ಉರಿಯುವ ದೀಪವ ನೋಡಿದಡೆನ್ನ ಮನ
ನೆನೆಯುವುದರಿವಿನ ಗುರುವನ್ನು
ದೀಪದಂತೆ ತಾ ಉರಿದು ಬೆಳಗುವನು
ಅಂಧ ಹೃದಯದ ಮನ ಮನೆಯನ್ನು...
ಮಣ್ಣಿನ ಮುದ್ದೆಯ ತಾ ತಿದ್ದಿ ಮಾಡುವನು
ಸುಂದರ ಸುಗುಣದ ಮೂರ್ತಿಯನು
ಜೀವವ ತುಂಬಿ ಸುಶಿಕ್ಷಣ ಅರಹುತ
ತೋರುವನದಕೊಂದ ಸು ಮಾರ್ಗವನು...
ಮಕ್ಕಳ ಮನಸ್ಸನ್ನರಿಯುತ ನಲಿಕಲಿ
ದಾಡುತ ಅವರೊಳಗೊಂದಾಗುವನು
ತಾಯಿಯ ಪ್ರೀತಿಯ ತೋರುತ ಹರುಷದಿ
ಮಗುವಲಿ ಮಗುವಂತಾಗುವನು...
ಗುರು ತೋರಿದ ಮಾರ್ಗದಿ ನಡೆದು ಸಾಗಿದರೆ
ಆಗುವನುತ್ತಮ ಪ್ರಜೆಯೆಂದು
ಗುರುವಿಗೆ ಗುಲಾಮನಾಗದಿರ್ದೋಡೆ
ಕಾಣನು ಪ್ರಗತಿಯನೆದೆಂದೂ...
ಕಲಿಸಿದ ಗುರುವನು ಮರೆಯುವುದಿಲ್ಲ
ನೆನೆಯುವೆ ಅನುಕ್ಷಣ ಅವರನ್ನು
ತನು ಮನದಲಿ ಗುರು ನೆನೆದುಕೊಳ್ಳುತ
ಚರಣಕೆ ನಾ ಸಧಾ ನಮಿಸುವೆನು...
- ಕನಸಿನಕೂಸು
ವಸಂತ ಪು. ಬಾಗೇವಾಡಿ
ಗಜಪತಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ