ಒಮ್ಮೆ ಕಾಗೆಮರಿಯೊಂದು ತನ್ನ ಸುತ್ತಾಟವನ್ನು ಮುಗಿಸಿ ಬಂದಾಗ ಅದರ ಕಪ್ಪು ಪುಕ್ಕಗಳ ನಡುವೆ ಒಂದೇ ಒಂದು ಹಸಿರು ಪುಕ್ಕ ಸಿಕ್ಕಿಕೊಂಡಿತಂತೆ, ಕಾಗೆ ಮರಿಗೆ ಆ ಗಿಳಿಯ ಹಸಿರುಪುಕ್ಕವನ್ನು ಕಂಡು ಅತೀ ಆಶ್ಚರ್ಯವು ಆನoದವು ಆಯಿತoತೆ.
ಒಂದೇ ಒಂದು ಗಿಳಿಯ ಗರಿಯನ್ನು ಪಡೆದ ನಾನು ಇಷ್ಟೊಂದು ಸಂತೋಷಪಡುತ್ತಿರಲು, ಇಂತಹ ಸೊಗಸಾದ ಗರಿಗಳನ್ನು ಮೈ ತುಂಬಾ ಹೊದ್ದಿರುವ ಆ ಗಿಳಿ ಪ್ರತಿದಿನ ತನ್ನ ಮೈಬಣ್ಣವನ್ನು ನೆನೆದು ಇನ್ನೆಷ್ಟು ಸಂಭ್ರಮಿಸಬಹುದು ಎಂಬ ಕುತೂಹಲದಿಂದ ಗಿಳಿಯನ್ನು ನೋಡಲು ಆ ಕಾಗೆ ಹೋದಾಗ,
"ನವಿಲುಗಳ ಬಣ್ಣ ಬಣ್ಣದಗರಿಗಳು ಅದೆಷ್ಟು ಚೆನ್ನ, ನನ್ನ ಪುಕ್ಕಗಳು ಇವೆ ಬರೀ ಒಂದೇ ಬಣ್ಣ"ಎಂದು ಶೋಕಿಸುತ್ತ ಕುಳಿತಿತ್ತು ಆ ಗಿಳಿ.
ನಾವು ದೂರುವ ನಮ್ಮ ಬದುಕು ಅದೆಷ್ಟೋ ಜೀವಗಳ ದೂರದ ಬಯಕೆ.
ನಮ್ಮ ಬದುಕನ್ನು ನಾವೆ ಸಂಭ್ರಮಿಸದೆ ಬದುಕುವುದೂ ಒಂದು ಬದುಕೇ..?
-ಸೌಜನ್ಯ ದಾಸನಕೊಡಿಗೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ