ಮನಸಿನ ಮನೆ ಸುಂದರವಾಗಿ..
ನನಸಿನ ನಸುಕಿನ ಹಂದರವಾಗಿ..
ಕನಸು ಕನವರಿಸಿ ಕಾಡುತಿದೆ..!
ಬಂಧನದ ಕೊರಡಲಿ ಬೇಡುತಿದೆ..!
ವೀರ ಶೂರರ ನಾಡೆಂದು..
ಕೆಚ್ಚೆದೆ ಕಾವಲಿನ ಕೊಡಗೆಂದು..
ಬಿಗಿ ಹಿಡಿದಿದೆ ಹೃದಯವಾಗಿ..!
ಶಬ್ದ ನಿಶ್ಯಬ್ದದ ನಡುವಾಗಿ..!
ಕಿತ್ತಾಟವಿಲ್ಲ..ಉಸಿರ ಹುಡುಕಾಟಕೆ!
ಕರೆಯು ಕಂಗಳ ಕೂಗಾಟಕೆ..!
ಸಮವಸ್ತ್ರದ ನೋಟ ಸನಿಹವಾಗಿ..
ಸಮರಾಭ್ಯಾಸ ಆಸಕ್ತಿಯ ಖನಿಯಾಗಿ..
ತಾಯಿಯ ಸೇವೆಯ ನೆನೆಪಿಗೆ..
ನರನಾಡಿಗಳ ದೇಶಪ್ರೇಮದ ಬೆಸುಗೆಗೆ..
ಶತ್ರುಗಳ ಸದೆ ಬಡಿಯುವದಕೆ..!
ವಿಜಯದ ಕದ ತೆರೆಯುವದಕೆ..!
ಜೀವದ ಉಸಿರಿರುವ ತನಕ..
ಜೀವನದ ಬೆನ್ನೆಲುಬಿನ ತವಕ..
ಕಾಡ್ಗಿಚ್ಚಿನಂತೆ ಕಾಡಿದ ಕಿಡಿ..!
ಮನಬಿಚ್ಚಿ ಮರುಗಿದೆ ನುಡಿ..!
ನಾನೊಮ್ಮೆ ಸೈನಿಕನಾಗಬೇಕಿತ್ತು.....
- ರಂಜಿತ್ ಕುದುಪಜೆ, ತಣ್ಣಿಮಾನಿ, ಭಾಗಮಂಡಲ.
ಮೊ:೯೪೮೦୭೩೨೫୭೬.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ