ಗುರುವಾರ, ಆಗಸ್ಟ್ 22, 2024

ಅಪ್ಪ

ಅಪ್ಪ...

ನನ್ನ ಹೆಗಲ ಮೇಲೆ 
ಜವಾಬ್ದಾರಿಗಳ ಹೊರೆ ಬಿದ್ದಾಗಲೇ,
ಅಪ್ಪನ ಶ್ರಮದ ಅರಿವಾಗಿತ್ತು.


ದುಡಿದು ಬಂದ ದಣಿವಿನಲೂ ನನ್ನ 
ಪ್ರೀತಿಯಿಂದ ನೋಡಿದ ಅಪ್ಪನ 
ಮುಖ ನೆನಪಾಗಿತ್ತು.

ಎಲ್ಲ ಜವಾಬ್ದಾರಿಯ ಮಧ್ಯೆಯೂ, 
ಪ್ರೀತಿ ಕಾಳಜಿಗೆ ಕೊರತೆ ಮಾಡದ 
ಅಪ್ಪನ ಉಧಾರತೆ ನೆನಪಾಗಿತ್ತು.

ತನ್ನೆಲ್ಲಾ ನೋವನ್ನು ಬದಿಗಿಟ್ಟು, ನನ್ನ 
ಹೆಗಲಮೇಲೆ ಹೊತ್ತು ಕುಣಿದ ಅಪ್ಪನ 
ನೆನಪು ಅತಿಯಾಗಿ ಕಾಡಿತ್ತು.


ಆಸರೆಯ ಮಡಿಲಾಗಿದ್ದ ಅಪ್ಪ ಇಂದು 
ಜೊತೆಯಿಲ್ಲ ಎಂಬ ನೋವು ಕಣ್ಣಲ್ಲಿ, 
ಕಂಬನಿಯಾಗಿ ಜಾರಿತ್ತು..

ಅಪ್ಪನ ಅಪಾರ ಅಕ್ಕರೆ 
ಈ ಹೃದಯದಲಿ 
ಅಚ್ಚಳಿಯದೆ ಉಳಿದಿತ್ತು.
ಕವಿತಾ.ಎಚ್ 
ಎಚ್.ಎಸ್.ಎಸ್.ಬಿ ಸಿ ಎ ಕಾಲೇಜ್, ಗದಗ.

1 ಕಾಮೆಂಟ್‌:

ಬೆಳಗು...

ಕವನ     ಬೆಳಗು ಬೆಳಗು ಬಾ ಬೆಳಕು ಬೆಳದಿಂಗಳ ಬೆಳಕು ಚೆಲ್ಲುತ ರಂಗು ರಂಗಿನ ಕಾಮನಬಿಲ್ಲಿನಂತೆ ಮಿನು ಮಿನುಗುವ ಬೆಳ್ಳಿಚುಕ್ಕಿಯಂತೆ ರಂಗು ರಂಗಿನ ರಂಗೋಲಿಯಂತ...