ಪಂಕಜಳೀಗೆ ಮೂವರು ಮಕ್ಕಳು, ಅದರಲ್ಲಿ ಎರಡು ಹೆಣ್ಮಕ್ಕಳು ಒಬ್ಬ ಗಂಡುಮಗ.
ಎರಡೂ ಹೆಣ್ಮಕ್ಕಳು ಎಂದು ಅತ್ತೆಯವರು ಅತ್ತಿದ್ದರಂತೆ .ಮುಂದೆ ನನ್ನಮಗನೀಗೆ ವಾರುಸುದಾರ ಇಲ್ಲವೇ?ಎಂದು .ಅದನ್ನು ನನ್ನಲ್ಲಿ ಹೇಳುತ್ತಾ ಇದ್ದರು .ಆಗ ಪಂಕಜ ಹೇಳಿದಂತೆ"ಎರಡು ಹೆಣ್ಮಕ್ಕಳಾದರೆ ಅವರೀಗೆ ಬರುವ ಗಂಡ ನಮಗೆ ಮಗನೆಂದು ತಿಳಿಯುವ ಅಳಿಯ ಅಂತ ಹೇಳುವುದೇ ಬೇಡ " ...ಆಗ ಅತ್ತೆಯ ಸರದಿ, "ಅದು ಹೇಗೆ ಸಾಧ್ಯ ಅಳಿಯ ,ಅಳಿಯನೇ ,ಮಗ ಮಗನೇ "ನಾನು ಒಪ್ಪಲ್ಲ ಅಂದ್ರು .ಹಾಗಾದರೆ ಸೊಸೆಯನ್ನು ಮಗಳಂತೆ ನೋಡಬೇಕು ಎಂದು ನೀವು ಹೇಳುತ್ತೀರಿ ಎಂದಾಗ ನಾನು ಹಾಗೆ ಹೇಳಿಲ್ಲ "ಮಗಳು ,ಮಗಳೇ ಸೊಸೆ ಸೊಸೆಯೇ ಎಂದರು ".
ಇಂಥವರ ಜೊತೆ ವಾದ ಮಾಡಿ ಪ್ರಯೋಜನ ಇಲ್ಲ ಎಂದು ಸುಮ್ಮನಾದಳು..
ಎರಡನೇ ಮಗಳೀಗೆ ಏಳು ವರುಷ ತುಂಬಿದಾಗ ಪಂಕಜಳೀಗೆ ಮಗ ಹುಟ್ಟಿದ ..ದಿನ ನನ್ನ ಅತ್ತೆ ಅಮ್ಮನ ಉಪದೇಶ ಕೇಳಿ ಸೋತು ಹೋದೆ .ನಂತರ ಮಗನ ಜನನ ವಾಯಿತು ...ಆಗ ಅದ ಸಂತೋಷ ಅಷ್ಟಿಷ್ಟಲ್ಲ .ನಮ್ಮ ಅತ್ತೆಗೆ ".ಕೆಳಗೆ ಇಟ್ಟರೆ ಇರುವೆ ಕಡಿದು ಬಿಡಬಹುದು .ಮೇಲೆ ಇಟ್ಟರೆ ಕಾಗೆ ಕುಕ್ಕಬಹುದು ಎಂಬಂತೆ ನೋಡಿಕೊಂಡರು ..".
ಅವನನ್ನು ಅಳಲು ಬಿಡರು ....ಹೀಗೆ ಅವನನ್ನು ಮುದ್ದು ಮಾಡುತ್ತಾ ಬೆಳೆಸಿದರು ...ಎಂದು ಪಂಕಜ ಹೇಳುತ್ತಾ ಇದ್ದಳು..
ಹೀಗೆ ವರುಷಗಳು ಕಳೆದವು .ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಡುವ ವಯಸ್ಸಿಗೆ ಬಂದಾಗ
ಒಳ್ಳೆ ಸಂಬಂಧದಿಂದ ವರ ಸಿಕ್ಕಿದ ಮದುವೆ ಮಾಡಿ ಬಿಟ್ಟೆವು .ಅಲ್ಲಿ ಎರಡು ಹುಡುಗರು ಮಾತ್ರ ಬೀಗರೀಗೆ .ಅವರು ಹೇಳುತ್ತಾ ಬಂದರು ನಮಗೆ ಹೆಣ್ಣುಮಕ್ಕಳಿಲ್ವ.ಅದಕ್ಕೆ ಮಗಳಾಗಿ ಬಂದಳು ನಿಮ್ಮ ಮಗಳು ಎನ್ನಬೇಕೇ!?
ಆಗ ನನಗಾದ ಸಂತೋಷ ಅಷ್ಟಿಷ್ಟಲ್ಲ,ನಾನೂ ಹೇಳಿದೆ ನಮಗೆ ಒಬ್ಬನೇ ಮಗ ಇನ್ನು ಎರಡು ಜನ ಆಯಿತು ..ನಂತರ ಮೂವರು ಎಂದೆ ..ಸೊಸೆ ಬಂದಾಗ ನಮಗೆ ಆರು ಮಕ್ಕಳು ಎಂದು,ನಾನಂದೆ
ನಮಗೆ ಮೂವರು ಮಗಳಂದಿರು ಸೊಸೆ ಅಲ್ಲ ಎಂದಳು ....ಪಂಕಜ
ಮಗನೂ ದೊಡ್ಡವನಾದ ಅವನೀಗೂ ಮದುವೆ ಆಯಿತು...
ಆಗ .....
ಸೊಸೆಯಲ್ಲಿ ಅವರ ಅಪ್ಪ ಅಮ್ಮ ಮತ್ತು ಮನೆಮಂದಿಯೆಲ್ಲಾ ಹೊಸತರಲ್ಲಿ ಕೇಳಿದರಂತೆ ಹೇಗಾಗುತ್ತೆ ನಿನ್ನ ಮನೆ ಮನೆಯ ಮಂದಿಗಳೆಲ್ಲಾ ಅಂದಾಗ ನನಗೆ ಈಗ ಎರಡು ತವರು ಮನೆ ಅಪ್ಪಾ ಎಂದು ಹೇಳಿದಳಂತೆ ...ಅದನ್ನು ಕೇಳಿ ನನಗೆ ಹೃದಯ ತುಂಬಿ ಬಂತು ಎಂದು ಪಂಕಜ ಅವಳ ಮನದಲ್ಲೇ ಅಂದಳು.
ಚಂದದ ಕುಟುಂಬ ಪತಿ ಮತ್ತು ಪತ್ನಿ ಇವರೀಗೆ ಮಗಳು ಮಗ ಇಬ್ಬರು ಮಕ್ಕಳು .ಎಲ್ಲರಂತೆ ಮಗಳನ್ನು ಚೆನ್ನಾಗಿ ಓದಿಸಿ ಬೆಳೆಸಿ ಇನ್ನೇನು ಮಗಳೀಗೆ ಮದುವೆ ಮಾಡಲು ಗಂಡು ಹುಡುಕುತ್ತಿದ್ದಂತೆಯೇ ಮಗಳು ಬೇರೆ ಕುಲದ ಗಂಡನ್ನು ಪ್ರೀತಿಸಿ ಮದುವೆ ಆಗಿ ಮನೆಗೆ ಕರೆತಂದು ಅಪ್ಪನ ಅಮ್ಮನ ಆಶೀರ್ವಾದ ಪಡೆಯಲು ಬಂದಳು ...ಬಂದಾಗ ಅಪ್ಪ ಅಮ್ಮನೀಗೆ ಶಾಕ್ ಅಪ್ಪ ಒಳಗೆ ಬರಲು ಬಿಡದೆ ನನಗೆ ಮಗಳೇ ಇಲ್ಲ ಅಂದು ಬಿಟ್ಟು ಹೊರಹಾಕಿದ ...ಬೇಸರದಿಂದ ಮಗಳು ಮನೆಬಿಟ್ಟು ಪತಿಯೊಂದಿಗೆ ನಡೆದಳು ...ಅಮ್ಮನಿಗೆ ಏನೂ ಮಾಡಲೂ ಸಾಧ್ಯವಿಲ್ಲ...ಕೊರಗುತ್ತಲೇ ಇದ್ದಳು ..ಆಗ ಫೋನು ಇರಲಿಲ್ಲ ಕಾಗದದ ಮುಖಾಂತರವೇ ವ್ಯವಹಾರ...ಆದರೆ ಅವರು ವಿದೇಶಕ್ಕೆ ಹಾರಿದರು ...ಎರಡು ,ಮೂರು ವರುಷ ಮಗಳ ಸುದ್ದೀಯೇ ಇಲ್ಲ ,ಅವಳೀಗೆ ಒಂದು ಮಗುಆಗಿತ್ತು .ಆಗ ಅವಳ ಅಪ್ಪನೀಗೆ ಹೃದಯಾಘಾತ ಆಗಿತ್ತು ...ಅದಕ್ಕೆ ಸರ್ಜರಿ ಆಗಬೇಕಾದರೆ ತುಂಬಾ ಹಣ ಕಟ್ಟಬೇಕು ಎಲ್ಲಿಂದ ತರಲೀ...ಎಂದು ಅಮ್ಮ ದುಃಖಿಸಿದಾಗ ನೆನಪಾಗಿದ್ದುದು ಮಗಳು ಅಳಿಯ .ಕೂಡಲೇ ಟೆಲಿಗ್ರಾಂ ಕೊಟ್ಟು ಬಿಟ್ಟಳು ಅಮ್ಮ ,ತಕ್ಷಣ ಹೊರಟು ಬನ್ನಿ ಅಪ್ಪನೀಗೆ ಮೈನರ್ ಹಾರ್ಟ್ಎಟೆಕ್ ಆಗಿದೆ ತಕ್ಷಣ ಸರ್ಜರಿ ಮಾಡಿದರೆ ಅಪ್ಪ ಉಳಿಯಬಹುದು ಎಂದು ...ಅದನ್ನು ಕೇಳಿದ ತಕ್ಷಣ ಮಗಳು ಅಳಿಯ ಮೊಮ್ಮಗ ಇಂಡಿಯಾಕ್ಕೆ ಬಂದು ಅಪ್ಪನ ಯೋಗಕ್ಷೇಮ ವಿಚಾರಿಸಿದರು .ನಂತರ ಆಪರೇಷನ್ ಮಾಡಲು ಹಣ ಕಟ್ಟಿದರು .ಎಲ್ಲಾ ಅಳಿಯನೇ .....ಆಗ ಅಮ್ಮ ಹೇಳಿದ ಮಾತು .ಪತಿಯಲ್ಲಿ ನಿಮಗೆ ಒಬ್ಬ ಮಗ ಅಲ್ಲ ಇಬ್ಬರು .ಇವನು ಜವಾಬ್ದಾರಿ ಹೊತ್ತ ಮಗ ನಮ್ಮ ನಿಜವಾದ ಮಗ ಚಿಕ್ಕ ಈಗ .ಅಂದಳು .ಆಗ ಪತಿಗೆ ಕಣ್ಣಲ್ಲಿ ನೀರು ತುಂಬಿಕೊಂಡು ಹೌದು ನಾನು ತಪ್ಪು ಮಾಡಿದೆ ಅಳಿಯಂದಿರೇ. ಮಗನ ಸ್ಥಾನದಲ್ಲಿ ನಿಂತು ನನ್ನ ನೋಡಿಕೊಂಡಿರುವಿರಿ .ಎಂದು ಹೇಳಿ ಕೈಮುಗಿದರು ....
ಮಾವ ನೀವು ಹೀಗೆ ಅನ್ನ ಬಾರದು ನನ್ನ ಸ್ಥಾನದಲ್ಲಿ ಯಾರೇ ಇದ್ದರೂ ಹೀಗೆ ಮಾಡುವರು .ನೀವು ಬೇಸರ ಮಾಡಬೇಡಿ ದೈರ್ಯ ದಿಂದಿರಿ ನಿಮಗೆ ಏನೂ ಆಗಿಲ್ಲ ..ಉಷಾರಾಗುವುರಿ.ಎಂದು ಸಮಾಧಾನದ ಮಾತನ್ನು ಹೇಳಿದ ಖುಷೀ ಆಯಿತು ..ಮಾವನೀಗೆ...
ಹೀಗೆ ಅಳಿಯ ಮಗನಾದ ....
- ಆಶಾನೂಜಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ