ಗುರುವಾರ, ಮೇ 11, 2023

ಗಜಲ್ - ಸೂಗಮ್ಮ ಡಿ ಪಾಟೀಲ್.

ಮನೆಗಳ ಸೇರಿಸಿ ಮನಗಳ ಕೂಡಿಸಿ ಸಪ್ತಪದಿಯಡೆ ನಡೆದೆ ನೀನು
ಮನಸಿನ ಭಾವಕೆ ಜೀವ ತುಂಬುತಲಿ ಹೃದಯವನೇ ಪಡೆದೆ ನೀನು

ವದನವ ನೋಡುತ  ಕಿರುನಗೆ ಬೀರುತ ಕಂಗಳ ಬೆಳಕಲ್ಲೇ ನಿಂದೆ ಏನು
ಕದನದ ಮನೆಯಲಿ ಕನಸನು ಅರಳಿಸಿ ಸಂಭ್ರಮದ ಮಾತು ನುಡಿದೆ ನೀನು

ಏಳು ಹೆಜ್ಜೆಗಳ ಇಡಿಸುತಲಿ ಸ್ವರ್ಗವನ್ನೆ ಧರೆಗೆ ತಂದಿರುವೆ ಏನು
ಹೇಳಿದಂತೆಯ ಜೀವನ ನಡೆಸಲು ಸಂಗಾತಿ ಪಟ್ಟವ ನೀಡಿದೆ ನೀನು

ಚೆಲುವಿನ ಮೊಗದ ಸುಂದರ ಪಟವನು ನಯನದಲ್ಲೇ ಸೆರೆಹಿಡಿದೆ ಏನು
ಹಲವು ಆಸೆಗಳ ಅವಿತಿಟ್ಟು ನನಗಾಗಿ ಎಲ್ಲವು ತ್ಯಾಗ ಮಾಡಿದೆ ನೀನು

ಹರನೆ ಬೆಸೆದಿರುವ ಮಧುರ ಬಂಧವಿದು ಸುಗಮಳ ಪತಿಯಾಗಿರುವೆ ಇಂದು
ಸಿರಿತನ ಬಡತನ ಯಾವುದೇ ಬರಲಿ ಪ್ರತಿಕ್ಷಣವು ಸತಿಗಾಗಿ ಮಿಡಿದೆ ನೀನು

- ಸೂಗಮ್ಮ ಡಿ ಪಾಟೀಲ್,
ವಿಜಯಪುರ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...