ಹಸಿರೇ ಉಸಿರು ಉಸಿರೇ ಹೆಸರು
ಮಳೆಯಿಂದ ಬೆಳೆ,ಬೆಳೆಯಿಂದ ಉತ್ತಮ ಪೈರು
ಪ್ರಕೃತಿಯ ಮಡಿಲಲಿ ಎಳೆಯೋನ ನಿತ್ಯ ಹಸಿರತೇರು
ಬಾನೆತ್ತರಕ್ಕೆ ಬೆಳೆಸಿ ಮರ ಪಡೆ ಅಮೃತ ನೀರು.
ಸುಂದರ ಪ್ರಕೃತಿಯು ಮನಸನು ಸೆಳೆವುದು
ಭಗವಂತ ನೀಡಿದ ನಿಸರ್ಗ ಧಾಮವಿದು
ಎಷ್ಟು ಇಂಪು ಮುಂಜಾನೆ ಕೂಗಿಲೆ ಕೂಗುವುದು
ಮಯೂರಿಯ ನೃತ್ಯ ನೋಡಲು ಎರಡು ಕಣ್ಣು ಸಾಲದು.
ಕಾಡು ಬೆಳೆಸಿ ನಾಡು ಉಳಿಸಿ
ಮರ-ಗಿಡ ಕಡೆಯುವ ಕ್ರೂರ ನಿಲ್ಲಿಸಿ
ಕಾಡು ಪ್ರಾಣಿಯ ಬೇಟೆಯ ಅಳಿಸಿ
ಗುಡಿಸಲ ಕಟ್ಟಿ ಕಾಡದಿ ನೆಮ್ಮದಿ ಅನುಭವಿಸಿ.
ಜೀವ ಉಳಿಸುವ ಪ್ರಾಣ ವಾಯುವಿದೆ
ರೋಗಗಳಿಗೆ ರಾಮಬಾಣದ ಔಷದವಿದೆ
ಕವಿ ಸಾಹಿತಿಗಳಿಗೆ ನೆಮ್ಮದಿಯ ತಾನವಿದೆ
ಗಡ್ಡೆ ಗೆಣಸುಗಳ ಸಿಹಿ ಫಲವಿದೆ.
ಹಸಿರೇ ಉಸಿರಾಗಲಿ ಸದಾ ನಿತ್ಯ ನೂತನ
ಕಾಡು ಬೆಳೆಸಿ ನಾಡು ಉಳಿಸಿ ಬದುಕು ಪಾವನ
ಉಳಿಸಿ ಬೆಳೆಸಿ ಹಚ್ಚ ಹಸುರಿನ ಪ್ರಕೃತಿಯನ
ಕಡಿಯದೆ ಗಿಡವನ ಪೋಷಿಸಿ ಸಸಿ, ಪರಿಸರವನ..
ನಿಲ್ಲಿಸು ಮಾನವ ನಿನ್ನ ಕ್ರೂರತನ
ಪೋಷಿಸಿ ಬೆಳೆಸು ವನ್ಯಜೀವಿ ತಾಣ
ತಿಳಿ ಸಾಲುಮರದ ತಿಮ್ಮಕ್ಕಳ ದಿಟ್ಟತನ
ಅಂದಾಗ ಪರಮಾತ್ಮನೂ ಕೂಡ ಮೆಚ್ಚುತ್ತಾನ.
- ಶ್ರೀ ಮುತ್ತು ಯ. ವಡ್ಡರ (ಶಿಕ್ಷಕರು)
ಊರು-ಹಿರೇಮಾಗಿ
ಜಿಲ್ಲೆ-ಬಾಗಲಕೋಟ
Mob-9845568484.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ