ತಾಯಿ ಎಂದರೆ ಅದೊಂದು ಅಮೂಲ್ಯವಾದ ಜೀವ
ಎಂದಿಗೂ ಬಿಡಿಸಲಾಗದ ಬಂಧ ಅಳಿಸಲಾಗದ ನೆನಪು
ಮರೆಯಲಾಗದ ಮಾಣಿಕ್ಯ ತಾಯಿ ಎಂದರೆ ತ್ಯಾಗದ ಪ್ರತೀಕ...
ತಾಯಿ ಎಂದರೆ ಕೇವಲ ಹೆತ್ತವಳು ಮಾತ್ರ ಅಂತೇನಿಲ್ಲ
ಮಮತೆಯಿಂದ ಪ್ರೀತಿ ವಾತ್ಸಲ್ಯದಿಂದ ನಿಷ್ಕಲ್ಮಶ ಮನಸ್ಸಿನಿಂದ ನೋಡಿಕೊಳ್ಳುವ ಪ್ರತಿಯೊಬ್ಬಳು
ತಾಯಿನೇ...
ನೀ ಎನ್ನ ನವಮಾಸ ಗರ್ಭದಿ ಹೊರಲಿಲ್ಲ ಹೆರಲಿಲ್ಲ
ಎದೆಹಾಲು ಕುಡಿಸಲಿಲ್ಲ ಅದಕ್ಕಿಂತ ಹೆಚ್ಚಾಗಿ ವಾತ್ಸಲ್ಯದ ಮಡಿಲನಿಟ್ಟು ಅಳಿದ ಉಷ್ಣದ ಕ್ಷೀರಾಮೃತವ ಕುಡಿಸಿ
ತಾಯ್ತನಕ್ಕೆ ಅರ್ಥ ತುಂಬಿದೆ...
ನಾ ಬಿದ್ದಾಗ ನೀ ಪಡುವ ನೋವು ಹೇಳತೀರದು
ಗೆದ್ದಾಗ ನಿನಗಿಂತ ಸಂಭ್ರಮ ಪಟ್ಟವರಿಲ್ಲ
ನಿನಗಾಗಿ ನೀ ಯೋಚಿಸಿದ್ದೆ ನಾ ಕಾಣಲಿಲ್ಲ
ಬರೀ ನನ್ನ ಏಳಿಗೆಯೇ ನಿನ್ನ ಮನದ ತುಂಬೆಲ್ಲ...
ನನ್ನ ಬಿಟ್ಟು ನೀ ಎಲ್ಲೂ ಹೋಗಿದ್ದು ನಾ ಕಂಡಿಲ್ಲ ನಿನ್ನ ಪ್ರತಿ ಸಡಗರದಲ್ಲಿಯೂ ನೀ ಎಂದೂ ನನ್ನ ಮರೆತಿಲ್ಲ ಎಷ್ಟು ಹೊಗಳಿದರು ನಿನ್ನ ಗುಣಗಾನ ಮುಗಿಯದು ಬೆಳೆಸಿದಂತೆ ಬೆಳೆಸಿದಂತೆ ಅದು ಬೆಳಕಾಗಿ ಉಳಿಯುವುದು...
ನೀ ಮಾಡಿದ ತ್ಯಾಗಕ್ಕೆ ನಾ ಏನು ಕೊಟ್ಟರು ಸಮ ದೂಗಲ್ಲ ನಿನ್ನ ತಾಯ್ತನದ ಸವಿಯ ಜೀವನದೂದ್ದಕ್ಕೂ ನಾ ಮರೆಯೋಲ್ಲ ಹಡೆದ ತಾಯಿಗಿಂತ ಪಡೆದ ತಾಯಿ ಮೇಲು ಎನ್ನುವ ಮಾತು ನೀ ಮತ್ತೊಮ್ಮೆ ನಿರೂಪಿಸಿ ಬಿಟ್ಟೆಯಲ್ಲ...
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ