ನಾನೇಕೆ ಅಂಜಲಿ...
ನೀನು ಇಂದು ಬರುವೆ
ನಾಳೆ ಬರುವೆ ಅಥವಾ
ಈಗಲೇ ಬರುವೆ, ಎಂಬ
ಭಯವಿಲ್ಲ ನನಗೆ...
ಬಂದಾಗಂತು ಮನದಿಂದ
ತನುವಿನಿಂದ ಒಪ್ಪುವೆ, ಅಪ್ಪುವೆ
ಅಂತರಂಗದಿಂದ ನಗುವೆ,
ಬೇಡ ಅಳುವವರ ಗೊಡವೆ...
ನೀ ಬರುವ ವರೆಗೆ
ಬದುಕು ನನ್ನನು ನಗಿಸಲಿ
ನರಳಿಸಲಿ, ಅಲಿಸಲಿ,
ನೀ ಬರುವೆ ಎಂದು ನಾನೇಕೆ ಅಂಜಲಿ...
ನನಗಿಲ್ಲ ನೀ ಬರುವ ಅಂಜಿಕೆ,
ನಿನಗಾಗೇ ನನ್ನ ಕಾಯುವಿಕೆ,
ಬಂದರೆ ನೀ ಈ ಗಳಿಗೆ,
ಸಾಗುವುದು ಬೇಗ ಬಾಳ ಮೆರವಣಿಗೆ..
ಬಿ ಎಂ ಮಹಾಂತೇಶ್
ಕ್ಯಾಸನಕೆರೆ, ಕೂಡ್ಲಿಗಿ ತಾ.
ವಿಜಯನಗರ ಜಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ