ಶುಕ್ರವಾರ, ಜನವರಿ 5, 2024

ಬದುಕ ಪಯಣ(ಕವಿತೆ) - ಸೌಮ್ಯ ಯು.ಜಿ.

ಬಾಡಿಗೆ ಬದುಕಿನಲ್ಲಿ ಪ್ರತಿ ದಿನವೂ 
ಕಂಬನಿಯ ಸುಂಕವ  ಕಟ್ಟಿ
ಬಾಯಿಬಿಡುತ್ತಿದೆ ಬಡಪಾಯಿ ಜೀವ

ಬಡತನದ ಬೆಂಕಿಯಲ್ಲಿ ಬೆಯಲಾರದೆ
ಋಣದ ಭಾರವ ಹೊರಲಾಗದೆ 
ಆದರ್ಶ ಬದುಕ ಬದುಕುವ 
ಕನಸ ಹೊತ್ತು 
ಬಾಡಿಗೆಯ ಬದುಕ ಸಾಗುತ್ತಿದೆ ಬಡಜೀವ

ಬದುಕ ಹೇಗೆ ಬದುಕಿದರೆ ಬಲಾದಿತು
ಎಂಬ ಚಿಂತೆಯಲ್ಲಿ
ಪ್ರತಿಕ್ಷಣವೂ ಸಾಗುತ್ತಿದೆ ಜೀವವು ಚಿತೆಯತ್ತ
ಬಾಡಿಗೆಯ ಬದುಕ  ಸಾಗುತ್ತಿದೆ ಬಡಪಾಯಿ ಜೀವ

ಬಿಸಿಲ ಬೇಗೆಯ ಬರಕ್ಕೆ
ಜಲವಿಲ್ಲದೆ ಒದ್ದಾಡಿ
ಕೂಳು ತಿನ್ನಲು ಬಿಡದ ಜವಾಬ್ಧಾರಿಯಲ್ಲಿ
ಬಾಡಿಗೆಯ ಬದುಕ ಸಾಗುತ್ತಿದೆ ಬಡಪಾಯಿ ಜೀವ

ಬದುಕ ಬದುಕಿ ಹೊಟ್ಟೆಬರೆ
ಈಡೇರಿಸಿ ಸಾಗಿಸಿದರೆ ಬದುಕ
ಅವರ ಪಾಡಿಗೆ ಅವರನ್ನ ಬಿಡದ            ಜನರ ಆಡಂಬರದ ಮಾತುಗಳು
ಕಿತ್ತು ಇನ್ನುತ್ತಿವೆ ಮನವ ಪ್ರತಿಕ್ಷಣವೂ
ಕಂಬನಿಯ ಸುಂಕವನ್ನು ಬೇಡುತ್ತಾ
ಬಾಡಿಗೆಯ ಬದುಕ ಸಾಗುತ್ತಿದೆ ಬಡಪಾಯಿ ಜೀವ

ಬದುಕ ಚಿಲುಮೆಯಲ್ಲಿ
ಚಿತ್ರ ಬಿಡಿಸುವ ಕನಸಹೊತ್ತು ಬಂದವರ ಬಾಳಿನಲ್ಲಿ
ವಿಧಿ ವಿಚಿತ್ರವನ್ನೇ ಬಿಡಿಸಿ 
ಅದರ ಅರ್ಥ ಹುಡುಕುವ ಸವಾಲವೊಡ್ಡಿ ನಿಂತಿದೆ 
ಈ ಬಡಪಾಯಿ ಬದುಕ ಪಯಣದಲ್ಲಿ.... 


- ಸೌಮ್ಯ ug.                 
ಕುಡಪಲಿ ಗ್ರಾಮ.           
BESM ಕಾಲೇಜ್ ಬ್ಯಾಡಗಿ.

1 ಕಾಮೆಂಟ್‌:

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...