~~~~~~~~~~~~~
ನೊಗವೆ ಲಕ್ಷ್ಮೀ ದಡಾಕಿ
ನೇಗಿಲೆನ್ನ ಪಟಾಕಿ
ಹೊಲಗತ್ತಲನು ಸೀಳಿ, ಸಿಡಿಯುತಿಹವು ನೋಡಿ!
ಕುಂಟೆ ನೆಲಗುಮ್ಮದಾಟ
ಕೂರಿಗೆಯಲಿ ರಾಕೆಟೋಟ
ಹುಳ್ಳಿಕಾಳುಗಳನು ಚೆಲ್ಲೆ, ನಕ್ಷತ್ರಕಡ್ಡಿ ಬೆಳೆದವಲ್ಲೆ!
ಎದೆಯ ಅಡರ ಬತ್ತಿ ತೀಡಿ
ಹಣೆಯ ಬೆವರ ಎಣ್ಣೆ ಹಿಂಡಿ
ಕರವೆ ಎನ್ನ ದುಡಿಮೆ ದೀಪ, ಪೊರೆದ ಬಸವರೆನ್ನ ನೃಪ!
ಭುವಿಯ ತುಂಬ ಹನುಮ ಬಾಲ
ಸಾಲುಸಾಲು ಹೂಕುಂಡ ಮೇಳ
ಸೂರ್ಯ ಕಿಡಿಯ ತಾಗಿಸಿ, ಜಗದ ದೀಪ ಬೆಳಗಿಸಿ!
ಎಲ್ಲೆಲ್ಲೂ ದೀಪಾವಳಿ! ರೈತನೆರಡು ಕಣ್ಣಬಳಿ!!
ಎಲ್ಲೆಲ್ಲೂ ದೀಪಾವಳಿ! ರೈತನೆರಡು ಕಣ್ಣಬಳಿ!!
~ ಅರಬಗಟ್ಟೆ ಅಣ್ಣಪ್ಪ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ