ಏ....ಕವಿತಾ, ಎಲ್ಲಿ ಹೋದೆ ನೀ ತಾಂ ತಾಂ ಎನ್ನುತಾ
ಈ.....ಕವಿಗೆ ,ತಟಕಿತ ತಾ.ರಮ್ಮ...ಯ್ಯ ತೋರುತಾ
ಹೋ....ಇಂದೇ ನಿನ್ನಯ ದಿನವಂತಾ ತಾ ತಾ ತಾ
ಬಾ....ಇಂದಾದರೂ ಬರಬಾರಧಿಂ ಧಿಂ ದಿ ತ್ತಾ
ಧೋ.ಧೋ , ಸುರಿಬಾರದಿತ್ತಾ ಸುತ್ತಾ ಮುತ್ತಾ
ಸುಂ.ಸುಂ , ಸುಮ್ಮನೆ ಸುಳಿಬಾರದಿತ್ತಾ ಅತ್ತಾ ಇತ್ತಾ
ಧಿಂ ಧಿಮಿ..ನಲಿಯುತ ನನ್ನಂತ:ಸತ್ವವ ಹೀರುತಾ
ಸಾ ಸಾ ಸರಿಗಮ ಸಂಗೀತದ ಮೇಳವ ಮಾಡುತಾ
ಭಾ ಭಾ ಭಾವದ ಅಭಿಷೇಕವ ರಾಗದಿ ರಂಗೇರಿಸುತ
ಬಾ ಬಾ ಕವಿ ಮನಸಿಗೆ ಸವಿ ಸ್ಪೂರ್ತಿಯ ನೀ ತಾ
ತಾ ತಾ ಹತ್ತಿರ ಬಂದರೆ ಕವಿ ತಾ ಬರೆಯುವ ಕವಿತಾ
ಹೋ ಹೋ. ಸಂಭ್ರಮ ಸಂಗಮ ತಾ ತಾ ಮಧು ತಾ ಧಿಮಿಕಿಟತಕಧಿಂ ಕವಿ ಕವಿತಾ ಸಂಗಮ ..ಸಂಭ್ರಮವಿರುತಾ
ವಿಧವಿಧ ಲಲಿತಾ ಕಲೆಗಳ ಸ್ಫುರಿಸುತಾ , ಸವಿಯುತಾ
ಜನಮಾನಸದೀ ಅವಿರತದಾನಂದವೀಯುತಾ
ಇರುವರು ಕವಿ ಕವಿತಾ ಜೋಡಿಯು ಅನವರತಾ.
- ಖಾದ್ರಿ ವೆಂಕಟ ಶ್ರೀನಿವಾಸನ್, ಮೈಸೂರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ