ಶನಿವಾರ, ಜೂನ್ 3, 2023

ರೈಲು ದುರಂತ (ಲೇಖನ) - ಶ್ರೀಮತಿ ರೇಖಾ ನಾಡಿಗೇರ, ಹುಬ್ಬಳ್ಳಿ.

ಅಕ್ಷರಶಃ ಅದು ಕರಾಳ ದಿನ (02/06/2023) 280ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡು, ಸಾವಿರಾರು ಜನರು ಗಂಭೀರ ಗಾಯಗೊಂಡಿರುವ ಘಟನೆ. ದಶಕಗಳ ನಂತರ ದೇಶ ಕಂಡಿರುವ ಭೀಕರ ದುಘ೯ಟನೆ. 
ನಮ್ಮ ಜ್ಯೋತಿಷಿಗಳಾಗಲಿ, ಆಧುನಿಕ ತಂತ್ರಜ್ಞಾನಗಳಾಗಲಿ ಆಗುವದನ್ನ ತಪ್ಪಿಸಿಲ್ಲ. ಘಟನೆ ಸಂಭವಿಸಿದ ನಂತರ ಕಾರಣ ಹುಡುಕುವ, ವಿಚಾರಣೆ ನಡೆಸುವ ಟೀಕೆ ಟಿಪ್ಪಣಿ, ದೋಷಾರೋಪಣೆ ಇವೆಲ್ಲ ಮಾನವ ಸಮೂಹದಲ್ಲಿ ಸವ೯ ಸಾಮಾನ್ಯ.
*ವಿಧಿ ಅದೆಷ್ಟು ಪ್ರಬಲ? ವಿಜ್ಞಾನ ನಾಗಾಲೋಟದಲ್ಲಿ ದಾಪುಗಾಲಿಡುತ್ತಿರುವ ಈ ದಿನಗಳಲ್ಲೂ ಇಂತಹ ಘಟನೆಗಳು ಸಂಭವಿಸುತ್ತವೆ ಎಂದಾದರೆ, *ಮಾಯೆ ಅದಾವ ಬಗೆಯಲ್ಲಿ ಕಾಯ೯ವೆಸಗುತ್ತದೆ*
     ಮೂರನೂರರಷ್ಟು ಆತ್ಮಗಳು ಏಕ ಕಾಲಕ್ಕೆ ದೇಹ ತೊರೆದ ಬಬ೯ರ ಘಳಿಗೆ. ಯಾರ ಕಣ್ಣಿಗೂ ಗೋಚರಿಸದೇ ಪಂಚಭೂತಗಳಲ್ಲಿ ಲೀನವಾದ ಘಟನೆ.
    ಹೀಗೆ ನೂರಾರು ಜನರ ಸಾವು ಅಪಘಾತಗಳಿಂದ ಒಮ್ಮೆಲೇ ಸಂಭವಿಸಿದಾಗ ಪಕ್ಕದ ಮನೆಯ ಅಜ್ಜಿ ಹೇಳುತ್ತಿದ್ದ ಮಾತು ನೆನಪಾಗುತ್ತಿದೆ. ಸಾವನ್ನು ಗೆದ್ದೋರು ಯಾರೂ ಇಲ್ಲ. ಹಿಂದಕ್ಕೆಲ್ಲ ಪ್ಲೇಗು, ಡಕ್ಕಿ ಬರ, ಡೌಗಿ ಬರ ಅಂತೆಲ್ಲಾ ಮಾರಮ್ಮನ ಅವ ಕೃಪೆಯಿಂದ ಊರಿಗೆ ಊರ ಜನರೆಲ್ಲ ಸಾಯುತ್ತಿದ್ದ ಘಟನೆಗಳು ನಡೆಯುತ್ತಿದ್ದವು.  ಈಗ ನೋಡವಾ ಅಪಘಾತದೊಳಗ ಆಗಿನ ಹಂಗ ಒಂದು ಗ್ರಾಮಗಳ ಜನಸಂಖ್ಯೆಯಷ್ಟು ಮಂದಿ ಒಮ್ಮೆಲೆ ಸಾಯುತ್ತಾರೆ ಎಂದು. ಆ ಮಾತು ಖಂಡಿತ ಸುಳ್ಳಲ್ಲವೆನಿಸುತ್ತದೆ.
*ರಾಷ್ಟ್ರೀಯ ವಿಪ್ಪತ್ತು ದಳದವರು ಸಮರೋಪಾದಿಯಲ್ಲಿ ಕೈಗೊಳ್ಳುತ್ತಿರುವ ರಕ್ಷಣಾ ಕಾರ್ಯ  ಹೃದಯ ಸ್ಪರ್ಶಿ. ಪದಗಳಲ್ಲಿ ಬರೆಯಲಾಗದ ಅವರ ನಿಷ್ಕಾಮ ಸೇವೆ, ಸಾಧನೆ.* ಜೊತೆಯಾಗಿ ಸ್ಥಳೀಯರೂ ಕೈಗೂಡಿಸಿದರೆ ಇನ್ನಷ್ಟು ಸುಲಭ.ದೇಶದ ಜನರೆಲ್ಲರ ಪರವಾಗಿ ಆ ವೀರ
ಸೇನಾನಿಗಳಿಗೆ ಅಭಿವಂದನೆ.
ಗಾಯಾಳುಗಳೆಲ್ಲ ಶೀಘ್ರ ಗುಣಮುಖರಾಗಲಿ, ಮೃತರೆಲ್ಲರ ಆತ್ಮಕ್ಕೆ ಶಾಂತಿ ಸಿಗಲಿ, ಮತ್ತೆಂದೂ ಇಂತಹ ದುಘ೯ಟನೆಗಳು ಸಂಭವಿಸದಿರಲಿ ಎನ್ನುವ ಪ್ರಾಥ೯ನೆ. 

ತಮಸೋಮಾಂ ಜ್ಯೋತಿರ್ಗಮಯ
ಮೃತ್ಯೋಮಾ೯ಮ್ ಅಮೃತಂಗಮಯ,
ಅಸತೋಮಾಂ ಸದ್ಗಮಯ.
ಓಂ ಶಾಂತಿ ಶಾಂತಿ ಶಾಂತಿಃ 

- ಶ್ರೀಮತಿ ರೇಖಾ ನಾಡಿಗೇರ, ಹುಬ್ಬಳ್ಳಿ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ...

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ.....            ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್   ಉಪನಿರ್ದೇಶಕರ ಹಾಗೂ ಕ್ಷೇತ್ರ...