ಕಳೆದ 21 ದಿನಗಳಿಂದ ಜಂತರ್ ಮಂತರ್ ನಲ್ಲಿ ಭಾರತಕ್ಕೆ ಮೆಡಲ್ ತಂದ ಕುಸ್ತಿಪಟುಗಳು ಭಾರತದ ಕುಸ್ತಿ ಫೆಡರೇಶನ್ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಮಹಿಳಾ ಕುಸ್ತಿಪಟ್ಟುಗಳ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಾರೆ ಅವರನ್ನು ಕೂಡಲೇ ಬಂಧಿಸಬೇಕು ಎಂದು ಹಾರೈಸಿ ದೆಹಲಿಯಲ್ಲಿ ನಾಲ್ಕು ವಾರಗಳಿಂದ ಧರಣಿ ನಡೆಸುತ್ತಿದ್ದಾರೆ. ಈ ಪೈಲ್ವಾನರ ಬಳಗವು ಈ ರೀತಿ ಧರಣಿ ಕುಳಿತಿರುವುದು ಇದು ಎರಡನೇ ಬಾರಿ. ಮೂರು ತಿಂಗಳ ಹಿಂದೆ ಒಲಂಪಿಕ್ ನ ಕುಸ್ತಿಪಟುಗಳಾದ ವಿನೇಶ ಫೋಗಟ್, ಸಾಕ್ಷಿ ಮಲಿಕ್, ರವಿ ದಹಿಯಾ, ಬಜರಂಗ್ ಪುನ್ಯಾ ಸೇರಿದಂತೆ ಹಲವು ಪೈಲ್ವಾನರು ದೆಹಲಿಯ ಜಂತರ್ ಮಂತರ್ ನಲ್ಲಿ ಮೂರು ದಿನಗಳ ಕಾಲ ಅಹೋ ರಾತ್ರಿ ಧರಣಿ ನಡೆಸಿದ್ದರು. ಆಗ ಪ್ರಕರಣಗಳ ತನಿಖೆಗೆ ಕೇಂದ್ರ ಸರ್ಕಾರವು ಒಲಂಪಿಯನ್ ಬಾಕ್ಸಿಂಗ್ ಪಟು ಮೇರಿ ಕೋಮ್ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತು. ಅಲ್ಲದೆ ಆರೋಪಿ ಬ್ರಿಜ್ ಭೂಷಣ್ ಅವರನ್ನು ತಾತ್ಕಾಲಿಕವಾಗಿ ಅಮಾನತು ಗೊಳಿಸುವುದಾಗಿ ಎಂದು ಹೇಳಿತು. ಆದರೆ ಹೇಳಿದ ರೀತಿ ಸರ್ಕಾರ ನಡೆದುಕೊಂಡಿಲ್ಲ. ಆದ ಕಾರಣ ಮತ್ತೆ ತಮ್ಮ ಪ್ರತಿಭಟನೆ ಪ್ರಾರಂಭಿಸಿದ್ದಾರೆ. ಒಟ್ಟು ಏಳು ಸಂತ್ರಸ್ತೆಯರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು ಅದರಲ್ಲಿ ಒಬ್ಬ ಬಾಲಕಿಯು ಇದ್ದಾಳೆ. ಪೋಕ್ಸೋ ಕಾಯ್ದೆ ಅಡಿಯಲ್ಲಿ ಆರೋಪಿಯನ್ನು ಬಂದನಕ್ಕೆ ಒಳಪಡಿಸಿಲ್ಲ. ರಾಜಕಾರಣ ತಂತ್ರವಿರಬಹುದು ಎಂಬ ಅನುಮಾನವೂ ಉಂಟಾಗುತ್ತದೆ.
ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಕೌಟುಂಬಿಕ ಹಿಂಸಾಚಾರವನ್ನು ತೊಡೆದು ಹಾಕುವ ಗುರಿಯನ್ನು ಹೊಂದಿರುವ ಅಂತರಾಷ್ಟ್ರೀಯ ಸಾಧನಗಳನ್ನು ವಿವಿಧ ಅಂತರಾಷ್ಟ್ರೀಯ ಸಂಸ್ಥೆಗಳು ಜಾರಿಗೆ ತಂದಿದೆ. ಆದರೆ ಭಾರತದಲ್ಲಿ ಇಂತಹ ಸಾಧನಗಳು ಕಂಡು ಬಂದಿಲ್ಲ. ಆದ್ದರಿಂದ ದಿನೇ ದಿನೇ ಮಹಿಳೆಯರ ಮೇಲೆ ದೌರ್ಜನ್ಯಗಳು ಹೆಚ್ಚು ತಲೇ ಇದೆ. ಕೌಟುಂಬಿಕ ದೌರ್ಜನ್ಯ, ಅತ್ಯಾಚಾರ, ಸಾಂಸ್ಥಿಕ ಪರಿಸರದಲ್ಲಿ ಹಿಂಸೆ, ಬಲವಂತ ಮದುವೆಗಳು, ಗೌರವದ ಹೆಸರಿನಲ್ಲಿ ಹತ್ಯೆ, ಬಾಲ್ಯ ವಿವಾಹ, ವಿಧವೆಯರಿಗೆ ದೈಹಿಕ ಮತ್ತು ಮಾನಸಿಕ ನಿಂದನೆ, ಉದ್ಯೋಗ ಸ್ಥಳದಲ್ಲಿ ದೌರ್ಜನ್ಯ, ಸ್ತ್ರೀ ಜನನಾಂಗ ಯೂನಿಗೊಳಿಸುವುದು, ಅಲ್ಲದೆ ಲೈಂಗಿಕ ಕಿರುಕುಳದ ಪರಿಕಲ್ಪನೆ ಮನುಕುಲದ ಇತಿಹಾಸದಷ್ಟು ಹಳೆಯದಾಗಿದೆ.
'ಕ್ರೈಂ ರೆಕಾರ್ಡ್ ಬ್ಯುರೋ' ಭಾರತದ ಪ್ರಕಾರ, ದೇಶದಲ್ಲಿ ಪ್ರತಿ 78 ಗಂಟೆಗಳಿಗೊಮ್ಮೆ ಒಂದು ವರದಕ್ಷಿಣೆ ಸಾವು, ಪ್ರತಿ 59 ನಿಮಿಷಕ್ಕೆ ಒಂದು ಕಿರುಕುಳ, ಪ್ರತಿ ಮೂರು ನಿಮಿಷಕ್ಕೆ ಅತ್ಯಾಚಾರ, ಪ್ರತಿ 12 ನಿಮಿಷಕ್ಕೆ ಒಂದು ಚಿತ್ರಹಿಂಸೆ, ದೌರ್ಜನ್ಯಗಳು ನಡೆಯುತ್ತಲೇ ಇವೆ. ಕರಣಗಳು ಕಂಡು ಬಂದರು ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಮಾನಸಿಕ ಅಸ್ವಸ್ಥತೆಯ ಸಂಬಂಧವನ್ನು ಸಮರ್ಪಕವಾಗಿ ಅನ್ವೇಷಿಸಲಾಗಿಲ್ಲ. ಭಾರತೀಯ ಸಮಾಜ ಯಾವಾಗಲು ಮಹಿಳೆಯರನ್ನು ಗೌರವಿಸುತ್ತದೆ, ಎಂದು ಹಿಂದೂ ಧರ್ಮದಲ್ಲಿ ಪುರುಷ ಮತ್ತು ಮಹಿಳೆ ದೈವಿಕ ದೇಹದ ಎರಡು ಭಾಗಗಳನ್ನು ಪ್ರತಿನಿಧಿಸುತ್ತಾರೆ. ಆದರೆ ಮಹಿಳೆಯರಿಗೆ ಎಂದಿಗೂ ಸಮಾನ ಸ್ಥಾನಮಾನ, ಅವಕಾಶಗಳು ನೀಡಲಿಲ್ಲ. ಹೆಣ್ಣು ಭಾರತ ಮಾತೆ ಎಂದು ಬಾವುಟ ಕೈಗೆ ಕೊಟ್ಟು ಸಿಂಹದ ಮೇಲೆ ಕೂರಿಸುತ್ತಾರೆ. ಆದರೆ ನ್ಯಾಯಾಲಯಗಳಲ್ಲಿ ನ್ಯಾಯಮಾತೆಗೆ ಮಾತ್ರ ಕಣ್ಣಿಗೆ ಕಪ್ಪು ಪಟ್ಟಿ ಕಟ್ಟುತ್ತಾರೆ.
ದೇಶಕ್ಕೆ ಚಿನ್ನದ ಪದಕವನ್ನು ತಂದು ಕೊಟ್ಟ ಮಹಿಳೆಯರಿಗೆ ನ್ಯಾಯ ಸಿಗದಿದ್ದಾಗ, ಸಾಮಾನ್ಯ ಮಹಿಳೆಯರಿಗೆ ಇನೇಷ್ಟು ಮಾತ್ರಕ್ಕೆ ನ್ಯಾಯ ಸಿಗುತ್ತದೆ. 'ಭೇಟಿ ಪಡಾವೋ ಬೇಟಿ ಬಚಾವೋ' ಎಂದವರೇ ಇಷ್ಟೆಲ್ಲ ಪ್ರತಿಭಟನೆ ನಡೆಯುತ್ತಿದ್ದರು ರೋಡ್ ಶೋ ಮಾಡುತ್ತಿದ್ದದ್ದು ಎಷ್ಟು ಮಾತ್ರಕ್ಕೆ ಸರಿ. ಆಕೆಗೆ ರಾಜಕೀಯ ಕ್ಷೇತ್ರದಲ್ಲಿ ಹೋಗಲು ಬಿಡುವುದಿಲ್ಲ ಇನ್ನೊಂದೆಡೆ ದೇಶಕ್ಕೆ ಪದಕ ತಂದರು ಗೌರವವಿಲ್ಲ. ಭಾರತದ ಕುಸ್ತಿ ಫೆಡರೇಶನ್ ಅಧ್ಯಕ್ಷ ಭ್ಯೂಷಣ್ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಖ್ಯಾತನಾಮ ಇಲ್ಲಿ ನಡೆಸಿರುವ ಪ್ರತಿಭಟನೆಗೆ ಈಗಾಗಲೇ 5 ಲಕ್ಷಕ್ಕೂ ಹೆಚ್ಚು ವೆಚ್ಚ ಮಾಡಿದ್ದಾರೆ. 5 ಲಕ್ಷ ರೂಪಾಯಿಯಲ್ಲಿ ಹಾಸೀಗೆಗಳು, ಬೆಡ್ ಶೀಟ್ ಗಳು, ಫ್ಯಾನ್ ಗಳು, ಸ್ಪೀಕರ್ ಮತ್ತು ಮೈಕ್ರೋಫೋನ್, ಮಿನಿ ಪವರ್ ಜನರೇಟ್ ಗಳನ್ನು ಪ್ರತಿಭಟನೆಯ ಸ್ಥಳದಲ್ಲಿ ಅಳವಡಿಸಿಕೊಂಡಿದ್ದಾರೆ. ಆರಂಭದಲ್ಲಿ ಅವರು ಹಾಸಿಗೆ ಬೆಡ್ ಶೀಟ್ಗಳು ಮತ್ತು ಧ್ವನಿವರ್ಧಕಗಳನ್ನು ಬಾಡಿಗೆಗೆ ತಂದಿದ್ದರು ಆದರೆ ಅವು ದಿನವೊಂದಕ್ಕೆ 27 ಸಾವಿರ ದುಬಾರಿಯಾಗುತ್ತಿತ್ತು. ಆದ ಕಾರಣ ಅವರು ಐದು ಲಕ್ಷ ವೆಚ್ಚ ಮಾಡಿ ಎಲ್ಲಾ ಪರಿಕರಗಳನ್ನು ಖರೀದಿಸಿದರು. ಊಟ ತಿಂಡಿ ಹಾಗೂ ನೀರು ಬಾಟಲಿಗಳಿಗೂ ವೆಚ್ಚಮಾಡಲಾಗಿದೆ.
ಆರೋಪಿ ಸಿಂಗ್ ಒಂದು ದಶಕದಿಂದ ಕುಸ್ತಿ ಫೆಡರೇಶನ್ ಅಧ್ಯಕ್ಷರಾಗಿದ್ದಾರೆ. ಸರಕಾರದ ಮಟ್ಟದಲ್ಲಿ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಬಹಳ ಪ್ರಭಾವ ಹೊಂದಿದ್ದಾರೆ. ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಲೈಂಗಿಕ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದ ಕುಸ್ತಿಪಟ್ಟುಗಳಲ್ಲಿ ಹೆಚ್ಚಿನವರು ಬಿಜೆಪಿಯೊಂದಿಗೆ ಗುರುತಿಸಿಕೊಂಡಿರುವವರು. ಇದೀಗ ಕೆಲವು ವಿರೋಧ ಪಕ್ಷಗಳು ಕುಸ್ತಿಪಟುಗಳ ಹೋರಾಟಕ್ಕೆ ಬೆಂಬಲ ಸೂಚಿಸಿದೆ. ಇದರಿಂದ ಈ ವಿಷಯವು ರಾಜಕೀಯ ಬಣ್ಣವೂ ಪಡೆದುಕೊಳ್ಳುತ್ತಿದೆ. ಕುಸ್ತಿ, ಅಥ್ಲೆಟಿಕ್ಸ್ ಸೇರಿದಂತೆ ಬಹಳಷ್ಟು ಕ್ರೀಡೆಗಳಲ್ಲಿ ಮಹಿಳೆಯರು ರೈತರು ಹಾಗೂ ಸಿನಿಮಾ ನಟರು ಹೆಚ್ಚಿನ ಸಂಖ್ಯೆಯಲ್ಲಿ ಅವರ ಸಾತ್ ನೀಡುತ್ತಿರುವುದು ಒಳ್ಳೆಯ ಸಂಗತಿ. ಆರೋಪಿಯ ವಿರುದ್ಧ ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾದರು ಆತನನ್ನು ಇನ್ನು ಬಂದಿಸಿಲ್ಲ. ಸರ್ಕಾರವು ತಪ್ಪಿತಸ್ಥರಿಗೆ ಕೂಡಲೇ ಶಿಕ್ಷೆ ವಿಧಿಸಬೇಕು. ಕ್ರೀಡಾಂಗಣದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷಿತ ವಾತಾವರಣ ಸೃಷ್ಟಿಸಿಕೊಡುವುದು ಸರ್ಕಾರ ಹಾಗೂ ಸಮಾಜದ ಆದ್ಯಕರ್ತವ್ಯವಾಗಿದೆ. ದೌರ್ಜನ್ಯ ಕಾರಣದಿಂದ ಹೆಣ್ಣು ಮಕ್ಕಳು ಕ್ರೀಡೆಯಿಂದ ಹಿಂದೆ ಉಳಿಯುವ ಸಾಧ್ಯತೆ ಇದೆ. ಹಾಗಾಗಿ ಹೆಣ್ಣು ಮಕ್ಕಳು ಧೈರ್ಯದಿಂದ ಕ್ರೀಡಾ ಸಾಧನೆ ಮಾಡುವಂತಹ ವಾತಾವರಣನ್ನು ಸರ್ಕಾರ ಹಾಗೂ ಸಮಾಜವು ನಿರ್ಮಿಸಬೇಕಾಗಿದೆ.
- ಅರ್ಚನ ಹೊನಲು, ಅತ್ತಿಬೆಲೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ