ಯಾವ ಜನ್ಮದ ಪುಣ್ಯವೋ
ಇದು ಅಣ್ಣ ತಂಗಿಯ ಪವಿತ್ರ
ರಕ್ಷೆಯ ರಕ್ಷಾ ಬಂಧನವೋ..
ಒಡ ಹುಟ್ಟಿದವರಷ್ಟೇ ಮಾತ್ರಕ್ಕೆ
ಅಣ್ಣ ತಂಗಿಯಾಗ ಬೇಕೆ
ಮನಸಿನ ಅಂತರಾಳದಿಂದ
ಅಣ್ಣ ಎಂದು ಕರೆದರೆ ಸಾಕಲ್ಲವೆ
ರಾಕಿ ಕಟ್ಟುವ ಬಂಧನದಲ್ಲಿ
ನಿನ್ನ ಮೊಗದಲ್ಲಿ ತಾಯಿಯ
ಪ್ರೀತಿಯನ್ನ ಕಣ್ಣುದುಂಬಿ
ಮರು ಓಮ್ಮೆ ನೋಡಬಹುದು..
ಹಣೆಗೆ ಕುಂಕುಮ ಇಟ್ಟು ಅಣ್ಣನಿಗೆ, ನೀನು ರಕ್ಷಿಸುವೆ.
ತಂಗಿಗೆ, ಅಣ್ಣ ಇನ್ನೊಂದು
ಜನ್ನವೆತ್ತಿಯಾದರೂ, ಇವಳು ನನಗೆ
ತಾಯಿಯಾಗಿ ಬರಲಿ ಎಂದು
ದೇವರಲ್ಲಿ ಪ್ರಾರ್ಥಿಸುವೆ...
ಈ ಭವ್ಯ ರಕ್ಷ ಬಂಧನಲ್ಲಿ
ದೇವರು ಸಹೋದರಿಗೆ
ಆಯಸ್ಸು.ಆರೋಗ್ಯ.ಶಕ್ತಿ.
ಕೊಟ್ಟು ಕಾಪಾಡಲಿ.... 💐
ಕಾರ್ತಿಕ್... ✍️
( ಶ್ರವಣ ಬೆಳಗೊಳ )
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ