ಕೋಟೆಗಳನ್ನಾಳಿ
ಉಳಿದುಕೊಂಡವರ್ಯಾರು?
ಸತ್ತಾದ ಮೇಲೆ ಬದುಕಿ
ಬಂದವರ್ಯಾರು?
ಬೇಡದೆ ಆದರವ
ನೀಡಿದವರ್ಯಾರು?
ಬಾಡಿದ ಹೂವ
ಮುಡಿದವರ್ಯಾರು?
ಕಳೆದು ಹೋದ ಸಮಯಕ್ಕೆ
ಕಾದಿರುವರ್ಯಾರು?
ಬದುಕ ಪಯಣದಲ್ಲಿ ನೆಮ್ಮದಿ
ಪಡೆದವರ್ಯಾರು?
ಕಳೆದ ನೆನಪುಗಳನ್ನು ಮರಳಿ
ಪಡೆದವರ್ಯಾರು?
ಬಿಟ್ಟು ಹೋದ ಪ್ರೀತಿಯ ಮತ್ತೆ ಗಳಿಸಿದವರ್ಯಾರು?
ಕಲಿಯುಗದಲ್ಲಿ ಕಲಿತೆ ಉಳಿದ
ವಿದ್ಯೆ ಯಾವುದು?
ಯಾವುದಕ್ಕೂ ಮೌಲ್ಯ
ಸಿಗದಂತೆ ಉಳಿದಿಹುದು...!
- ಸದ್ದಾಂ ತಗ್ಗಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ