ಶುಕ್ರವಾರ, ಅಕ್ಟೋಬರ್ 27, 2023

ಪರೀಕ್ಷಾ ಕೊಠಡಿ (ಕವಿತೆ) - ಪ್ರೊ. ಶಕುಂತಲಾ ಪ್ರ.ಬರಗಿ.

ಪರೀಕ್ಷಾ ಕೊಠಡಿ ಹಲವು ಸಾಧಕರ ಬಾಧಕರ ಭವ್ಯ ಬಂಗಲೆ
ಹಲವು  ಕಲಾನಿಪುಣರು, ಸಮಯ ವ್ಯಹಿಸುವವರ ಮಹಲು
ಮಳ್ಳರು ಮಳ್ಳರು, ಕಳ್ಳರು, ಉತ್ತರ ಕದಿಯುವ ವಂಚಕರು, ಓದದೆ ಪರಿತಪಿಸುವವರ ದೊಡ್ಡ ಗುಂಪು
ಅಲ್ಲಿ ಬರೆದಂತೆ ನಟಿಸುವವರು
ನಟಿಸಿದಂತೆ ಬರೆಯುವವರು ಇರುವ ಇರುವ ಎಕ್ಸಾಮ್ ಹಾಲ್ ಪುಂಡರಿವರು

ಪ್ರಶ್ನೆ ಪತ್ರಿಕೆಯ ನಾಲ್ಕು ಹಂಚು ರೀತಿದ್ದು
ಹೌದು ಇಲ್ಲ ಎನ್ನುವ ಮಲ್ಟಿಪಲ್ ದ್ವಂದ್ವ
ನಡುನಡುವೆ ಅಬ ಜೋಡನೆಗಳ ಗೊಂದಲ
ಒಂದೆರೆಡು ಅಂಕಗಳ ಬರದೆ ಒದ್ದಾಡುವ  ಪರಿಪಾಟಲು
ವ್ಯಾಕರಣ ಪ್ರಬಂಧ ಗಾದೆ ಮಾತುಗಳ ದೊಡ್ಡ ದೊಡ್ಡ ಪುಟಗಳ ಗೋಜಿಲು

ಅವರು ಇವರು ಯಾರ್ಯಾರು ಬರೆಯುತ್ತಿದ್ದಾರೆ ನೋಡುವ ಹುಚ್ಚು  ತೆವಲು
ಯಾವನೋ ಮಲಗಿದ್ದಾನೆ ಯಾಕೆ ಇರಬೇಕು ಕುತೂಹಲ
ಅವಳು ಎರಡೆರಡು ಸಪ್ಲಿಮೆಂಟರಿ ತಗೊಂಡಳು ಒಳಗೊಳಗೆ ಮನಸ್ತಾಪ
ಸಿಲಬಸ್ ಗೊತ್ತಿರದ ದಿನವೂ ಕಾಲೇಜ್ ಮೆಟ್ಟಲು  ಹತ್ತಿರದ ವಿದ್ಯಾರ್ಥಿಗಳ ಗೋಳಾಟ

ಗಾಬರಿ, ಗಲಭೆ, ಗೊಂದಲ 
ಎಲ್ಲೋ ಒಂದೆರಡು ಪ್ರಶ್ನೆಗಳ ಬಗೆಗೆ ಅಗಾಧ ಕುತೂಹಲ
ಒಂದೆರಡು ಪ್ರಶ್ನೆಗಳಿಗೆ ಉತ್ತರದ ಸುರಿಮಳೆ
ಒಂದೆಂಟೆ ಪ್ರಶ್ನೆಗಳನ್ನು ಮರುಹೊಂದಿಸಿ ಬರೆದು ತಿದ್ದುವುದು
ಸಕಲಕಲ ವಲ್ಲಬರಿಗೂ ಸಾಧ್ಯವಾಗದ ಉತ್ತರಗಳ ಬಗೆಗೆ ಪೇಚಾಟ

ಗೊಬೆಗಣ್ಣೆನಂತೆ ನೋಡುವ ವಿಚಾರಕರು ಮೇಲ್ವಿಚಾರಕರು
ನೇರ ಕುಳಿತುಕೊಳ್ಳಿ, ಸರಿಯಾಗಿ ಬರೆಯಿರಿ, ಬರೆಯಿರಿ, ಸಹಿ ಮಾಡು
ಮೇಲಿಂದ ಮೇಲೆ ಮೇಲಿಂದ  ತೂರಿ ಬರುವ ಸೂಚನೆಗಳು
ಅವಳನ್ನು ಇವಳನ್ನು ನೋಡಿದರೂ ತಿಳಿಯದ ಗೊತ್ತಾಗದ ಉತ್ತರಗಳು! 
ಹತಾಶದಿ ಹಂಬಲಿಸಿ ಬೊಬ್ಬೆ ಇಡುವ ವಿದ್ಯಾರ್ಥಿಗಳ ಸಂತೆ ಈ ಪರೀಕ್ಷಾ ಕೊಠಡಿ

- ಪ್ರೊ. ಶಕುಂತಲಾ ಪ್ರ.ಬರಗಿ
ಕನ್ನಡ ಉಪನ್ಯಾಸಕರು
ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯ ಬಾಗಲಕೋಟೆ
ಮೋ. ಸಂ.8147146194

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...