ಬರವಣಿಗೆಯ ಮೇಲಿರಲಿ
ಅಕ್ಷರದ ಅಭಿಮಾನ
ಇದ ತೋರಿಸಲು ಬೇಕಿಲ್ಲ
ಯಾವ ಬಿಂಕ ಬಿಗುಮಾನ l
ಅಕ್ಕರೆಯ ಅಕ್ಷರದೊಳಿರಲಿ
ಶುದ್ಧ ಭಾವದ ದೃಡೀಕರಣ
ಅಕ್ಷರದರ್ಥಗಳ ಮೇಲಿರಲಿ
ಸ್ಪಷ್ಟ ಬದುಕಿನ ನಿಲ್ದಾಣl
ನಿಂತ ನೀರಂತಾಗದಿರಲಿ
ಅಕ್ಷರ ಸಾಹಿತ್ಯದ ಅಬ್ಬರ
ಹರಿವ ನದಿಯಂತಾಗಲಿ
ಕೀರ್ತಿಗರಿಮೆಯ ಸಂಸ್ಕಾರl
ಆದರ್ಶದ ಬರವಣಿಗೆ
ಶುದ್ಧ ಜೀವನದ ಬೆಳವಣಿಗೆ
ತೋರ್ಪಡಿಸು ಸಂಯಮವ
ಸಾಹಿತ್ಯ ಸಂಸ್ಕೃತಿಯ ಕೌಸ್ತುಭವl
- ಶಾರದಾ ದೇವರಾಜ್, A ಮಲ್ಲಾಪುರ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ