ಮಂಗಳವಾರ, ಮೇ 2, 2023

ಹಾಯ್ಕುಗಳು - ಶಾರದ ದೇವರಾಜ್, ಎ. ಮಲ್ಲಾಪುರ.

1.  ಕಿರು ನೋಟದ
 ಸೆಳೆತ ಮನವನು
 ಕದಡುತಿದೆ.

2.  ಓರೆಗಣ್ಣಿನ
 ಚೆಲುವೆಯ ನೋಟಕೆ
 ನಾ ಮನಸೋತೆ.

3.  ಕಣ್ಣಂಚಿನೋಟ
 ನೂರೊಂದು ಪಾಠ ಹೇಳಿ
 ಮರೆಯಾಗಿದೆ.

4.  ಕಣ್ಣಂಚಿನಲ್ಲಿ 
ಮಿಂಚಿನಂಥ ನೋಟವು
 ಹೊಳೆಯುತಿದೆ.

5.  ಸಂಕ್ಷಿಪ್ತ ನೋಟ
 ಸಮೃದ್ಧ ಭಾವದಲಿ
 ಸ್ವಷ್ಟತೆಯಿದೆ.
  
6.   ಸಾತ್ವಿಕ ನೋಟ   
 ಶುದ್ಧ ಭಾವನೆಯಲ್ಲಿ
 ಸಮೃದ್ಧಿಸಿದೆ.

7.   ಕಣ್ಣಿನ ನೋಟ
 ಕಲೆತಾಗ ಮೂಡಿತು
 ಪ್ರೇಮಾನುರಾಗ.

- ಶಾರದ ದೇವರಾಜ್, ಎ. ಮಲ್ಲಾಪುರ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ...

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ.....            ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್   ಉಪನಿರ್ದೇಶಕರ ಹಾಗೂ ಕ್ಷೇತ್ರ...