ಶನಿವಾರ, ಜೂನ್ 3, 2023

ಸೌಂದರ್ಯ ನಿಧಿ (ಕವಿತೆ) - ಸಚಿನ್ ಕಟ್ಟಿಮನಿ, ವಿಜಯಪುರ.

ಸೌಂದರ್ಯ ನಿಧಿಯೇ
ಕರುಣೆಯ ನದಿಯೇ
ಸಾಗಿಸು ನನ್ನ ಹೃದಯದ ದೋಣಿ ದಡಕ್ಕೆ
ಸಾವಿರ ಜನ್ಮ ನಿನ್ನವನಾಗುವ ಆಸೆ ಈ ಜೀವಕ್ಕೆ

ನೀನು ಬೆನ್ನು ತೋರಿ ಹೋದ ದಿನ 
ನನ್ನ ಹೃದಯಂಗಳದ ಹೂದೋಟದ ಮರಣ
ಹಾಗೊಮ್ಮೆ ನೆಪಕ್ಕಾದರೂ ತಿರುಗಬಾರದೆ !
ಬಾಡಿದ ಹೂಗಳು ಅರಳಿ ನಗುತ್ತಿದ್ದವು

ಪ್ರೀತಿಸಲಿ ಹೇಗೆ ನಿನ್ನನ್ನು
ನಿಲುಕದ ತೀರ ನೀನಿನ್ನು
ಅವಳ ಹೆಜ್ಜೆ, ಕಾಲ್ಗೆಜ್ಜೆ, ವಿವರಿಸಲಿ ಹೇಗೆ ಸೋತು
ಹೆಜ್ಜೆ, ಗೆಜ್ಜೆಯೆಲ್ಲವೂ ಇನ್ನೊಬನ ತಾಳ ಹಿಡಿತು

ನಿನ್ನ ಆ ಮೊದಲ ಕಣ್ಣೋಟದ
ನಶೆಯಿಂದಲೇ ಇನ್ನು ಹೊರ ಬಂದಿಲ್ಲ
ಅಷ್ಟರಲ್ಲಿ...ಆ ಕಂಗೊಳಿಸುವ ಕಣ್ಣು
ಕ್ರೂರಿಯಾದದ್ದು ಯಾವಾಗ ಗೆಳತಿ

- ಸಚಿನ್  ಕಟ್ಟಿಮನಿ, ವಿಜಯಪುರ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ...

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ.....            ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್   ಉಪನಿರ್ದೇಶಕರ ಹಾಗೂ ಕ್ಷೇತ್ರ...