೆಳಗು ಬಾ ಬೆಳಕು ಬೆಳದಿಂಗಳ ಬೆಳಕು ಚೆಲ್ಲುತ ರಂಗು ರಂಗಿನ ಕಾಮನಬಿಲ್ಲಿನಂತೆ ಮಿನು ಮಿನುಗುವ ಬೆಳ್ಳಿಚುಕ್ಕಿಯಂತೆ ರಂಗು ರಂಗಿನ ರಂಗೋಲಿಯಂತ...