ಮನೆಮನೆಯ ಬಾಗಿಲನು ತಟ್ಟುತ್ತ ಬರುವರು
ಮತದಾನದ ಮಹತ್ವ ತಿಳಿಸಿ ಹೇಳುವರು
ಕೈಮುಗಿದು ವಿನಯವನು ತೋರಿ ಬೇಡುವರು
ಮತದಾರಬಂಧು ಎನುತ ಸಂಬಂಧ ಬೆಸೆಯುವರು
ಆಶ್ವಾಸನೆ ಮಹಾಪೂರ ಹರಿದುಬರುವುದು
ವಿಧವಿಧ ಕಾಣಿಕೆಗಳ ನೀಡಿ ಬೇಡುವರು
ಕೆರೆ ರಸ್ತೆಗಳಿಗೆಲ್ಲ ದುರಸ್ತಿಯು ಆಗುವುದು
ಪ್ರಜೆಗಳಿಗೆ ವಿವಿಧ ಸವಲತ್ತು ನೀಡುವರು
ಚುನಾವಣೆಯ ದಿನ ಮನೆಮನೆಗು ವಾಹನವು
ಕರೆದೊಯ್ಯೆ ಕಳುಹುವರು ಕೈಲಾಗದವರಿಗೆ
ಪ್ರಜಾಪ್ರಭುತ್ವದ ಹಕ್ಕೆಂದು ಬೀಗುವನು ಮತದಾರ
ಒಂದು ದಿನದ ಸಂಭ್ರಮ ಇದೆಂಬುದನು ಮರೆವ
ಚುನಾವಣೆಯೊಮ್ಮೆ ಮುಗಿಯಿತೆಂದರೆ
ತಿರುಗಿ ನೋಡರು ಮತ್ತೆ ಮತದಾರರನ್ನು
ಮತದಾರನ ಬವಣೆ ಎಂದು ಸರಿಹೋಗದದು
ಪ್ರಜಾಪ್ರಭುತ್ವದ ಸ್ಥಿತಿಯು ಇದು ನಿತ್ಯಸತ್ಯ.
- ಮಾಲತಿ ಮೇಲ್ಕೋಟೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ