ಒಂದು ಹಳ್ಳಿಯಲ್ಲಿ ವ್ಯವಸಾಯ ಮಾಡುತ್ತಿದ್ದ ಕುಟುಂಬವೊಂದಿತ್ತು. ಆ ಕುಟುಂಬದಲ್ಲಿ ಐದು ಮಂದಿ ಹೆಣ್ಣುಮಕ್ಕಳೇ ಜನಿಸಿದ್ದರು. ಕೊನೆಯವರ ಮಾತೃಪ್ರೇಮದ ಯಶಸ್ವಿ ಕಥೆಯಿದು. ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡಿದ್ದರು ಬಹಳ ಚುರುಕು ಸ್ವಭಾವದವರು ಅಪಾರ ಜ್ಞಾನ ಹೊಂದಿದ್ದರು. ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದರು. ಓದಿನಲ್ಲಿ ಹಾಗೂ ಚಟುವಟಿಕೆ , ಆಟೋಟಗಳಲ್ಲಿ ಅವರೇ ಮೊದಲಿಗರು. ಶಾಲೆಯ ನಂತರ ಹಸುಗಳನ್ನು ಮೇಯಿಸುವುದು, ಸೊಪ್ಪು ಮಾರುವುದು ಹೀಗೆ ಸಣ್ಣವಯಸ್ಸಿನಲ್ಲಿಯೇ ಹಣ ಸಂಪಾದನೆಯ ಮಾರ್ಗಗಳನ್ನು ಹುಡುಕಿಕೊಂಡು ಕುಟುಂಬಕ್ಕೆ ನೆರವಾಗಿದ್ದರು. ಅವರು ೫ನೇ ತರಗತಿಯಲ್ಲಿ ಇದ್ದಾಗಲೇ ದೊಡ್ಡಕ್ಕನ ಮದುವೆ ಆಯಿತು. ನಂತರ ಅವರಿಗೆ ಇನ್ನಷ್ಟು ಜವಾಬ್ದಾರಿಗಳು, ಅಮ್ಮನಿಗೆ ಸಾಲಭಾದೆ, ಜೀವನ ನಿಬಾಯಿಸಲು ಕಷ್ಟವೆಂದು ಅರಿತು, ಇದೆನ್ನೆಲ್ಲಾ ಮನಸಿಗೆ ಹಾಕಿಕೊಂಡು ಶಾಲೆ ಬಿಟ್ಟು ಅವರೇ ಸ್ವಂತ ಅಂಗಡಿ ಹಾಕಿ ವ್ಯಾಪಾರ ಮಾಡುತ್ತಾ, ಹಸುಗಳನ್ನು ಸಾಕಿ ಹಾಲನ್ನು ಮಾರುತ್ತಾ ಊರೂರು ಸುತ್ತಿ ಸೊಪ್ಪು ತರಕಾರಿ ಮಾರುತ್ತಾ ಕುಟುಂಬದ ಜವಾಬ್ದಾರಿಯನ್ನು ಹೊತ್ತು ಎಲ್ಲಾ ಅಕ್ಕಂದಿರ ಮದುವೆ ಮಾಡಿ ಅವರ ಬಾಣಂತನ ಮಾಡಿ, ಮಕ್ಕಳ ಹಾರೈಕೆ ಮಾಡುವ ವೇಳೆಗೆ ಅವರಿಗೂ ೧೭ ವರ್ಷ ತುಂಬಿತು ಇನ್ನೂ ಎಲ್ಲರೂ ಮದುವೆ ವಿಚಾರ ಪ್ರಸ್ತಾಪ ಮಾಡುತ್ತಾ ವರನನ್ನು ಹುಡುಕಲು ಪ್ರಾರಂಭಿಸಿದರು. ಒಬ್ಬ ಸೂಕ್ತ ಸರ್ಕಾರಿ ಉದ್ಯೋಗದಲ್ಲಿದ್ದ ವರನನ್ನೇ ಹುಡುಕಿ ಎಲ್ಲಾ ಉಡುಗೊರೆಗಳನ್ನು ನೀಡಿ ಮದುವೆಯೂ ಮಾಡಿದರು. ತದ ನಂತರವೇ ಅವರ ಜೀವನದಲ್ಲಿ ಇನ್ನಷ್ಟು ಕಷ್ಟಗಳು ಒದಗಿ ಬಂದವು. ಗಂಡ ಸರ್ಕಾರಿ ನೌಕರ ಹಾಗೂ ಹಳ್ಳಿ/ಸಮಾಜ ಸೇವಕ ಅವರ ಹಳ್ಳಿಗೆಲ್ಲಾ ಅವನೊಬ್ಬನೇ ಸರ್ಕಾರಿ ಉದ್ಯೋಗಿ ಸರ್ವರ ಕಷ್ಟಗಳೆಲ್ಲಾ ತನ್ನದೆಂದು ಭಾವಿಸುತ್ತಾ ಅವರ ಕಷ್ಟಗಳಲ್ಲಿ ಬಾಗಿಯಾಗಿ ಪರಿಹಾರಗಳ, ದನಸಹಾಯ ಮಾಡುತ್ತಿದ್ದ. ದಿನ ಮನೆಯಲ್ಲಿ ದಾಸೋಹ ಸಂಬಳ ಕಡಿಮೆ ಗಂಡನಿಗೆ , ಬಂದವರಿಗೆ ಬಡಿಸಿ ಆಕೆ ಖಾಲಿ ಹೊಟ್ಟೆಯಲ್ಲಿಯೇ ಅಥವಾ ಗಂಜಿಯನ್ನು ಕುಡಿದು ದಿನ ಕಳೆಯುವಂತಾಯಿತು ಕಾರಣ ಜನರ ನಿಂದನೆಗೆ ಸಿಕ್ಕುವಳೆಂಬ ಭಯದಿಂದಲೇ. ಹಳ್ಳಿಯಲ್ಲಿ ಮದುವೆ ಮುಂಜಿ ಏನೇ ಆದರೂ ಸಹ ಇವರ ಗಂಡನ ಹಣದಿಂದಲೇ ನಡೆಯಬೇಕಾಗಿತ್ತು. ಬರುವ ಸಂಬಳ ಸಾಕಾಗುತ್ತಿರಲಿಲ್ಲ ಸಾಲ ಮಾಡಿ ಸಹಾಯ ಮಾಡುತ್ತಿದ್ದರು. ಇಂತಹ ಸಂದಿಗ್ಧ ಸಮಯದಲ್ಲೇ ೩ ಮಕ್ಕಳು ೨ ಹೆಣ್ಣು ಒಂದು ಗಂಡು. ಇನ್ನು ಮಕ್ಕಳ ವಿದ್ಯಾಭ್ಯಾಸ ಸರ್ಕಾರಿ ಶಾಲೆಯಲ್ಲಿಯೇ ನಡೆಯುತ್ತಿತ್ತು. ಅವಳು ಗಂಡ , ಮಕ್ಕಳು, ನೆಂಟರು , ಇಷ್ಟರ ಸುಃಖ -ದುಃಖಗಳಲ್ಲಿ ಭಾಗಿಯಾಗಿ ಅವಳಿಗೆಂದು , ಅವಳ ಸುಃಖಕ್ಕೆಂದು ಒಂದೂ ದಿನವೂ ಮೀಸಲಿಡಲಿಲ್ಲ , ಹೊಸ ಬಟ್ಟೆ ತೊಡಲಿಲ್ಲ. ಈ ನಡುವೆ ಅತ್ತೆ-ಬಾವ- ನಾದಿಯರ ಕಾಟದೊಂದಿಗೆ ಬೇಸೆತ್ತು ಅವಳ ಮಗ ಎಂಟನೇ ತರಗತಿಯಲ್ಲಿದ್ದಾಗ ವಿದ್ಯಾಭ್ಯಾಸ ಮುಂದುವರೆಸುವ ನಿರ್ಣಯ ತೆಗೆದುಕೊಂಡು ಹತ್ತನೇ ತರಗತಿಯ ಪರೀಕ್ಷೆ ಬರೆದು ಪಾಸಾಗಿ ಶಿಶುವಾರದ ಶಿಕ್ಷಕಿಯೂ ಸಹ ಆದಳು. ಆವೇಳೆಗಾಗಲೇ ಗಂಡನ ಸಮಾಜಸೇವೆ ಇನ್ನಷ್ಟು ಹೆಚ್ಚಾಯಿತು ಹಾಗೆಯೆ ಕೆಲವು ದುಷ್ಟ ಚಟಗಳಿಗೆ ದಾಸನಾದ ಇನ್ನು ಆ ಹೆಣ್ಣಿನ ಕಥೆ ಹೇಳತೀರದಾಯಿತು. ಮಕ್ಕಳಿಗೆ ತಿಳಿಯದಂತೆ ಅನೇಕ ಕಷ್ಟಗಳನ್ನು ಹಿಂಸೆಗಳನ್ನು ತಾನೇ ಎದುರಿಸುತ್ತಿದ್ದಳು. ಮುಂದೆ ಮಕ್ಕಳ ಮುಂದೆಯೂ ಸಹ ಹೆಚ್ಚಿನ ಜಗಳಗಳೇ ನಡೆಯುತ್ತಾ ಹೋಯಿತು. ಈ ಪರಿಸ್ಥಿತಿಯಲ್ಲಿ ಮಗಳ ಮದುವೆಯೂ ನಡೆಯಿತು. ಮುಂದೊಂದು ದಿನ ಅವಳ ನಲವತ್ತರ ವಯಸ್ಸಿನಲ್ಲಿಯೇ ಗಂಡನಿಗೆ ಹೃದಯಘಾತವಾಗಿ ಸಾವನ್ನಪ್ಪಿದನು. ಸಮಾಜ ಸೇವೆಗೆಂದು ಗಂಡ ಬಹಳಷ್ಟು ಸಾಲ ಮಾಡಿದ್ದ ಕಾರಣ ಮಗನಿಗೆ ಸರ್ಕಾರವೇ ಕೆಲಸ ನೀಡಿತು. ಅದರೆ ಅವಳ ಕಷ್ಟಗಳು ಮಾಸಿ ಸುಃಖದ ದಿನಗಳು ಬರಲೇ ಇಲ್ಲ ನಿವೃತ್ತಿ ವಯಸ್ಸು ದಾಟುವವರೆಗೂ ಕೆಲಸ ಮಕ್ಕಳನ್ನು ತುಂಬಾ ಅಪರೂಪವಾಗಿ ಪ್ರೀತಿಯಿಂದ ಬೆಳೆಸಿದ್ದಳು, ಎಲ್ಲರನ್ನೂ ವಿದ್ಯಾವಂತರನ್ನಾಗಿ ಮಾಡಿದ್ದಳು ಎಲ್ಲರೂ ಅವರವರ ಕೆಲಸಗಳ ಕಡೆಯಲ್ಲಿ ಮಗ್ನರಾಗಿದ್ದಾರೆ ಇದುವರೆಗೂ ಮಕ್ಕಳೂ ಸಹ ಅವಳನ್ನೂ ಪ್ರೀತಿಸುವ ಗೋಜಿಗೆ ಹೋಗಿಲ್ಲ. ಈಗಲೂ ನೊಂದ ಮುದಿ ಮನಸು ಪ್ರೀತಿಸುವ ಹೃದಯಕ್ಕಾಗಿ ಕಾಯುತ್ತಲೇ ಇದೆ......
- ಮಮತ (ಕಾವ್ಯ ಬುದ್ಧ),
ಕನ್ನಡ ಅದ್ಯಾಪಕಿ , ಸಾಹಿತಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ