ಬೀಗುವವರಿಗೆ ಬೀಗಲುಬಿಡಿ,
ಬೋಗಳುವವರಿಗೆ ಬೊಗಳಲುಬಿಡಿ,
ಬೆನ್ನಹಿಂದೆ ಚುರಿಯಿರಿಯುವವರಿಗೆ ಇರಿಯಲುಬಿಡಿ,
ಬೀಳುವುದು ಖಚಿತವೆಂದಾಗ,
ಪ್ರತಿಕ್ರಿಯೆ ಇಲ್ಲವೆಂದಾಗ,
ನಿಮ್ಮ ಆತ್ಮಸ್ಥೈರ್ಯ ಧೃಡವಿದ್ದಾಗ
ಭಾಗ್ಯವೂ ಕೂಡಾ ಬದಲಾಗುವುದು,
ಬೀದಿಯೂ ಕೂಡಾ ಬದಲಾಗುವುದು,
ಚುರಿಯೂ ಕೂಡಾ ಚಮತ್ಕಾರವಾಗಿ ಬದಲಾಗುವುದು
ಸೋಲಿನ ಪಯಣದಲ್ಲಿ ಮುನ್ನಡೆದರೂ
ಗೆಲುವಿನ ಬಾಗಿಲು ತೆರೆಯದೇ ಹೋದರೂ
ಆತ್ಮ ವಿಶ್ವಾಸವೇ ಗೆಲುವಿನೆಡೆಗೆಕೊಂಡೊಯ್ಯುವುದು ಅವಕಾಶಗಳು ಅಡಗಿರುವುದು ಕಷ್ಟಗಳ ರಾಶಿಯಲಿ,
ಹುಡುಕಿ ಹೊರತೆಗೆಯಬೇಕು ಬಹಳ ತಲ್ಮೆಯಲಿ,
ಆತ್ಮಸ್ಥೈರ್ಯದೊಂದಿಗೆ ನಿರೀಕ್ಷಿಸಿ.. ಗೆಲುವು ನಿಮ್ಮದಾಗಲಿ..
- ಶ್ರೇಯಾ ಮಿಂಚಿನಡ್ಕ, ಕಾಸರಗೂಡು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ