ಅಳುವುದಾದರೆ ಅತ್ತು ಬಿಡು ನೀನು
ಕಣ್ಣಲ್ಲಿ ಕಣ್ಣೀರು ಅಂತ್ಯವಾಗುವವರೆಗೂ
ಮನದಲ್ಲಿರುವ ನೋವು ನಿವಾರಣೆ ಆಗುವವರೆಗೂ
ನಿನ್ನ ಸಂತೈಸುವವರು ನಿನಗೆ ಸಿಗುವವರೆಗೂ....
ಅಳುವುದಾದರೆ ಅತ್ತು ಬಿಡು ನೀನು
ನಿನ್ನ ನೋವು ಇನ್ನೊಬ್ಬರಿಗೆ ಅರ್ಥ ಆಗುವವರೆಗೂ
ನಿನ್ನನ್ನು ನೋಯಿಸಿದವರಿಗೆ ನೋವಾಗುವವರೆಗೂ
ನಿನ್ನ ನೋವಿಗೆ ಔಷದಿ ಸಿಗುವವರೆಗೂ....
ಅಳುವುದಾದರೆ ಅತ್ತು ಬಿಡು ನೀನು
ನೀ ಪ್ರೀತಿಸಿದವರು ನಿನ್ನ ಪ್ರೀತಿಸಲಿಲ್ಲ ಎಂದು
ನೀ ಇರುವ ಜಾಗ ನದಿಯಾಗಿ ಹರಿಯುವವರೆಗೂ
ಅತ್ತುಬಿಡು ನೀನು ಯಾರಿಗೂ ಕಾಣದ ಮರೆಯಲಿ....
ಅಳುವುದಾದರೆ ಅತ್ತು ಬಿಡು ನೀನು
ಸಂಬಧಿಕರು ನಿನಗೆ ಬೆಲೆ ಕೊಡಲಿಲ್ಲ ಎಂದು
ನಿನ್ನ ದೇಹ ಮಣ್ಣಲ್ಲಿ ಮಣ್ಣಾಗುವವರೆಗೂ
ನೀ ಹತ್ತರೆ ಕಣ್ಣೀರು ಒರೆಸುವವರು ಇಲ್ಲ ಎಂದು....
- ಬಸವರಾಜ್ ಎಚ್.ಹೊಗರನಾಳ. ಪತ್ರಿಕೋದ್ಯಮ ವಿದ್ಯಾರ್ಥಿ ಧಾರವಾಡ
ಮೊ.ನಂ:8951228607
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ