ಗುರುವಾರ, ಮೇ 11, 2023

ನಿಜವಾಯ್ತು ಬುದ್ಧವಾಣಿ (ಗದ್ಯ ಕವಿತೆ) - ಡಾ. ಮಮತ.

ಬಡವ ಬಲ್ಲಿದರ ಸೇವೆ ಮಾಡುತ್ತಾ ದುರ್ಬಲರಿಗೆ ಬಲ ನೀಡುತ್ತಾ 
ತತ್ವ ಬೋಧನೆ ಮಾಡುತ್ತ 
ಜನರ ಕಲ್ಯಾಣಕ್ಕೆಂದೆ ಶ್ರಮಿಸಿದವರು ನೀವು, ನಿಜವಾಯ್ತು ಈ ಬುದ್ಧವಾಣಿ

ಐಷಾರಾಮಿ ಜೀವನ ಬಿಟ್ಟು ಸರ್ವಸ್ವವನ್ನು ತ್ಯಾಗ ಮಾಡಿ ಯಾವುದು ಶಾಶ್ವತ ಇಲ್ಲವೆಂದು 
ಇಡೀ ಜೀವನವನ್ನು ಸಂಕಷ್ಟದಲ್ಲಿ ಕಳೆದು ವಿಮೋಚನೆಗಾಗಿ ಕೆಲಸ ಮಾಡಲು ತಿಳಿಸಿದವರು ನೀವು
ನಿಜವಾಯ್ತು ಈ ಬುದ್ಧವಾಣಿ

ನೀತಿ ಬೋಧನೆ ಮಾಡುತ್ತ 
ಅಷ್ಟಾಂಗ ಮಾರ್ಗವನ್ನು ಕಂಡು ಹಿಡಿದು ಬೌದ್ಧ ಧರ್ಮದ ಸ್ಥಾಪಕನಾಗಿ ಜಗತ್ತಿನ ಜ್ಞಾನದ ಹಿರಿಮೆಯನ್ನು ತುಂಬಿದ‌ ಅಜಾರಮರರು  ಆಧ್ಯಾತ್ಮ ತತ್ವದ ಸಾಕ್ಷಾತ್ಕಾರ ಪಡೆದವರು ನಿಜವಾಯಿತು ಈ ಬುದ್ಧವಾಣಿ.

- ಡಾ. ಮಮತ (ಕಾವ್ಯ ಬುದ್ಧ).

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...