ಶುಕ್ರವಾರ, ಅಕ್ಟೋಬರ್ 27, 2023

ಆತ್ಮವೇ ನೀ ತೊರೆದ ದಿನ (ಕವಿತೆ) - ಬಿ. ಎಂ. ಮಹಾಂತೇಶ.

ಅಂಗಳದಲಿ ಹಾಳು
ಕಸವು, ಧೂಳಾಗಿ
ದೇಹದ ಸುತ್ತ ಸುಳಿದಿತ್ತು...

ನಿನ್ನೆ ನಲಿದಿದ್ದ ಹಾಲು
ಇಂದು ನಲುವಿನಲ್ಲಿ
ಮೊಸರಾಗಿ ಅಳುತಿತ್ತು...

ನನ್ನ ತಲೆ ಬಳಿಯ
ಕಂದೀಲು ನನಗಷ್ಟೇ,
ಮೌನದ ಬೆಳಕ ನೀಡಿತ್ತು...

ಹೇ ಆತ್ಮವೇ ನೀ ನನ್ನ
ತೊರೆದ ಸುದ್ದಿಯ ಸಾರಲು,
ಕಾಗೆಯು ಗೊಗರೆದಿತ್ತು...

ಮಸಣದ ಮಣ್ಣು
ಮೈಗಪ್ಪಲು, ಸಪ್ಪನೆ
ಮಾರಿ ಹಾಕಿ ಚದುರಿತ್ತು...

ಹೇ ಆತ್ಮವೇ ನೀ ತೊರೆದ ಆ ದಿನ..
ಆವರಿಸಿದ್ದು ಬರಿ ಮೌನ...

- ಬಿ. ಎಂ. ಮಹಾಂತೇಶ
SAVT ಕಾಲೇಜು ಕೂಡ್ಲಿಗಿ 
ವಿಜಯನಗರ ಜಿಲ್ಲಾ
9731418615.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬೆಳಗು...

ಕವನ     ಬೆಳಗು ಬೆಳಗು ಬಾ ಬೆಳಕು ಬೆಳದಿಂಗಳ ಬೆಳಕು ಚೆಲ್ಲುತ ರಂಗು ರಂಗಿನ ಕಾಮನಬಿಲ್ಲಿನಂತೆ ಮಿನು ಮಿನುಗುವ ಬೆಳ್ಳಿಚುಕ್ಕಿಯಂತೆ ರಂಗು ರಂಗಿನ ರಂಗೋಲಿಯಂತ...