ಶನಿವಾರ, ಜೂನ್ 3, 2023

ಪ್ರೀತಿ (ಕವಿತೆ) - ಭಾಗ್ಯ ಎಲ್.ಆರ್. ಶಿವಮೊಗ್ಗ.

ಪ್ರೀತಿ ಪ್ರಕೃತಿಯ ಅತ್ಯದ್ಭುತ 
ಸುಮಧುರ ಸ್ವಚ್ಚಂದದ ಭಾವನೆ 
ಪ್ರತಿ ಜೀವರಾಶಿಯ ಜೀವನಾಡಿ 
ಆನಂದದ ರಸದೌತಣದ ಸಿಹಿಪಾಕ 
ಮನಸ್ಸು - ದೇಹಗಳೆರಡರ ಅಮೃತ ಸಿಂಚನ 
ನಯನಗಳ ನೋಟ ಮೈ ಮರೆಸೋ ಮಾಟ 
ಹೃದಯಗಳ ಸಮ್ಮಿಲನ ಅನುರಾಗದ ಅನುಬಂಧನ 
ಆತ್ಮನುಬಂಧನ ಆತ್ಮೀಯ ಕಂಪನ 
ಮೈನವಿರೆಳಿಸುವ ಅವಿಸ್ಮರಣೀಯ 
ರಸಕಾವ್ಯದ ರಿಂಗಣ 
ಜಗತ್ತನ್ನೇ ಗೆಲ್ಲುವ ಮಂತ್ರಶಕ್ತಿ 
ಕಟುಕನಿಗೂ ಕರುಣೆ ತೋರಿಸುವ 
ದೈತ್ಯ ಶಕ್ತಿಯ ಸ್ವರೂಪ 
ಬಾಳಿನ ಬೃಂದಾವನದ 
ದೈವಸ್ವರೂಪ ಪ್ರೀತಿ.

- ಭಾಗ್ಯ ಎಲ್.ಆರ್. ಶಿವಮೊಗ್ಗ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಾತಿ ಮತ್ತು ಪ್ರೀತಿ...

ಜಾತಿ ಮತ್ತು ಪ್ರೀತಿ... ಅವನದೊಂದು ಜಾತಿ ಅವಳದೊಂದು ಜಾತಿ ಅವಳು ಸಹ ಕನ್ನಡತಿ ಪರಿಚಯ ಅದರು  ಒಂದು ಬರಹದ  ಅಕ್ಷರದ ಮೂಲಕ ಅಂದು ಸಂಜೆಯಂತ... ಹುಟ್ಟುವಾಗ ಎಲ...