ಭಾನುವಾರ, ಆಗಸ್ಟ್ 11, 2024

ಹೆಣ್ಣು...


ಹೆಣ್ಣು...

ಹೆಣ್ಣನ್ನು ಹೀನ ಪದಗಳಿಂದ
ಹಿಯಾಳಿಸುವ ಮೊದಲು
ನಿನ್ನಮ್ಮನ ಜೋಗುಳದ ಪದವು ನಿನ್ನ
ಕಿವಿಗೊಮ್ಮೆ ಅಪ್ಪಳಿಸಲಿ..

ಹೆಣ್ಣನ್ನು ಆಡಿಕೊಂಡು ನಗುವ ಮುನ್ನ
ಅಕ್ಕ ತಂಗಿಯ ವಾತ್ಸಲ್ಯದ ನಗುವು
ಒಮ್ಮೆ ನಿನ್ನ ಮನ ತಟ್ಟಲಿ...

ಹೆಣ್ಣಿನ ಚಾರಿತ್ರ್ಯದ ಬಗ್ಗೆ ಇಲ್ಲ ಸಲ್ಲದ
ಕಥೆ ಕಟ್ಟುವ ಮೊದಲು
ಅಜ್ಜಿಯ ನೀತಿ ಕಥೆಗಳು
ನಿನ್ನೊಮ್ಮೆ ಬಡಿದೆಚ್ಚರಿಸಲಿ...

ಹೆಣ್ಣನ್ನು ಪೂಜಿಸು,ಗೌರವಿಸು ಎಂದು
ಹೇಳಿದ ಪುಣ್ಯ ನಾಡಿನಲ್ಲಿ
ಹೆಣ್ಣಿನ ಮೇಲೆ ಕೈ ಎತ್ತುವ ಮೊದಲು ,
ನೀ ಮನುಷ್ಯನಲ್ಲ ಮೃಗವೆಂದು ನಿನ್ನ
ಅಂತರಾತ್ಮ ನಿನಗೊಮ್ಮೆ ಕೂಗಿ ಹೇಳಲಿ...
ಕವಿತಾ.ಎಚ್ 
ಎಚ್.ಎಸ್.ಎಸ್.ಬಿ ಸಿ ಎ ಕಾಲೇಜ್, ಗದಗ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...