ಸ್ನೇಹದ ಸವಿನೆನಪುಗಳು ಸುಂದರ
ಮೊಗೆದಷ್ಟು ಅದು ತುಂಬುವ ಸಾಗರ
ಬಾಲ್ಯದ ನೆನಪ ಬುತ್ತಿಯ ಬಿಚ್ಚೋಣ
ಬನ್ನಿ ಸ್ನೇಹ ಸುಧೆಯ ಹಂಚಿ ನಲಿಯೋಣ
ಇರಬೇಕು ಬಾಳಲಿ ಮಧುರ ಗೆಳೆತನವೊಂದು
ಮರುಭೂಮಿಯಲಿ ಅದುವೇ ಅಮೃತಬಿಂದು
ಗೆಳೆತನವು ಆ ದೈವ ತಂದ ವರದಾನ
ಸನ್ಮಿತ್ರರೊಳಗೆ ನೀ ತೋರದಿರು ಬಿಗುಮಾನ
ಸ್ನೇಹದ ಕಡಲಲಿ ಮಿಂದೇಳಲಿ ಮನ
ಸ್ನೇಹ ಸುಮ ಸೌಗಂಧ ಬೀರಲಿ ಅನುದಿನ
ಪ್ರತಿ ಹೃದಯಕೂ ಸ್ನೇಹ ಸೇತುವೆ ಕಟ್ಟೋಣ
ನಂಬಿಕೆಯ ಅಡಿಪಾಯದ ಮೇಲೆ ನಡೆಯೋಣ
ಪ್ರೀತಿ ಮಧುರ ಸುಂದರ ಸ್ನೇಹ ಅಮರ
ಕಷ್ಟ-ಸುಖಗಳ ಹಂಚಿ ನಡೆವ ಸ್ನೇಹವು ಸಾಗರ
- ಮಧುಮಾಲತಿ ರುದ್ರೇಶ್ ಬೇಲೂರು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ