ಏಳು ಸುತ್ತಿನ ಕೋಟೆ ನಾಡು ಚಿತ್ರದುರ್ಗ ನಗರದ ರಾಜಕೀಯ ರಣರಂಗದಲ್ಲಿ ಸತತವಾಗಿ ಐದು ಬಾರಿ ಕೋಟೆ ನಾಡಿನಲ್ಲಿ ವಿಜಯ ಗಳಿಸಿದ ಜಿ.ಎಚ್.ತಿಪ್ಪಾರೆಡ್ಡಿ ಅವರನ್ನು ಹಿಮ್ಮೆಟ್ಟಿ ನೂತನ ಶಾಸಕರಾಗಿ ಕೆ.ಸಿ.ವೀರೇಂದ್ರರವರು ರಾಜ್ಯ ರಾಜಕೀಯದಲ್ಲಿ ಅತಿ ಹೆಚ್ಚು ಬಹುಮತಗಳಿಂದ ವಿಜಯವನ್ನು ಸಾಧಿಸಿದ್ದಾರೆ. ಕೋಟೆ ನಾಡಿನಲ್ಲಿ ನವದುರ್ಗೆಯರ ಆಶೀರ್ವಾದದೊಂದಿಗೆ ಗೆದ್ದಂತಹ ಕೆ.ಸಿ.ವೀರೇಂದ್ರರವರು ಇಂದು ಕೋಟೆ ನಾಡಿನಲ್ಲಿ ಪ್ರತಿ ಮನೆಯ ಮಗನಂತಾಗಿದ್ದಾರೆ. ಸತತವಾಗಿ 5 ಬಾರಿ ಗೆದ್ದವರ ಮುಂದೆ ಗೆಲ್ಲುವುದು ಸಾಮಾನ್ಯ ಮಾತೇನಲ್ಲ, ಆದರೆ ಇವರು ಒಂದು ಲಕ್ಷದ ಇಪ್ಪತ್ತೆರಡು ಸಾವಿರ (1,22,000) ಮತಗಳ ಮೂಲಕ ವಿಜಯಗಳಿಸಿದ್ದಾರೆ.
ಚಿತ್ರದುರ್ಗದ ಜನತೆಯ ಆಸೆಯಂತೆಯೇ ಯುವನಾಯಕರಾಗಿ ಗೆದ್ದ ಇವರು " ನನಗೆ ದುಡ್ಡಿನ ಅವಶ್ಯಕತೆ ಇಲ್ಲ. ಈ ಮಣ್ಣಿನ ಋಣ ತೀರಿಸೋ ಅವಕಾಶಕ್ಕಾಗಿ ಮಾತ್ರ ನಾನು ನಿಮ್ಮ ಮುಂದೆ ಬಂದಿದ್ದೇನೆ. ಸೇವಾ ಮನೋಭಾವದಿಂದ ನಾನು ನಿಮ್ಮ ಮುಂದೆ ಬಂದಿದ್ದೇನೆ. ದುಡ್ಡು ಮಾಡುವುದೇ ನನ್ನ ಉದ್ದೇಶವಾದರೆ ನನ್ನ ಕಾರ್ಯಗಳೆ ಸಾಕು. ನನ್ನ ಊರಿನ ಅಭಿವೃದ್ಧಿಯೇ ನನ್ನ ಮೊದಲ ಕೆಲಸ." ಎಂದು ಹೇಳಿದ್ದಾರೆ.
ಇದೆ 22ನೇ ತಾರೀಖು ವಿಧಾನಸೌಧದಲ್ಲಿ ಪ್ರಮಾಣವಚನ ಸ್ವೀಕರಿಸಲು ತೆರಳುವ ಮುನ್ನ ಚಪ್ಪಲಿ ತೊರೆದು ಅದನ್ನು ನಮಸ್ಕರಿಸಿ, ನಂತರ ತೆರಳಿ ದೇವರ ಮೇಲೆ ಪ್ರಮಾಣ ಮಾಡಿ ಪ್ರಮಾಣವಚನ ಸ್ವೀಕಾರ ಮಾಡಿರುವುದು ಎಲ್ಲರ ಮನದಾಳದಲ್ಲಿ ಸಂತೋಷವನ್ನು ತಂದು ಕೊಟ್ಟಿದೆ.
ನವ ಚಿತ್ರದುರ್ಗ ನಿರ್ಮಾಣವೇ ನನ್ನ ಮೊದಲ ಕೆಲಸ ಎಂದು "ನವ ಚಿತ್ರದುರ್ಗ ನಿರ್ಮಾಣಕ್ಕೆ ನಾನು ಬದ್ದ!" ಎನ್ನುವ ಮೂಲಕ ಚಿತ್ರದುರ್ಗ ಅಭಿವೃದ್ಧಿಗೆ ಮೊದಲ ಪ್ರಶಂಸವನ್ನು ನೀಡುತ್ತಿದ್ದಾರೆ.
"ನವ ಚಿತ್ರದುರ್ಗ ನಿರ್ಮಾಣಕ್ಕೆ ನಾನು ಬದ್ದ!" ಎನ್ನುವ ಮೂಲಕ ಚಿತ್ರದುರ್ಗದ ಅಭಿವೃದ್ಧಿಯ ಕುರಿತು 24 ವಾಗ್ದಾನಗಳನ್ನು ಘೋಷಿಸಿದ್ದಾರೆ.
ವಾಗ್ದಾನಗಳು ಈ ಕೆಳಕಂಡಂತೆ ಇವೆ.
* ಪ್ರವಾಸಿ ತಾಣಕ್ಕೆ ಮೊದಲ ಆದ್ಯತೆ.
* ಚಿತ್ರದುರ್ಗ ನಗರಕ್ಕೆ ಶಾಶ್ವತ ಕುಡಿಯುವ ನೀರು.
* ಕೆರೆಗಳಿಗೆ ನೀರು ತುಂಬಿಸುವುದು.
* ಚೆಕ್ ಡ್ಯಾಮ್ ಗಳ ನಿರ್ಮಾಣ.
* ನವ ಉದ್ಯಮಗಳ ಸ್ಥಾಪನೆಗೆ ಪ್ರೋತ್ಸಾಹ.
* ನಿವೇಶನ ಮತ್ತು ಶಾಶ್ವತ ಸೂರು.
* ಕೋಲ್ಡ್ ಸ್ಟೋರೇಜ್ ನಿರ್ಮಾಣ.
* ಆರೋಗ್ಯಕ್ಕೆ ಆದ್ಯತೆ.
* ಹಳೆ ಪಿಂಚಣಿಗೆ ಬೆಂಬಲ.
* ಹಕ್ಕು ಪತ್ರ ವಿತರಣೆ.
* ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜುಗಳ ನಿರ್ಮಾಣ.
* ಶಾಲೆಗಳ ಅಭಿವೃದ್ಧಿ.
* ಇಂಜಿನಿಯರಿಂಗ್ ಕಾಲೇಜು.
* ಮೆಡಿಕಲ್ ಕಾಲೇಜು ಕಾಮಗಾರಿ ಪೂರ್ಣ.
* ಮಹಾನಗರ ಪಾಲಿಕೆಗೆ ಯತ್ನ.
* ಪುಷ್ಕರಣಿಗಳ ಅಭಿವೃದ್ಧಿ.
* ರಸ್ತೆ ಅಭಿವೃದ್ಧಿ.
* ಹಸಿರು ತೋರಣಕ್ಕೆ ಒತ್ತು.
* ಅತ್ಯಧಿಕ ಗ್ರಂಥಾಲಯ.
* ಬಸ್ ಸಂಚಾರ ವ್ಯವಸ್ಥೆ.
* ಜಾನುವಾರುಗಳಿಗೆ ನೀರು ಪೂರೈಕೆ.
* ಕ್ರೀಡಾಪಟುಗಳಿಗೆ ಆದ್ಯತೆ.
* ಗ್ರಾಮಕ್ಕೊಂದು ಸಮುದಾಯ ಭವನ.
* ಆಟೋ ನಿಲ್ದಾಣ ನಿರ್ಮಾಣ.
ನೀವು ಕೊಟ್ಟ ವಾಗ್ದಾನಗಳು ಪೂರ್ಣವಾಗಲಿ ಎಂದು ಆಶಿಸುತ್ತಾ, ಅದರ ಜೊತೆಯಲ್ಲಿ ನಮ್ಮದೊಂದು ಸಣ್ಣ ವಾಗ್ದಾನವಿದೆ, ಏನೆಂದರೆ ಚಿತ್ರದುರ್ಗ ನಗರದಾದ್ಯಂತ ಎಲ್ಲೆಡೆಯೂ ಸಿಸಿ ರಸ್ತೆಗಳು ರಾರಾಜಿಸುತ್ತಿವೆ. ಬಯಲು ಸೀಮೆ ಎಂದೇ ಪ್ರಸಿದ್ಧವಾಗಿರುವ ಚಿತ್ರದುರ್ಗ ನಗರವನ್ನು ಪ್ರತಿ ರಸ್ತೆಗಳಲ್ಲಿಯೂ ಕೂಡ ಗಿಡಗಳನ್ನು ಹಾಕಿಸುವುದರ ಮೂಲಕ ಹಸಿರುಬರೀತ ನಗರವನ್ನಾಗಿ ಮಾಡೋಣ ಎಂಬುದು ನಮ್ಮ ಯುವ ಜನತೆಯ ಕಳಕಳಿಯಾಗಿದೆ. ಹಾಗಾಗಿ ತಾವುಗಳು ತಮ್ಮ 25ನೇ ವಾಗ್ದಾನವನ್ನಾಗಿ ಈ ಅಂಶವನ್ನು ಪರಿಗಣಿಸಬೇಕಾಗಿ ಕೋರಿಕೊಳ್ಳುತ್ತೇವೆ.
ದೇವರ ಆಶೀರ್ವಾದ ಹಾಗೂ ನಿಮ್ಮನ್ನು ಆಯ್ಕೆ ಮಾಡಿರುವ ಮತದಾರ ಬಂಧುಗಳ ಬೆಂಬಲ ಸದಾ ನಿಮ್ಮ ಜೊತೆ ಇರುತ್ತದೆ. ಆದಷ್ಟು ಬೇಗ ಹಸಿರುಬರೀತ ಚಿತ್ರದುರ್ಗವನ್ನು ನಿರ್ಮಾಣ ಮಾಡೋಣ. ಈ ಕಾರ್ಯಕ್ಕೆ ಎಲ್ಲ ಯುವ ಜನತೆಯ ಬೆಂಬಲ ನಿಮಗಿದೆ..
- ಬ್ರಿಜೇಶ್ ಕುಮಾರ್. ಬಿ. ಟಿ.
ವಿದ್ಯಾರ್ಥಿ, ಚಿತ್ರದುರ್ಗ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ