ಮಂಗಳವಾರ, ಏಪ್ರಿಲ್ 11, 2023

ನೀ ಮಾಡಿದ ಕರೆ.. (ಕವಿತೆ) - ಮೈಲಾರಿ.ಹೆಚ್.ಹೆಚ್.

ಅದೆಷ್ಟು ಧನ್ಯವಾದ
ಹೇಳಲಿ ನೀ ಮಾಡಿದ
ಆ ಒಂದು ಕರೆಗೆ

ಅವಾಗ ಅನಿರೀಕ್ಷಿತವಾದ ಕರೆ
ಇಂದು ನಿರೀಕ್ಷೆ ಇಡುವಂತೆ ಮಾಡಿದೆ

ಮಧುರ ಮನಗಳೆರಡು
ಸೋದರ ಬಂದಿಗಳಾಗಿ
ನಲಿದಾಡಿವೆ

ಬಾಂಧವ್ಯದ ಎಲ್ಲೆ
ಮೀರಿ ಬೆಳೆದು
ನಿಂತಿವೆ

ಪಿಸು ಮಾತುಗಳು
ತುಸು ನಾಚಿವೆ
ತುಂಟ ಪದಗಳಿಗೆ

ಸವಿ ನೆನಪುಗಳು
ಸಿಹಿ ನೀಡಿವೆ
ಕೊಂಚ ಭಾವಗಳಿಗೆ

ಅದಾವ ಘಳಿಗೆಯಲಿ ನೀ
ಕರೆ ಮಾಡಿದ್ದೋ ನಾ ಕಾಣೆ 
ಇಂದು ಆತ್ಮೀಯಳಾಗಿ
ನೆಲೆಸಿರುವೆ ನನ್ನಾಣೆ

ಮಸ್ತಕದಲ್ಲಿ ಇಡಿಸ
- ಲಾಗದ ಪದಗಳನು
ಪುಸ್ತಕದಲ್ಲಿ ಗೀಚಿರುವೆ
ನಗೆ ಸಾಲುಗಳನು...
-  ಮೈಲಾರಿ.ಹೆಚ್.ಹೆಚ್ (ವಿಸ್ಮಯ).

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ...

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ.....            ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್   ಉಪನಿರ್ದೇಶಕರ ಹಾಗೂ ಕ್ಷೇತ್ರ...