ಹುಟ್ಟೂರು ಬೇಳದೂರು ಇದ್ದೂರೂ ಕೊಟ್ಟೂರು
ಸತ್ತಾಗ ಹೊರುವರು ನಿನ್ನ ಹೆಂಗಾರು
ಸರಳಿಲ್ಲದೆ ನೀ ಬಾಳಿದ್ದು ಎಸೂರು
ಆದರ್ಶವಾಗಿರು ಇರುವವರೆಗೆ ಒಂಚೂರು
ಇದ್ದಂತೆ ನೀ ಇದ್ದರೆ ಸೈ ಎನ್ನದು ಈ ಸೂರು
ನಿರ್ಧರಿಸು ಬದಲಾವಣೆಯ ಹೇಂಗಾರು
ಪ್ರಕೃತಿಯನೆ ಬದಲಾಯಿಸದೆ ಮುಂಗಾರು
ಎದೆಗೆಡದೆ ಮುನ್ನಡೆ ನೀ ಒಂಚೂರು
ಸುಮ್ಮನಾಗುವರು ಒಂದಿನ ವಿಮರ್ಶೆ ಕೊಟ್ಟೋರು
ನೀ ಗೆದ್ದರೆ ಜೊತೆ ನಿಲುವರು ನಿನ್ನೋರು
ಬೆನ್ನು ತಟ್ಟುವರು ನಿನ್ನ ಏಳಿಗೆ ಮೆಚ್ಚೂರು
ಪೀಳಿಗೆಯ ಏಳಿಗೆಗೆ ಮುನ್ನಡೆ ನೀ ಒಂಚೂರು
ನಿನ್ನ ಏಳಿಗೆಯಲಿ ಹಿಗ್ಗುವುದು ಹುಟ್ಟೂರು
ನೀ ಬೆಳೆದಂತೆ ಬೆನ್ ತಟ್ಟುವುದು ಬೆಳದೂರು
ನಿನ್ನ ಹೆಸರ ಬೆಳೆಸುವುದು ಇದ್ದೂರು
ಸಂಭ್ರಮದಿ ಸಾಗುವುದು ಕೊಟ್ಟೂರು
ಇನ್ನಾದರೂ ಮುನ್ನಡೆ ನೀ ಒಂಚೂರು.
- ಜೀನಮ್ ಮಲ್ಲಾಡಿಹಳ್ಳಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ