ಬಿಡಲೇಬೇಕು ಅಣ್ಣ ನೀನು ಬಿಡಲೇಬೇಕು ಅಣ್ಣ ಬಿಡಲೇಬೇಕು ನೀನು ತಂಬಾಕು ಸೇವನೆಯ ಬಿಡಲೇಬೇಕು ನೀನು ತಂಬಾಕು ಸೇವನೆಯ
ಬಿಟ್ಟು ಬದುಕಿದರೆ ಇಲ್ಲವೋ ತೊಂದರೆ
ಬಿಡಲೇಬೇಕು ಅಣ್ಣ ನೀನು ಬಿಡಲೇಬೇಕು ಅಣ್ಣl
ತಂಬಾಕಿನಿಂದ ನಿಮ್ಮ ಗಂಟಲಿನ ಕ್ಯಾನ್ಸರ್ ತಂಬಾಕಿನಿಂದ ನಿಮ್ಮ ಬಾಯಿಯ ಕ್ಯಾನ್ಸರ್ ಶ್ವಾಸಕೋಶ ಬಾಯಿ ಹಲ್ಲುಗಳನ್ನು ನೀವು
ಉಳಿಸಿಕೊಳ್ಳಿರಣ್ಣನೀವು ಉಳಿಸಿಕೊಳ್ಳಿರಣ್ಣl
l ಬಿಡಲೇಬೇಕುl
ತಂಬಾಕಿನಿಂದ ಶ್ವಾಸಕೋಶದ ತೊಂದರೆ ಧೂಮಪಾನದಿಂದ ಮನೆ ಮಕ್ಕಳಿಗೆ ಕಾಯಿಲೆ ಸೇದಿಬಿಟ್ಟ ಹೊಗೆಯನ್ನು ಕುಡಿಯುತಲಿ ರೋಗ ಬರುವುದಣ್ಣ ಮಂದಿಗೆ ರೋಗ ಬರುವುದಣ್ಣl
l ಬಿಡಲೇಬೇಕುl
ಹೊಗೆಯ ಸೊಪ್ಪಿನಿಂದ ನೂರಾರು ರೋಗ ಹೊಗೆಯ ಕುಡಿದವಗೆ ಸಂಕ್ರಾಮಿಕ ಕರಗ
ದುರಂತವಾಗುತಿದೆ ಸಾವು ಸಂಭವಿಸಿ ಬಿಡಲೇಬೇಕು ಅಣ್ಣ ತಂಬಾಕು ಬಿಡಲೇಬೇಕು ಅಣ್ಣl
lಬಿಡಲೇಬೇಕುl
ಹೆಜ್ಜೆ ಹೆಜ್ಜೆಗೂ ಅನಾರೋಗ್ಯವೇ ಲಭಿಸಿರೆ ಅತೃಪ್ತಿಕರವಾದ ಜೀವನವ ನಡೆಸಿರೆ
ಯುಕ್ತಿ ಕಾಣದೆ ಬದುಕಲಿ ಚಲಿಸಿರೆ
ಬಿಡಲೇಬೇಕು ಅಣ್ಣ ನೀನು ಬಿಡಲೇಬೇಕು ಅಣ್ಣl
l ಬಿಡಲೇಬೇಕುl
ತಂಬಾಕಿನಿಂದ ಹೃದ್ರೋಗವೂ ಬರುವುದು ತಂಬಾಕಿನಿಂದ ಶ್ವಾಸಕೋಶವು ಕೆಡುವುದು ತಂಬಾಕಿನಿಂದ ಬಿಪಿ ಶುಗರ್ ಗಳು ಬರುವುದು ಬಿಡಲೇಬೇಕು ಅಣ್ಣ ತಂಬಾಕು ಬಿಡಲೇಬೇಕು ಅಣ್ಣl
l ಬಿಡಲೇಬೇಕು l
ಇದ್ದ ಶಕ್ತಿಯು ಕ್ಷಣದೊಳಲು ಕ್ಷೀಣಿಸುತ್ತಿದೆ ಬರುವ ಶಕ್ತಿಯ ನಿಮಿಷದಿ ಬತ್ತಿಸ್ತಿದೆ
ಭವಿಷ್ಯವನ್ನು ಅರೆ ಕ್ಷಣದಲ್ಲಿ ಓಡುಸ್ತಿದೆ
ಬಿಡಲೇಬೇಕು ಅಣ್ಣ ತಂಬಾಕು ಬಿಡಲೇಬೇಕು ಅಣ್ಣl
l ಬಿಡಲೇಬೇಕುl
ತಂಬಾಕು ಜನಿಸಿ ಜನಮನಗಳ ಕೆಡಿಸಿತು ತಂಬಾಕು ಸೇವನೆ ಆರೋಗ್ಯವ ನುಂಗಿತು ತಂಬಾಕಿನಿಂದ ಜನ ಮರಣವು ಹೆಚ್ಚಿತು ಬಿಡಲೇಬೇಕು ಅಣ್ಣ ನೀನು ಬಿಡಲೇಬೇಕು ಅಣ್ಣl
lಬಿಡಲೇಬೇಕುl
ಬಿಟ್ಟು ಬಿಡಲೇಬೇಕು ತಂಬಾಕ ತವರೂರ
ಬಿಟ್ಟು ಎಳೆಯಿರಣ್ಣ ಬಾಳ ರಥದ ತೇರ
ಬಿಟ್ಟು ಬದುಕಿದರೆ ಉಳಿಯುವುದು ಸಂಸಾರ
ಬಿಡಲೇಬೇಕು ಅಣ್ಣ ನೀವು ಬಿಡಲೇಬೇಕು ಅಣ್ಣ
l ಬಿಡಲೇಬೇಕುl
- ಶಾರದ ದೇವರಾಜ್ ಎ. ಮಲ್ಲಾಪುರ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ