ಅಣ್ಣನ ಪ್ರೀತಿಯ ಪಡೆದಿಹ ತಂಗಿಗೆ
ಸುಖ ಸಮೃದ್ಧಿಯು ದೊರೆತಂತೆ/
ಅಣ್ಣನ ಒಲವಿನ ಕರುಣೆಯು ಲಭಿಸಲು
ಸುಂದರ ಪುಷ್ಪದ ತೇರಂತೆ ll
ಅಣ್ಣನ ಅಕ್ಕರೆ ಗಳಿಸಿದ ತಂಗಿಗೆ
ಸಕ್ಕರೆ ತುಪ್ಪದ ಔತಣವು/
ಅಣ್ಣನ ಮಮತೆಯು ಮರುಕಳಿಸಿರಲು
ತಂಗಿಗೆ ತವರಿನ ಆಶ್ರಯವು ll
ಅಣ್ಣ ತಂಗಿಯ ಒಲವಿನ ಬಳ್ಳಿಗೆ
ತಾಯಿಯೇ ಬೇರಿನ ಬುಡವಂತೆ/
ಅಣ್ಣನ ಲತೆಯು ಹಬ್ಬಿದ ಹಾಗೆ
ತಂಗಿಯು ಹರಳುವ ಹೂವಂತೆ ll
ಒಂದೇ ಬೇರಿನ ಲತೆಗಳು ನಾವು
ಎಲ್ಲರ ಮೆಚ್ಚುಗೆ ಗಳಿಸೋಣ/
ತಾಯಿ ತಂದೆಯರ ಕೀರ್ತಿಯ ಹರಡುವ
ಸುಮಧುರ ಸಂಸ್ಕೃತಿ ಬೆಳೆಸೋಣ ll
- ಶಾರದಾ ದೇವರಾಜ್
ಎ ಮಲ್ಲಾಪುರ
ಅರಸೀಕೆರೆ ತಾಲೂಕ್
ಹಾಸನ ಜಿಲ್ಲೆ
ಬಾಣಾವರ
ಮೋ. ನಂಬರ್ 9663113628
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ