ಎಲ್ಲ ಆನ್ಲೈನ್ ಜಗತ್ತಿನಲ್ಲಿ ಇದ್ದವರು
ಈ ಪುಸ್ತಕದಲ್ಲಿರುವ ಎಲ್ಲಾ ಲೇಖನಗಳು ಪ್ರತಿಯೊಬ್ಬರೂ ಓದಲೇ ಬೇಕು.
ತಂತ್ರಜ್ಞಾನ ಅನ್ನುವುದು ಎಷ್ಟು ಬೆಳೆದುಬಂದಿದ್ದೆವೂ ಅಷ್ಟೇ ಇದ್ದರಿಂದ ಮನುಷ್ಯನಿಗೆ ಅಪಾಯಕಾರಿ ಆಗುತ್ತಿದೆ.
ಇಲ್ಲಿರುವ ಪ್ರತಿಯೊಂದು ಲೇಖನಗಳು ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಲೇಖನಗಳು ಅದರಲ್ಲಿ ಒಂದೊಂದು ವಿಷಯವನ್ನು ವಿವರಿಸುತ್ತಾರೆ.
ಲೇಖಕರು ಓದ್ದಿದು ಎಂಜಿನಿಯರಿಂಗ್ ಪದವಿ,ಬಿಟ್ಸ್ ಪಿಲಾನಿಯಿಂದ ಸಾಫ್ಟ್‌ವೇರ್ ಸಿಸ್ಟಮ್‌ನಲ್ಲಿ ಮಾಸ್ಟರ್ಸ್ ಡಿಗ್ರಿ,2008ರಲ್ಲಿ ಮೈಸೂರಿನ ಇನ್ಫೋಸಿಸ್ ಸಂಸ್ಥೆಯಲ್ಲಿ ಉದ್ಯೋಗಮಾಡಿದ್ದಾರೆ.ಇವಾಗ ಸದ್ಯಕ್ಕೆ ಐಬಿಎಮ್ ನಲ್ಲಿ ಉದ್ಯೋಗಮಾಡುತ್ತಿದ್ದಾರೆ.
ಅವರು ಬೆಂಗಳೂರಿನಲ್ಲಿ ನೆಲೆಸಿದ್ದು ಇವರಿಗೆ ಸಾಹಿತ್ಯದಲ್ಲಿ ಹವ್ಯಾಸ ಇದ್ದು ಇವರ ಚೊಚ್ಚಲ ಕೃತಿ ಕಾರೇಹಣ್ಣು ಕಥಾ ಸಂಕಲನವು 2019 'ಈ ಹೊತ್ತಿಗೆ' ಕಥಾ ಸಂಕಲನ ಪ್ರಶಸ್ತಿಗೆ ಭಾಜನವಾಗಿದೆ. ಅವರ ಎರಡನೇ ಕಥಾ ಸಂಕಲನ "ಫೀಫೋ" 2021 ರಲ್ಲಿ 'ಬಹುರೂಪಿ' ಯಿಂದ ಪ್ರಕಟವಾಗಿದೆ.ಇವರ ಈ ಡಾರ್ಕ್ ವೆಬ್ ಪುಸ್ತಕದಲ್ಲಿ ನಾಲ್ಕು ವಿಭಾಗದಲ್ಲಿ ವಿಂಗಡಿಸಿದ್ದಾರೆ.ಒಂದನೆಯದು ತಂತ್ರ ಜ್ಞಾನ ಹೇಗೆ ಕೆಲಸ ಮಾಡುತ್ತದೆ, ಎರಡನೆಯದು ತಂತ್ರ ಜ್ಞಾನದ ಬಳಕೆ ಮತ್ತು ಸುರಕ್ಷಾ ಕ್ರಮಗಳು ಮೂರನೆಯದು ಆಧುನಿಕ ತಂತ್ರ ಜ್ಞಾನಗಳು ನಾಲ್ಕನೆಯದು ಆಸಕ್ತಿಕರ ಸಂಗತಿಗಳು ಹೀಗೆ ಭಾಗಮಾಡಿರುವುದು ನಾವು ನೋಡಬಹುದು.
ಭಾಗ ಅ ದಲ್ಲಿ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ? ಅದರಲ್ಲಿ ಎಗ್ಸಾಟ್ಲಿ ನೀವು ಏನು ಕೆಲಸ ಮಾಡೂದು? ಇದು ಒಂದು ಲೇಖನದ ಹೆಸರು ಲೇಖನದಲ್ಲಿ ಅವರು ನೀಡಿರುವ ಮಾಹಿತಿಗಳು ಕಂಪ್ಯೂಟರ್ ನಲ್ಲಿ
ಸೊನ್ನೆ ಒಂದು ಪ್ರಪಂಚ ಸೊನ್ನೆ ಇಲ್ಲದೆ ಕಂಪ್ಯೂಟರ್‌ಗೆ ನಾವು ಏನು ಹೇಳಿದರು ಅರ್ಥವಾಗಲ್ಲ ಆದರು ಅದು ಹಾಗೆ ಕೆಲಸ ಮಾಡುತ್ತದೆ ಎನ್ನುವು ತಿಳಿಯಬಹುದು. ಮನುಷಯರು ಹೇಗೆ ಮಧ್ಯವರ್ತಿಗಳ ಜೊತೆಯಲ್ಲಿ ಕೆಲಸ ಮಾಡುತ್ತದೆವೊ ಇಲ್ಲಿ ಕಂಪ್ಯೂಟರ್ ಸಹ ಮಧ್ಯವರ್ತಿ ಭಾಷೆಯಲ್ಲಿ ಕಾರ್ಯ ಮಾಡುತ್ತದೆ,ಹಾಗೆ ಇದಕ್ಕೆ ಐದು ವೋಲ್ಟಿನ ಕರೆಂಟು ಕೊಟ್ಟು ತೆಗೆದು ಜುಂ ಅನ್ನಿಸಿ ಕೃತಕವಾಗಿ ಭಾಷೆಯನ್ನು ಅರ್ಥಮಾಡಿಸಬೇಕು .ಇದರಲ್ಲಿ 1111 ಎಂಬ ಅರ್ಥ ಬರಬೇಕು ಎಂದರೆ ಕ್ವಾರ್ಟ್ಜ್ ಕಲ್ಲು ನಾಲ್ಕು ಬಾರಿ ನಡುಗುವ ತನಕ ಹಿಡಿದಿಟ್ಟಿಕೊಳ್ಳಬೇಕು ಅಷ್ಟೇ. ಹೀಗೆ ಆದಮೇಲೆ ಕಂಪ್ಯೂಟರ್ ಭಾಷೆ ಬರುತ್ತದೆ ಮತ್ತು ಇಂತಹ ಕೋಟ್ಯಾನುಕೋಟಿ ಟ್ರಾನ್ಸಿಸ್ಟರುಗಳು ಸೇರಿದರೆ ಒಂದು ಲ್ಯಾಪ್ ಟಾಪ್ , ಮೊಬೈಲ್ ಆಗುತ್ತದೆ. ಕಂಪ್ಯೂಟರು ಹೇಗೆ ಲೆಕ್ಕ ಮಾಡುತ್ತದೆ? ಕಂಪ್ಯೂಟರ್ ಮನುಷ್ಯನಿಗೆ ಹೋಲಿಸಿದರೆ ಸರಳವಾಗಿ ಅರ್ಥಕ್ಕೆ ಸಿಗುತ್ತದೆ. ಅದಕ್ಕೆ ಇದನ್ನು ಯಂತ್ರ ಮಾನವ ಎಂದು ಕರೆಯುತ್ತಾರೆ. ಇಂಟೆಲ್ಲಿನ ಸಿಪಿಯು ಚಿಪ್ ಕಂಪ್ಯೂಟರ್ನಲ್ಲಿ ಇದು ಸರಳವಾಗಿ ಲೆಕ್ಕ ಮಾಡಲು ಉಪಯೋಗಿಸುತ್ತಾರೆ. ಟ್ರಾನ್ಸಿಸ್ಟರ್ ನಲ್ಲಿ ಮೂರು ಬಗೆಗಳು ಎಮಿಟರ್, ಬೆಸ, ಕಲೆಕ್ಟರ್ ಇದಕ್ಕೆ ನಾವು ಎಷ್ಟು ಕರೆಂಟನ್ನು ಕೊಡುತ್ತೇವೋ ಅದರ ಮೇಲೆ ಕೆಲಸ ಮಾಡುತ್ತವೆ.ಆವಾಗ ಇದು ಒಂದೊಂದು ರೀತಿ ಉತ್ತರ ಕೊಡುತ್ತವೆ.
ಕಂಪ್ಯೂಟರ್ ಹೇಗೆ ನೆನಪಿಟ್ಟುಕೊಳ್ಳುತ್ತದೆ?
ಪ್ರೈಮರಿ ಮೆಮೊರಿ, ಸೆಕೆಂಡರಿ ಮೆಮೊರಿ ಎರಡು ಕಂಪ್ಯೂಟರ್ ನಲ್ಲಿ ಕೆಲಸಮಾಡುತ್ತವೆ. ಇದರಲ್ಲಿ ಪ್ರೈಮರಿ ಮೆಮೊರಿ ಕಂಪ್ಯೂಟರ್ ಆನ್ ಇರೋವರ್ಗು ಕರೆಂಟು ಸಪ್ಲೈ ಇರುವವರೆಗೆ ಮಾತ್ರ ಶೇಖರಿಸಿದ್ದನ್ನು ಉಳಿಸಿಕೊಂಡಿರುತ್ತದೆ.
ಮ್ಯಾಗ್ನೆಟಿಕ್ ಹಾರ್ಡ್ ಡಿಸ್ಕ್ ಇದರಲ್ಲಿ ವಿಡಿಯೋ, ಫೋಟೋ, ಹಾಳೆ, ಫೈಲ್ ಗಳು ಎಲ್ಲವನ್ನೂ ಸೊನ್ನೆ ರೂಪದಲ್ಲಿ ಸೇವ್ ಮಾಡಿಕೊಳ್ಳುತ್ತದೆ. ಹೇಗೆ ಕಲರ್ ಸೇವ್ ಆಗುತ್ತವೆ, ಟೇಪ್ ಹಾರ್ಡ್ ಡಿಸ್ಕ್ ಮೇಲಿಟ್ಟಿರುವ ಎಸ್ ಎಸ್ ಡಿ ಫೋಟೋದ ಬಣ್ಣಗಳು ಕಂಪ್ಯೂಟರ್ ನಲ್ಲಿ ಬಣ್ಣಗಳಿಗೆ ಕೋಡ್ ಸೆಟ್ ಮಾಡಿರುತ್ತಾರೆ ಅದು ಪಿಕ್ಸಲ್ ರೂಪದಲ್ಲಿ ಚಿತ್ರಾನ್ನ ಕಣಕಣವಾಗಿ ಬೇರ್ಪಡಿಸುತ್ತಾರೆ.ಇದು ಸೊನ್ನೆಯ ಸಮೂಹವನ್ನು ಹಾರ್ಡ್ ಡಿಸ್ಕಿನಲ್ಲಿ ಸ್ಟೋರ್ ಮಾಡುವುದು ಹೀಗೆ.ರೀಡ್ ಓನ್ಲಿ ಮೆಮೊರಿ ಇವು ಸಾಫ್ಟ್‌ವೇರ್ ಗಳನ್ನು ROM ಮೇಲೆ ಕೆತ್ತಲಾಗಿರುತ್ತದೆ.
ಆಪರೇಟಿಂಗ್ ಸಿಸ್ಟಂನ ಕೆಲಸ ಏನು? ಇದು ಅಪ್ಲಿಕೇಶನ್, ಕರ್ನಲ್, ಸಿಪಿಯು ,ಮೆಮೊರಿ, ಡ್ರೈವ್ಸ್ ಇದರ ಮೂಲಕ ಕೆಲಸ ಮಾಡುತ್ತದೆ. ಆಪರೇಟಿಂಗ್ ಸಿಸ್ಟಮ್ ಅಂದ್ರೆ ಯಂತ್ರ ಜೀವಿಗಳ ಸರ್ಕಾರ ಇದು ನಮ್ಮ ಲ್ಯಾಪ್ಟಾಪ್ ನಲ್ಲಿ ವಿಂಡೋಸ್ ಮತ್ತು ಮೊಬೈಲ್ ನಲ್ಲಿರುವ ಆಂಡ್ರಾಯ್ಡ್ ಲಿನಕ್ಸ್. ಇಂಟರ್ನೆಟ್ ಹೇಗೆ ಹೆಣೆದುಕೊಂಡಿದೆ? ಇಂಟರ್ನೆಟ್ ಎಂದರೆ ಯಾವ್ದೇ ಒಂದು ಕಂಪನಿಯಲ್ಲಾ ಒಬ್ಬ ಮಾಲೀಕನಿಲ್ಲ ಇದು ಒಂದು ಮಾಹಿತಿ ಜಾಲವಷ್ಟೇ ,ಕೆಲವೊಂದು ಕಂಪನಿಗಳಷ್ಟೇ ಅವರ ಬಳಕೆದಾರರು ಹೆಂಚಿದ್ದಾರೆಂದು ಆದೇಶದಲ್ಲಿ ಡಾಟಾ ಸೆಂಟರ್ ಇಟ್ಟುಕೊಂಡಿದ್ದಾರೆ. ಬ್ಲೂಟೂತ್ ಹೇಗೆ ಕೆಲಸ ಮಾಡುತ್ತದೆ? ಪ್ರತಿ ವೆರೈಟಿಗಳಾದ ಟಿವಿ. ಮೊಬೈಲು, ವೈಫೈ ಬ್ಲೂಟೂತುಗಳಿಗೆ ತಮ್ಮದೇ ಆದ ಧ್ವನಿ ಇರುತ್ತದೆ.ಇದನ್ನು ಫ್ರೀಕ್ವೆನ್ಸಿ ಎನ್ನುತ್ತಾರೆ. ಬ್ಲೂಟೂತ್ ಕೂಡ ಹ್ಯಾಕ್ ಮಾಡಬಹುದು. ಯಾಕ್ ಮಾಡಬಾರದೆಂದರೆ ಕೆಲವು ಕ್ರಮಗಳನ್ನು ಅನುಸರಿಸ ಬೇಕಾಗುತ್ತದೆ. ಬಳಸದೇ ಇರುವಾಗ ಬ್ಲೂಟೂತ್ ಆಫ್ ಮಾಡಿರುವುದು, ಪಾಸ್ವರ್ಡ್ ಬಲಿಷ್ಠವಾಗಿಹಾಕಿರುವುದು, ಸ್ವಂತದ್ದಲ್ಲದ ಡಿವೈಸುಗಳೊಂದಿಗೆ pair ಮಾಡಬೇಡಿ.ಇವುಗಳನ್ನು ಅನುಸರಿಸಬೇಕು.
ಬಾರ್ ಕೋಡ್ ಕ್ಯೂಆರ್ ಕೋಡ್ ಯುಪಿಐ ಐಡಿ, ಕೀ ಲಾಗರ್ ಎಂಬ ಸೈಬರ್ ಕಳ್ಳರ ಭಯಾನಕ ಅಸ್ತ್ರ, ಫೇಸ್ಬುಕ್ ಅಕೌಂಟುಗಳು ಯಾಕೆ ಹ್ಯಾಕ್ ಆಗುತ್ತವೆ? ,5 ಎಂದರೇನು? ,ಬಿಟ್ ಕಾಯಿನ್ ಎಂದರೇನು? ಹೀಗೆ ನಾನಾ ರೀತಿಯ ವಿಷಯಗಳನ್ನು ಈ ಪುಸ್ತಕದಲ್ಲಿ ವಿವರಿಸಿದ್ದು ನಾವು ಓದಬಹುದು. 5g ಎಂದರೇನು ಈ ಲೇಖನದಲ್ಲಿ ಫೋನಿನ ಬದಲಾವಣೆ ಬಗ್ಗೆ ವಿವರವಾಗಿ ವಿವರಿಸಿದ್ದಾರೆ. ಬಿಟ್ ಕಾಯಿನ್ ಎಂದರೆ ಅದನ್ನು ಹೇಗೆ ಉಪಯೋಗಿಸುತ್ತಾರೆ, ಇದು ಯಾವಾಗಿಂದ ಪ್ರಾರಂಭವಾಯಿತು ಎಲ್ಲಿ ಚಲಾವಣೆಗೆ ಇದೆ ಇದು ಅಪಾಯಕಾರಿ ಅಲ್ಲವೇ ಹೀಗೆ ನಾನಾ ರೀತಿಯಾಗಿ ಲೇಖನದಲ್ಲಿ ವಿವರಿಸಿದ್ದಾರೆ. ಇಲ್ಲಿವರೆಗೂ ನನಗೆ ಕೆಲವೊಂದು ಹೊಸ ಮಾಹಿತಿಗಳು ದೊರಕಿದವು, ಈ ಪುಸ್ತಕ ಓದಿದ ಮೇಲೆ ತಂತ್ರಜ್ಞಾನ ಇಷ್ಟೊಂದು ಮುಂದುವರೆದಿದೆ ಎಂಬುವುದು ಅರಿವಿಗೆ ಬಂತು. ತಂತ್ರಜ್ಞಾನ ಇಷ್ಟೊಂದು ಮುಂದುವರೆದಿರುವುದರಿಂದ ನಾವುಗಳು ತುಂಬಾ ಸುರಕ್ಷಿತವಾಗಿ ಇರಬೇಕು ಎಂಬುದು ತಿಳಿಸಿಕೊಡುತ್ತದೆ. ಈ ಪುಸ್ತಕ ಸರಳ ಹಾಗೂ
ಎಲ್ಲರಿಗು ಅರ್ಥವಾಗುವ ಹಾಗೆ
ಮೂಡಿಬಂದಿರುವ ಪುಸ್ತಕವಾಗಿದೆ.
(ಪುಸ್ತಕ: ಡಾರ್ಕ್ ವೆಬ್
ಇಂಟರ್ ನೆಟ್ಟಿನಲ್ಲಿ ನೀವು ಎಷ್ಟು ಸುರಕ್ಷಿತರು?
ಲೇಖಕರು: ಮಧು ವೈ.ಎಸ್
ಮುದ್ರಕರು: ಇಮೇಜಸ್ ಪ್ರಿಂಟ್ ಸರ್ವಿಸಸ್ ಬೆಂಗಳೂರು)
- ಬಿನಿತ .ಜಿ, ಕಲಬುರಗಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ